ಶ್ರೀರಂಗಪಟ್ಟಣ ಜಾಮಿಯಾ ವಿವಾದಕ್ಕೆ ಪುಸ್ತಕದಿಂದ ಟ್ವಿಸ್ಟ್ – ಅರ್ಚಕರ ಕೈ ಕತ್ತರಿಸಿ ಕಾವೇರಿಗೆ ವಿಗ್ರಹ ಎಸೆಯಲಾಗಿತ್ತು!

Public TV
3 Min Read
anjaneya swamy temple mandya book

– ಸಾಮಾಜಿಕ ಜಾಲತಾಣದಲ್ಲಿ ಪುಸ್ತಕದ ಪ್ರತಿಯ ಫೋಟೋ ವೈರಲ್
– ವಿಜಯನಗರದ ದಂಡನಾಯಕ ತಿಮ್ಮಣ್ಣನಿಂದ ಕೋಟೆ ನಿರ್ಮಾಣ

ಮಂಡ್ಯ: ದಿನದಿಂದ ದಿನಕ್ಕೆ ತಾರಕ್ಕೆ ಏರುತ್ತಿರುವ ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ವಿವಾದಕ್ಕೆ ಇದೀಗ ಪುಸ್ತಕದಿಂದ ಬಿಗ್ ಟ್ವಿಸ್ಟ್ ಸಿಕ್ಕಿದೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ವಿವಾದದ ಹೋರಾಟದ ಕಾವು ಹೆಚ್ಚುತ್ತಿರುವುದರ ಜೊತೆಗೆ ದಿನಕ್ಕೊಂದು ಮಹತ್ವದ ತಿರುವನ್ನು ಪಡೆದುಕೊಳ್ಳುತ್ತಿದೆ. ಜಾಮಿಯಾ ಮಸೀದಿಗೂ ಮೊದಲೇ ಅಲ್ಲಿ ಮೂಡಲಬಾಗಿಲು ಆಂಜನೇಯಸ್ವಾಮಿ ದೇವಸ್ಥಾನವಿತ್ತು. ಆ ದೇವಾಸ್ಥಾನ ನಾಶ ಮಾಡಿ ಟಿಪ್ಪು ಜಾಮಿಯಾ ಮಸೀದಿಯನ್ನು ನಿರ್ಮಾಣ ಮಾಡಿದ್ದಾನೆ. ಇಲ್ಲಿ ದೇವಸ್ಥಾನ ಇತ್ತು ಎಂಬ ಹಿಂದೂ ಸಂಘಟನೆಗಳ ಆರೋಪಕ್ಕೆ ಪೂರಕ ಎಂಬಂತೆ ಈ ಹಿಂದೆ ಪ್ರಕಟವಾದ ಪುಸ್ತಕ ಸಿಕ್ಕಿದೆ.

MND JAMIYA MASIDI

ಬಾಲಗಣಪತಿಭಟ್ಟ ಎಂಬವರು ಬರೆದಿರುವ ಮೂಡಲ ಬಾಗಿಲು ಶ್ರೀ ಆಂಜನೇಯಸ್ವಾಮಿ ಸುಪ್ರಭಾತ ಎಂಬ ಪುಸ್ತಕ ದೊರೆತಿದೆ. ಈ ಪುಸ್ತಕದಲ್ಲಿ ಜಾಮಿಯಾ ಮಸೀದಿಯನ್ನು ಟಿಪ್ಪು ಸುಲ್ತಾನ್ ಮೂಡಲಬಾಗಿಲು ಆಂಜನೇಯಸ್ವಾಮಿ ದೇವಸ್ಥಾನವನ್ನು ನಾಶಮಾಡಿ ನಿರ್ಮಾಣ ಮಾಡಿದ್ದಾನೆ ಎಂದು ಉಲ್ಲೇಖ ಮಾಡಲಾಗಿದೆ. ಇದನ್ನೂ ಓದಿ: ಹಿಜಬ್ ವಿದ್ಯಾರ್ಥಿನಿಯರು ಒಮ್ಮೆ ವಿದೇಶಕ್ಕೆ ಹೋಗಲಿ, ಆಗ ನಮ್ಮ ದೇಶದ ಮಹತ್ವ ಗೊತ್ತಾಗುತ್ತೆ: ಯು.ಟಿ.ಖಾದರ್ 

