ಬೆಂಗಳೂರು: ರಾಜ್ಯದಲ್ಲಿ ರಾಹುಲ್ ಗಾಂಧಿ ಸಮಾವೇಶ ನಡೆಸುವ ಮುನ್ನವೇ ಹೊಸಪೇಟೆ ಕಾಂಗ್ರೆಸ್‍ನಲ್ಲಿ ಅಸಮಾಧಾನ ಸ್ಫೋಟಗೊಂಡಿದೆ.
ಮಾಜಿ ಶಾಸಕ ಹೆಚ್.ಆರ್.ಘವಿಯಪ್ಪ ಹಾಗೂ 2013 ರ ಕಾಂಗ್ರೆಸ್ ಅಭ್ಯರ್ಥಿ ಅಬ್ದುಲ್ ವಹಾಬ್ ಇಬ್ಬರೂ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಮತ್ತು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಅವರಿಗೆ ಓಪನ್ ಚಾಲೆಂಜ್ ಹಾಕಿದ್ದಾರೆ. ಬಿಜೆಪಿ ಶಾಸಕ ಆನಂದ್ ಸಿಂಗ್‍ರನ್ನು ಕಾಂಗ್ರೆಸ್ ತರುವ ವಿಚಾರವಾಗಿ ಇಬ್ಬರೂ ಸ್ಥಳೀಯ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ.
Advertisement
Advertisement
Advertisement
ಫೆಬ್ರವರಿ 10ರಂದು ನಡೆಯುವ ಎಸ್.ಟಿ. ಸಮಾವೇಶದಲ್ಲಿ ಶಾಸಕ ಆನಂದ್ ಸಿಂಗ್‍ರನ್ನು ಕಾಂಗ್ರೆಸ್ ತರುವ ಒಲವನ್ನು ನಾಯಕರು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ವಿಚಾರ ತಿಳಿದ ಸ್ಥಳೀಯ ನಾಯಕರಾದ ಅಬ್ದುಲ್ ವಹಾಬ್ ಹಾಗೂ ಘವಿಯಪ್ಪ ಅದು ಹೇಗೆ ಆನಂದ್ ಸಿಂಗ್ ರನ್ನ ಪಕ್ಷಕ್ಕೆ ಕರೆ ತರ್ತೀರಾ ನೋಡ್ತೀವಿ. ಆನಂದ್ ಸಿಂಗ್ ಚುನಾವಣೆಯಲ್ಲಿ ಹೇಗೆ ಗೆಲ್ಲುತ್ತಾರೆ ಎಂಬುದನ್ನು ನಾವು ನೋಡುತ್ತೇವೆ ಅಂತಾ ಬಹಿರಂಗ ಸವಾಲು ಹಾಕಿದ್ದಾರೆ ಎನ್ನಲಾಗಿದೆ.
Advertisement
ಈ ವಿವಾದ ಹೈಕಮಾಂಡ್ ಗೂ ತಲುಪಿದ್ದು, ರಾಹುಲ್ ಗಾಂಧಿ ಆಗಮನದ ಸಂದರ್ಭದಲ್ಲಿ ಭಿನ್ನಮತ ಸ್ಫೋಟಗೊಳ್ಳದಂತೆ ತಡೆಯಲು ಎಐಸಿಸಿ ಹಾಗೂ ಕೆಪಿಸಿಸಿ ನಾಯಕರು ಪ್ರಯತ್ನ ನಡೆಸಲು ಮುಂದಾಗುತ್ತಿದ್ದಾರೆ.