– ಇತ್ತ ಬೊಮ್ಮಾನಹಳ್ಳಿಯಲ್ಲೂ ಒಂದು ಕೇಸ್
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸದ್ಯ ಕಾಲರಾ ಸೋಂಕಿನ ಭೀತಿ ಎದುರಾಗಿದೆ. ನಗರದ ಬಿಎಂಸಿ ಹಾಸ್ಟೆಲ್‍ನಲ್ಲಿ (BMC Hostel) ಇಬ್ಬರಿಗೆ ಕಾಲರಾ ದೃಢವಾಗಿದ್ದು, ಈ ಹಿನ್ನೆಲೆಯಲ್ಲಿ ಭಯಗೊಂಡ ಉಳಿದ ವಿದ್ಯಾರ್ಥಿಗಳು ಹಾಸ್ಟೆಲ್ ಖಾಲಿ ಮಾಡುತ್ತಿದ್ದಾರೆ.
Advertisement
ಬಿಎಂಸಿ ಹಾಸ್ಟೆಲ್‍ನ ಅಸ್ವಸ್ಥ 49 ವಿದ್ಯಾರ್ಥಿಗಳ ಪೈಕಿ 22 ವಿದ್ಯಾರ್ಥಿನಿಯರ ಕಾಲರಾ ಕಲ್ಚರ್ ಟೆಸ್ಟ್ ವರದಿ ಕೈ ಸೇರಿದ್ದು, ಇಬ್ಬರಲ್ಲಿ ಕಾಲರಾ (Cholera Disease) ಪತ್ತೆಯಾಗಿದೆ. ಉಳಿದವರ ವರದಿ ನಾಳೆ ಕೈಸೇರಲಿದ್ದು, ಮತಷ್ಟು ಆತಂಕ ಹೆಚ್ಚಿದೆ. ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದ ಹಾಸ್ಟೆಲ್ 21 ವಿದ್ಯಾರ್ಥಿಗಳು ಇಂದು ಡಿಸ್ಚಾರ್ಜ್ ಆಗಲಿದ್ದಾರೆ. ಇನ್ನುಳಿದ ವಿದ್ಯಾರ್ಥಿಗಳಿಗೆ ಚಿಕಿತ್ಸೆ ಮುಂದುವರಿಕೆಯಾಗಲಿದೆ. ಸದ್ಯ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿಗಳ ಆರೋಗ್ಯ ಸ್ಥಿರವಾಗಿದ್ದು, ಇಬ್ಬರು ವಿದ್ಯಾರ್ಥಿನಿಯರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಪೋಷಕರೇ ಎಚ್ಚರ ಶುರುವಾಗ್ತಿದೆ ಕಾಲರಾ- ಮಕ್ಕಳ ಆರೋಗ್ಯದ ಕಡೆ ಇರಲಿ ಗಮನ
Advertisement
Advertisement
ಕಾಲರಾ ಸೋಂಕು ಭೀತಿಯಿಂದ ಕೆಲವು ಮೆಡಿಕಲ್ ವಿದ್ಯಾರ್ಥಿನಿಯರು ಲಗೇಜ್ ಸಮೇತ ಹಾಸ್ಟೆಲ್ ಖಾಲಿ ಮಾಡಿದರೆ ಇನ್ನೂ ಕೆಲವರು ಬೇರೆ ಹಾಸ್ಟೆಲ್‍ಗೆ ಶಿಫ್ಟ್ ಆಗುತ್ತಿದ್ದಾರೆ. ಉಳಿದುಕೊಂಡ ವಿದ್ಯಾರ್ಥಿನಿಯರು ಆಹಾರಕ್ಕಾಗಿ ಸ್ವಿಗ್ಗಿ, ಝೋಮೆಟೋ ಮೊರೆ ಹೋಗುತ್ತಿದ್ದಾರೆ. ಕಾಲರಾ ಪತ್ತೆ ಬೆನ್ನಲ್ಲೇ ಪೋಷಕರು ಕೂಡ ಆತಂಕದಿಂದ ಮನೆಗೆ ಬರುವಂತೆ ಒತ್ತಾಯ ಮಾಡುತ್ತಿದ್ದಾರೆ. ಹಾಸ್ಟೆಲ್ ನಿಂದ ಸ್ವಲ್ಪ ದಿನಕ್ಕಾಗಿ ಮನೆ ಹಾಗೂ ಬೇರೆಡೆ ಇರಲು ಬ್ಯಾಗ್ ಸಮೇತ ವಿದ್ಯಾರ್ಥಿನಿಯರು ಹೋಗುತ್ತಿದ್ದಾರೆ. ಕೆಲವರು ಊರಿಗೆ ತೆರಳಿದರೆ, ಅನೇಕರು ಸಂಬಂಧಿಕರು, ಸ್ನೇಹಿತರ ಮನೆಗೆ ಹೋಗುತ್ತಿದ್ದಾರೆ.
Advertisement
ಇತ್ತ ಆಡಳಿತ ಮಂಡಳಿಯು ವಾರದೊಳಗೆ ಹಾಸ್ಟೆಲ್ ನ ಸಮಸ್ಯೆ ಸರಿಪಡಿಸೋದಾಗಿ ಹೇಳಿದೆ. ಆದರೆ ಕುಡಿಯುವ ನೀರಿನ ಸಮಸ್ಯೆ, ಸರಿಯಾದ ಊಟದ ವ್ಯವಸ್ಥೆ ಇಲ್ಲದಿದ್ದರಿಂದ ಸಮಸ್ಯೆ ಬಗೆಹರಿಯೋವರೆಗೂ ಬೇರೆಡೆ ಇರಲು ವಿದ್ಯಾರ್ಥಿನಿಯರು ನಿರ್ಧಾರ ಮಾಡಿದ್ದಾರೆ.
ಬೊಮ್ಮನಹಳ್ಳಿಯಲ್ಲಿಯಲ್ಲೂ ಪತ್ತೆ: ಇತ್ತ ಬೊಮ್ಮನಹಳ್ಳಿಯಲ್ಲಿ ಕೂಡ ಒಂದು ಕಾಲರಾ ಕೇಸ್ ಪತ್ತೆಯಾಗಿದೆ. 35 ವರ್ಷದ ವ್ಯಕ್ತಿಗೆ ಕಾಲರಾ ಇರೋದು ದೃಢಪಟ್ಟಿದೆ. ವೃತ್ತಿಯಲ್ಲಿ ಇವರು ಚಾಲಕರಾಗಿದ್ದಾರೆ.