Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ತಾಜಾ ಸಮಾಚಾರ ಕೇಳಿ ಎಂದ ಟೀಮ್
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Cinema | ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ತಾಜಾ ಸಮಾಚಾರ ಕೇಳಿ ಎಂದ ಟೀಮ್

Cinema

‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ತಾಜಾ ಸಮಾಚಾರ ಕೇಳಿ ಎಂದ ಟೀಮ್

Public TV
Last updated: March 25, 2024 4:25 pm
Public TV
Share
2 Min Read
Vidyarthi Vidyarthiniyare 4 1
SHARE

ಅರುಣ್ ಅಮುಕ್ತ (Arun Amukta) ನಿರ್ದೇಶನದ, ಚಂದನ್ ಶೆಟ್ಟಿ (Chandan Shetty) ನಾಯಕನಾಗಿ ನಟಿಸಿರುವ `ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ (Vidyarthi Vidyarthiniyare) ಚಿತ್ರವೀಗ ಯಶಸ್ವಿಯಾಗಿ ಚಿತ್ರೀಕರಣ ಮುಗಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಒಂದು ಅಚ್ಚುಕಟ್ಟಾದ ಪತ್ರಿಕಾಗೋಷ್ಠಿಯ ಮೂಲಕ ಮಾಧ್ಯಮಗಳನ್ನು ಮುಖಾಮುಖಿಯಾಗಿರುವ ಚಿತ್ರತಂಡ ಖುಷಿಯನ್ನು ಹಂಚಿಕೊಂಡಿದೆ. ಒಟ್ಟಾರೆ ಸಿನಿಮಾ ಬಗ್ಗೆ, ಮುಂದಿನ ಕಾರ್ಯವೈಖರಿಗಳ ಬಗ್ಗೆ ಒಂದಷ್ಟು ವಿಚಾರಗಳನ್ನು ವಿನಿಮಯ ಮಾಡಿಕೊಂಡಿದೆ. ಚಿತ್ರೀಕರಣ ಶುರುವಾದಲ್ಲಿಂದ ಮೊದಲ್ಗೊಂಡು, ಇಲ್ಲಿಯವರೆಗೂ ನಿರ್ದೇಶಕರು ಅತ್ಯಂತ ಕ್ರಿಯಾಶೀಲವಾಗಿ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡು ಬಂದಿದ್ದಾರೆ. ಈ ಪತ್ರಿಕಾ ಗೋಷ್ಠಿಯನ್ನೂ ಕೂಡಾ ಅದರ ಭಾಗವೆಂಬಂಥಾ ಫೀಲ್ ಹುಟ್ಟಿಸುವಂತೆ ಚಿತ್ರತಂಡ ಆಯೋಜಿಸಿದ್ದದ್ದು ವಿಶೇಷ.

Vidyarthi Vidyarthiniyare 2 1

ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರದಲ್ಲಿ ಪಾತ್ರಗಳನ್ನು ನಿರ್ವಹಿಸಿರುವ ಪ್ರಶಾಂತ್ ಸಂಬರ್ಗಿ, ಹಿರಿಯ ನಟಿ ಭವ್ಯಾ, ಸುನೀಲ್ ಪುರಾಣಿಕ್, ರಘು ರಾಮನಕೊಪ್ಪ ಮುಂತಾದವರು ಈ ಪತ್ರಿಕಾ ಗೋಷ್ಠಿಯಲ್ಲಿ ಭಾಗಿಯಾಗಿದ್ದರು. ಅವರೆಲ್ಲರೂ ಸಿನಿಮಾದ ಬಗ್ಗೆ, ಚಿತ್ರತಂಡ ಮತ್ತು ಚಿತ್ರೀಕರಣದ ಅನುಭವಗಳ ಬಗ್ಗೆ ಮನಬಿಚ್ಚಿ ಮಾತಾಡಿದ್ದಾರೆ. ಈ ಮೂಲಕ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರದ ಬಗ್ಗೆ ಮತ್ತಷ್ಟು ಕುತೂಹಲ ಮೂಡಿಕೊಳ್ಳುವಂತೆ ಮಾಡಿದ್ದಾರೆ. ಇದೇ ವೇದಿಕೆಯಲ್ಲಿ ಪಾತ್ರಗಳನ್ನು ಪರಿಚಯಿಸುವ ವಿಡಿಯೋ ಮತ್ತು ತಾಂತ್ರಿಕ ವರ್ಗವನ್ನು ಪರಿಚಯಿಸೋ ವೀಟಿಯನ್ನು ಮಾಧ್ಯಮ ಪ್ರತಿನಿಧಿಗಳ ಮುಂದೆ ಪ್ರದರ್ಶಿಸಲಾಯಿತು.

