ಬೆಂಗಳೂರು: ಇಂದಿನ ಮಕ್ಕಳಿಗೆ ಪೋಷಕರಾಗಲಿ, ಶಿಕ್ಷಣ ಕಲಿಸಿಕೊಡುವ ಗುರುಗಳಾಗಲಿ ಏನು ಅನ್ನುವಂತೆಯೇ ಇಲ್ಲ. ಸಣ್ಣ ಪುಟ್ಟದ್ದಕ್ಕೆಲ್ಲಾ ಜೀವ ಕಳೆದುಕೊಳ್ಳುವ ಮಟ್ಟಿಗೆ ಯೋಚಿಸಿಬಿಟ್ಟಿರ್ತಾರೆ. ಟೀಚರ್ ಹೊಡೆದ್ರು ಅಂತಾ ಪ್ರತಿಭಾನ್ವಿನ ವಿದ್ಯಾರ್ಥಿನಿಯೊಬ್ಬಳು (SSLC Student) ಶಾಲೆಯ 3ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿರೊ ಘಟನೆ ಬೆಂಗಳೂರಿನಲ್ಲಿ ನಡೆದಿದೆ ನೋಡಿ..
Advertisement
ಆಕೆ ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿನಿ. ಈ ಬಾರಿ SSLC ಯಲ್ಲಿ ಓದುತ್ತಿದ್ದಳು. ಇವತ್ತು ಏನೊ ತಪ್ಪು ಮಾಡಿದ್ಲು ಅಂತಾ ಟೀಚರ್ ಒಂದೆರಡು ಏಟು ಹೊಡೆದಿದ್ದಾರೆ. ಅಷ್ಟಕ್ಕೇ ಶಾಲೆಯ 3ನೇ ಫ್ಲೋರ್‌ನ ಕಟ್ಟಡದಿಂದ ಜಿಗಿದು ಬಾಲಕಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಬ್ಯಾಟರಾಯನಪುರ ಪೊಲೀಸ್ ಠಾಣಾ (Byatarayanapura Police Station) ವ್ಯಾಪ್ತಿಯ ಬಾಪೂಜಿನಗರದಲ್ಲಿಂದು ಮಧ್ಯಾಹ್ನ 1 ಗಂಟೆಗೆ ನಡೆದಿದೆ. ಹೀಗೆ ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿಹ ಹೆಸ್ರು ಫರಿಯಾ ಖಾನಂ. ಇದನ್ನೂ ಓದಿ: ಸಿದ್ದರಾಮಯ್ಯ ಸಂಡೇ ಲಾಯರ್, ರಾಹುಲ್ ಗಾಂಧಿ ಮೌನ ಏಕೆ?: ಛಲವಾದಿ ನಾರಾಯಣಸ್ವಾಮಿ ಕಿಡಿ
Advertisement
Advertisement
ಶಾಮಣ್ಣ ಗಾರ್ಡನ್ ನಿವಾಸಿಯಾಗಿರುವ ಫರಿಯಾ, ಅಲ್ ಫಹದ್ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದಳು. ಇಂದು (ಶುಕ್ರವಾರ) ಮಧ್ಯಾಹ್ನ 1.30ರ ಸುಮಾರಿಗೆ ಶಾಲಾ ಕಟ್ಟಡದ ಮೂರನೇ ಮಹಡಿಯಿಂದ ವಿದ್ಯಾರ್ಥಿನಿ ಜಿಗಿದಿದ್ದಾಳೆ. ಬಳಿಕ ಗಂಭೀರ ಗಾಯಗೊಂಡ ಪರಿಣಾಮ ಸ್ಥಳೀಯರು ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಉಕ್ರೇನ್‌ಗೆ ಮೋದಿ ಭೇಟಿ – ಝೆಲೆನ್ಸ್ಕಿ ಜೊತೆ ಮಾತುಕತೆ; ಯುದ್ಧದಲ್ಲಿ ಮಡಿದ ಮಕ್ಕಳ ಸ್ಮಾರಕ ವೀಕ್ಷಿಸಿದ ಪ್ರಧಾನಿ!
Advertisement
ಸ್ಥಳಕ್ಕೆ ಬಂದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೂರನೇ ಮಹಡಿಯಿಂದ ಕೆಳಗೆ ಬಿದ್ದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪ್ರಾಂಶುಪಾಲರು ಬೈದ್ದಿದರಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂಬ ಶಂಕೆ ವ್ಯಕ್ತವಾಗಿದೆ. ಪೋಷಕರು ದೂರು ನೀಡಿದ ಬಳಿಕ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ವಿರುದ್ಧ ಮೊದಲ ಚಾರ್ಜ್‌ಶೀಟ್ ಸಲ್ಲಿಕೆ – 2,144 ಪುಟಗಳ ದೋಷಾರೋಪ ಪಟ್ಟಿಯಲ್ಲೇನಿದೆ?