ಪುಸ್ತಕದಲ್ಲಿ ಏನಿದೆ?
ಶ್ರೀರಂಗಪಟ್ಟಣ ಈ ಹಿಂದೆ ದಟ್ಟ ಅರಣ್ಯ ಪ್ರದೇಶವಾಗಿತ್ತು. ಗೋಹತ್ಯೆಯ ಪಾಪಕ್ಕೊಳಗಾದ ಗೌತಮ ಋಷಿಗಳು ಇಲ್ಲಿಗೆ ಬಂದು ದೇವಸ್ಥಾನಗಳನ್ನು ಸ್ಥಾಪಿಸಿ ಪೂಜಿಸಿದ್ದರು. ಆ ವೇಳೆ ಶ್ರೀರಂಗಪಟ್ಟಣವನ್ನು ಗೌತಮ ಕ್ಷೇತ್ರ ಎಂದು ಕರೆಯಲಾಗುತ್ತಿತ್ತು. ಆ ವೇಳೆ ಮೂಡಲ ದಿಕ್ಕಿಗೆ ಗೌತಮ ಋಷಿಗಳೇ ಆಂಜನೇಯಸ್ವಾಮಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಆರಾಧನೆ ಮಾಡುತ್ತಿದ್ದರು. ಇದಾದ ನಂತರ ರಾಜಾಡಳಿತದ ರಾಜಧಾನಿಯಾದಗ ಗೌತಮ ಕ್ಷೇತ್ರ ಶ್ರೀರಂಗಪಟ್ಟಣವೆಂದು ಬದಲಾಗುತ್ತದೆ.

anjaneya swamy temple mandya book 1

ಶ್ರೀರಂಗಪಟ್ಟಣದ ಸುತ್ತ ಇರುವ ಕೋಟೆಯನ್ನು ವಿಜಯನಗರದ ದಂಡನಾಯಕ ತಿಮ್ಮಣ್ಣ ಹೆಬ್ಬಾರನಿಂದ ನಿರ್ಮಿತವಾಗಿದೆ. ಈ ವೇಳೆ ತಿಮ್ಮಣ್ಣ ಹೆಬ್ಬಾರ ಕೇವಲ ಆಂಜನೇಯಸ್ವಾಮಿ ಮೂರ್ತಿ ಇದ್ದ ಜಾಗದಲ್ಲಿ ಭವ್ಯವಾದ ಮಂದಿರವೊಂದನ್ನು ಕಟ್ಟಿಸಿದ್ದರು. ಬಳಿಕ ಇಲ್ಲಿ ಪ್ರತಿನಿತ್ಯ ಆಂಜನೇಯಸ್ವಾಮಿಯನ್ನು ಜನರು ಆರಾಧನೆ ಮಾಡುತ್ತಿದ್ದರು. ಇಂತಹ ದೇವಸ್ಥಾನಕ್ಕೆ ವಿನಾಶಕಾಲ ಬಂದಿದ್ದು, ಟಿಪ್ಪು ಸುಲ್ತಾನ್ ಕಾಲದಲ್ಲಿದೆ.

ಅರ್ಚಕರ ಕೈ ಕತ್ತರಿಸಲಾಗಿತ್ತು
ಟಿಪ್ಪು ಮೂಡಲಬಾಗಿಲು ಆಂಜನೇಯಸ್ವಾಮಿ ದೇವಸ್ಥಾನವನ್ನು ನಾಶ ಮಾಡಿ ಅರ್ಚಕರಾಗಿದ್ದ ನಾರಾಯಣಸ್ವಾಮಿ ಅವರ ಕೈಯನ್ನು ಕತ್ತರಿಸಿ, ದೇವಸ್ಥಾನದ ಒಳಭಾಗದಲ್ಲಿ ಇದ್ದ ಏಳು ಕೊಪ್ಪರಿಗೆ ಹಣ ಹಾಗೂ ಅಮೂಲ್ಯವಾದ ರತ್ನಾಭರಣಗಳನ್ನು ದೋಚಲಾಗಿದೆ. ಆ ಹಣದಿಂದಲೇ ಜಾಮಿಯಾ ಮಸೀದಿ ನಿರ್ಮಾಣ ಮಾಡಿದ್ದಾನೆ. ಇಲ್ಲಿದ್ದ ಮೂಡಲಬಾಗಿಲು ಆಂಜನೇಯಸ್ವಾಮಿ ಮೂಲ ವಿಗ್ರಹವನ್ನು ಕಾವೇರಿ ನದಿಗೆ ಎಸೆದಿದ್ದಾನೆ.