Vidyarthi Vidyarthiniyare 3 1

ನಿರ್ದೇಶಕ ಅರುಣ್ ಅಮುಕ್ತ ಪಕ್ಕಾ ಪ್ಲಾನ್ ಮಾಡಿಕೊಂಡು, ಅಂದುಕೊಂಡಂತೆಯೇ ಚಿತ್ರೀಕರಣ ಮುಗಿಸಿಕೊಂಡಿದ್ದಾರೆ. ಬೆಂಗಳೂರು, ಮೈಸೂರು, ಮಂಗಳೂರು, ಚಿಕ್ಕಮಗಳೂರು ಮುಂತಾದೆಡೆಗಳಲ್ಲಿ ಅವ್ಯಾಹತವಾಗಿ ಐವತ್ತು ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ ಎಂದು ಕಾರ್ಯಕಾರಿ ನಿರ್ಮಾಪಕ ಶ್ರೀಕಾಂತ್ ಜಿ ಕಶ್ಯಪ್ ಮಾಹಿತಿ ನೀಡಿದರು. ಕುಂಬಳ ಕಾಯಿ ಒಡೆದಾದ ನಂತರದಲ್ಲೀಗ ಬಿರುಸಿನಿಂದ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳಿಗೆ ಚಾಲನೆ ಸಿಕ್ಕಿದೆ. ಜೂನ್ ಹೊತ್ತಿಗೆಲ್ಲ ಎಲ್ಲ ಕೆಲಸ ಕಾರ್ಯಗಳನ್ನೂ ಮುಗಿಸಿಕೊಂಡು, ಲೋಕಸಭಾ ಚುನಾವಣಾ ಫಲಿತಾಂಶ ಬಂದ ಬೆನ್ನಲ್ಲಿಯೇ ಈ ಸಿನಿಮಾ ಬಿಡುಗಡೆಗೊಳಿಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

Vidyarthi Vidyarthiniyare 1 1

ಸಂಗೀತ ನಿರ್ದೇಶಕ, ಗಾಯಕ ಚಂದನ್ ಶೆಟ್ಟಿ ಇದೀಗ ನಾಯಕ ನಟನಾಗಿಯೂ ರೂಪಾಂತರಗೊಂಡಿದ್ದಾರೆ. ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರದಲ್ಲಂತೂ ಅವರದ್ದು ಭಿನ್ನ ಶೇಡುಗಳನ್ನು ಹೊಂದಿರುವ ಪಾತ್ರವಂತೆ. ಅವರ ಪಾತ್ರಕ್ಕೆ ಮೂರು ಆಯಾಮಗಳಿವೆ. ಆ ಮೂರೂ ಪಾತ್ರಗಳಿಗಾಗಿ ಅವರು ತಿಂಗಳಳುಗಟ್ಟಲೆ ಶ್ರಮವಹಿಸಿ ತಯಾರಿ ನಡೆಸಿದ್ದಾರೆ. ಆ ಮೂರೂ ಶೇಡುಗಳ ಒಂದಕ್ಕೊಂದು ತದ್ವಿರುದ್ಧ ದಿಕ್ಕಿನವುಗಳು. ಚಂದನ್ ಅಸಲೀ ವ್ಯಕ್ತಿತ್ವಕ್ಕೆ ವಿರುದ್ಧವಾಗಿರೋ ಆ ಪಾತ್ರಗಳನ್ನು ನಿಭಾಯಿಸೋದು ಸವಾಲಾಗಿತ್ತಂತೆ. ಆದರೆ, ಅವಿರತವಾದ ಶ್ರಮದಿಂದ, ಅದೆಲ್ಲದಕ್ಕೂ ನ್ಯಾಯ ಸಲ್ಲಿಸಿದ ಖುಷಿ ಚಂದನ್ ಅವರಲ್ಲಿದೆ. ಆ ಬಗ್ಗೆ ಚಿತ್ರತಂಡದಲ್ಲೂ ಒಂದು ಮೆಚ್ಚುಗೆ ಇದ್ದೇ ಇದೆ.

 

ಅರುಣ್ ಅಮುಕ್ತ ಪಾಲಿಗಿದು ಮಹತ್ವಾಕಾಂಕ್ಷೆಯ ಚಿತ್ರ. ತಾರಾ ಬಳಗ, ತಾಂತ್ರಿಕತೆ ಸೇರಿದಂತೆ ಎಲ್ಲ ದಿಕ್ಕಿನಲ್ಲಿಯೂ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರ ಭಿನ್ನವಾಗಿ ಮೂಡಿ ಬಂದಿವೆ ಎಂಬುದು ಚಿತ್ರತಂಡದ ಭರವಸೆ. ಸುಬ್ರಮಣ್ಯ ಕುಕ್ಕೆ ಮತ್ತು ಎ.ಸಿ ಶಿವಲಿಂಗೇಗೌಡ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಕುಮಾರ್ ಗೌಡ ಛಾಯಾಗ್ರಹಣ, ಭರ್ಜರಿ ಚೇತನ್ ಮತ್ತು ವಾಸುಕಿ ವೈಭವ್ ಸಾಹಿತ್ಯ, ಪವನ್ ಗೌಡ ಸಂಕಲನ, ಟೈಗರ್ ಶಿವು, ನರಸಿಂಹ ಸಾಹಸ ನಿರ್ದೇಶನ ಈ ಚಿತ್ರಕ್ಕಿರಲಿದೆ. ಅಮರ್, ಭಾವನಾ, ಮಾನಸಿ, ಮನೋಜ್ ವಿವಾನ್, ಭವ್ಯ, ಸುನೀಲ್ ಪುರಾಣಿಕ್, ಅರವಿಂದ ರಾವ್, ಸಿಂಚನಾ, ರಘು ರಾಮನಕೊಪ್ಪ, ಪ್ರಶಾಂತ್ ಸಂಬರ್ಗಿ, ಕಾಕ್ರೋಚ್ ಸುಧಿ ಮುಂತಾದವರು ನಟಿಸಿದ್ದಾರೆ. ಇನ್ನುಳಿದಂತೆ ವಿಜೇತ್ ಕೃಷ್ಣ, ವಾಸು ದೀಕ್ಷಿತ್ ಮತ್ತು ಶಶಾಂಕ್ ಶೇಷಗಿರಿ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.