MND JAMIYA MASIDI 1

ನಾನು ನಿನ್ನ ಜೊತೆ ಬರುತ್ತೇನೆ
ಟಿಪ್ಪು ಮರಣದ ನಂತರ ಅರ್ಚಕರಾದ ನಾರಾಯಣಸ್ವಾಮಿ ಅವರು ಕಾವೇರಿ ನದಿಯಲ್ಲಿ ಹೋಗುವ ವೇಳೆ ದಿವ್ಯವಾಣಿಯೊಂದು ‘ನಾನು ನಿನ್ನ ಜೊತೆ ಬರುತ್ತೇನೆ’ ಎಂದು ಕೇಳಿಬಂದಿದೆ. ಅದೇನೂ ಎಂದು ನೋಡಿದ ವೇಳೆ ಅಲ್ಲಿ ಮೂಡಲಬಾಗಿಲು ಆಂಜನೇಯಸ್ವಾಮಿಯ ಮೂಲ ವಿಗ್ರಹ ಪತ್ತೆಯಾಗುತ್ತೆ. ನಂತರ ಶ್ರೀರಂಗಪಟ್ಟಣದ ಪೇಟೆ ಬೀದಿಯಲ್ಲಿ ಮರುಪ್ರತಿಷ್ಠಾಪನೆ ಮಾಡಿ ಆರಾಧನೆ ಮಾಡಿದರು ಎಂದು ಬಾಲಗಣಪತಿಭಟ್ಟ ಅವರು ಈ ಪುಸ್ತಕದಲ್ಲಿ ಬರೆದಿದ್ದಾರೆ.

anjaneya swamy temple mandya book 2

ಜಾಮಿಯಾ ಮಸೀದಿಯಲ್ಲಾ, ಮಂದಿರಾ ಎಂದು ಹೋರಾಟ ನಡೆಸುತ್ತಿರುವ ವೇಳೆ ಈ ಪುಸ್ತಕ ದೊರೆತಿರುವುದು ಸಂಚಲನ ಮೂಡಿಸಿದೆ. ದೊರೆತಿರುವ ಪುಸ್ತಕವಾದ್ರು ಯಾವ ಕಾಲ ಘಟ್ಟದ್ದೂ, ಆ ಪುಸ್ತಕದಲ್ಲಿ ಬರೆದಿರುವ ವಿಚಾರಗಳ ಸತ್ಯ ಸತ್ಯತೆಗಳ ಬಗ್ಗೆ ಸರ್ಕಾರ ಪರೀಶಿಲಸಬೇಕಿದೆ. ಇದನ್ನೂ ಓದಿ:  ಬೈಕರ್ ಗುಂಪಿನೊಂದಿಗೆ ಮಾತಿನ ಚಕಮಕಿ – ಸವಾರನಿಗೆ ಬೇಕೆಂದು ಸ್ಕಾರ್ಪಿಯೋ ಡಿಕ್ಕಿ 

ಇಲ್ಲಿರುವ ದೇವಸ್ಥಾನದ ಮಾದರಿಯ ಕಂಬಗಳು, ಕೆತ್ತನೆಗಳು, ಕಲ್ಯಾಣಿ, ಬಾವಿ, ಗೋಪುರದ ಕಳಶಗಳನ್ನು ನೋಡಿ ಇದು ದೇವಸ್ಥಾನ ಎಂದು ತಿಳಿಯುತ್ತದೆ. ಹೀಗಾಗಿ ಈ ಬಗ್ಗೆ ಸೂಕ್ತ ತನಿಖೆ ನಡೆಸಿ ನಮಗೆ ಮತ್ತೆ ಜಾಮಿಯಾ ಬಳಿ ಮೂಡಲಬಾಗಿಲು ಆಂಜನೇಯಸ್ವಾಮಿ ದೇವಸ್ಥಾನವನ್ನು ಪ್ರತಿಷ್ಠಾಪನೆ ಮಾಡಬೇಕೆಂದು ಹಿಂದೂಪರ ಸಂಘಟನೆಗಳು ಹೋರಾಟಗಳನ್ನು ಆರಂಭಿಸಿದೆ. ಈ ಹೋರಾಟವನ್ನು ನ್ಯಾಯಾಲಯದ ಜೊತೆಗೆ ಪ್ರತಿಭಟನೆಯ ರೂಪದಲ್ಲಿ ಹೋರಾಟ ನಡೆಸುತ್ತಿವೆ.

Share This Article
Leave a Comment

Leave a Reply

Your email address will not be published. Required fields are marked *