TAGGED:Arun AmuktaChandan ShettyVidyarthi Vidyarthiniyareಅರುಣ್ ಅಮುಕ್ತಚಂದನ್ ಶೆಟ್ಟಿವಿದ್ಯಾರ್ಥಿ ವಿದ್ಯಾರ್ಥಿನಿಯರೇ
Share This Article
Facebook Whatsapp Whatsapp Telegram

Cinema news

Toxic
ಕೊನೇ ಕ್ಷಣದಲ್ಲಿ ಫ್ಯಾನ್ಸ್‌ಗೆ ಶಾಕ್ ಕೊಟ್ಟ ಯಶ್ – ಮಾ.19ಕ್ಕೆ ರಿಲೀಸ್‌ ಆಗಲ್ಲ ʻಟಾಕ್ಸಿಕ್ʼ – ಮತ್ಯಾವಾಗ?
Bollywood Cinema Latest Main Post Sandalwood
mandana Karimi
ಇಲ್ಲಿನ ಜನ ನನ್ನನ್ನ ತುಚ್ಛವಾಗಿ ನಿಂದಿಸಿದ್ದಾರೆ, ಆಡಳಿತ ಬದಲಾದ ಬಳಿಕ ಇರಾನ್‌ಗೆ ತೆರಳುತ್ತೇನೆ – ನಟಿ ಮಂದನಾ ಕರಿಮಿ
Bollywood Cinema Latest National Top Stories
samhita vinya
ಲಕ್ಕಿ ಹೀರೋಯಿನ್ ಸಂಹಿತಾ ವಿನ್ಯಾ ಮಿಂಚಿಂಗು
Cinema Latest Sandalwood Top Stories
Rakshita Prem and saptami gowda
ಪಾಪರಾಜಿಗಳ ವಿರುದ್ಧ ಸಿಡಿದೆದ್ದ ಚಂದನವನದ ತಾರೆಯರು
Cinema Latest Sandalwood Top Stories

You Might Also Like

homestay gokarna
Latest

ವಿದೇಶಿ‌ ಟೂರಿಸ್ಟ್ ಮಾಹಿತಿ ನೀಡದ ಹೋಂ ಸ್ಟೇ; FIR ದಾಖಲಿಸಿದ ಪೋಲಿಸರು

Public TV
By Public TV
14 minutes ago
teacher dies of heart attack in classroom in hassan
Districts

ಪಾಠ ಮಾಡುತ್ತಿದ್ದಾಗಲೇ ಶಿಕ್ಷಕನಿಗೆ ಹೃದಯಾಘಾತ – ವಿದ್ಯಾರ್ಥಿಗಳ ಎದುರೇ ದುರ್ಮರಣ

Public TV
By Public TV
26 minutes ago
Aga Syed Ruhullah Mehdi Kashmir MP
Latest

ಖಮೇನಿ ಹತ್ಯೆ ಪ್ರತಿಭಟನೆಗಳ ಬಗ್ಗೆ ಪೋಸ್ಟ್‌ – ಕಾಶ್ಮೀರ ಸಂಸದರ ವಿರುದ್ಧ ಎಫ್‌ಐಆರ್‌

Public TV
By Public TV
38 minutes ago
IRGC
Latest

ಕತಾರ್‌ನಲ್ಲಿ 10 ಶಂಕಿತ ಐಆರ್‌ಜಿಸಿ ಗೂಢಚಾರರ ಬಂಧನ

Public TV
By Public TV
1 hour ago
Chandan Kumar Shootout at Canada Accused
Bengaluru City

ಕೆನಡಾದಲ್ಲಿ ಕನ್ನಡಿಗನ ಗುಂಡಿಟ್ಟು ಹತ್ಯೆ ಪ್ರಕರಣ – ಆರೋಪಿ ಭಾವಚಿತ್ರ ಬಿಡುಗಡೆ ಮಾಡಿದ ಟೊರಂಟೊ ಪೊಲೀಸರು

Public TV
By Public TV
2 hours ago
Team India 1 1
Cricket

ಇಂದಿನಿಂದ T20 ವಿಶ್ವಕಪ್‌ ಸೆಮಿಸ್‌ ಕದನ – ಸತತ 3ನೇ ಬಾರಿ ಭಾರತಕ್ಕೆ ಆಂಗ್ಲರೇ ಎದುರಾಳಿ!

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?