ಈಗಾಗಲೇ ಕನ್ನಡದಲ್ಲಿ ಸಾಕಷ್ಟು ಬಯೋಪಿಕ್ ಚಿತ್ರಗಳು ಬಂದಿವೆ. ಆ ಸಾಲಿಗೆ ಮತ್ತೊಂದು ಸಿನಿಮಾ ಸೇರಲಿದೆ. ಇದು ಪೂರ್ಣ ಪ್ರಮಾಣದಲ್ಲಿ ಬಯೋಪಿಕ್ ಅಲ್ಲದೇ, ಇದ್ದರೂ, ಮಾಜಿ ರೌಡಿ, ಹಾಲಿ ಕನ್ನಡಪರ ಹೋರಾಟಗಾರನೊಬ್ಬನ ಕಥೆಯನ್ನು ಚಿತ್ರ ಮಾಡಲಾಗುತ್ತಿದೆ. ಆದರೆ, ಆ ಡಾನ್ ಯಾರು? ಏನು ಕಥೆ ಎನ್ನುವ ವಿಚಾರ ಮಾತ್ರ ಚಿತ್ರತಂಡ ಗುಟ್ಟಾಗಿ ಇಟ್ಟಿದೆ. ಇದನ್ನೂ ಓದಿ : ನನ್ನ ಮುಗಿಸ್ಬಿಡ್ತೀನಿ ಅಂತಾನೆ: ಗಂಭೀರ ಆರೋಪ ಮಾಡಿದ ನಟಿ ಸಂಜನಾ
Advertisement
ಭೂಗತ ಜಗತ್ತಿನ ಚಟುವಟಿಕೆಯಲ್ಲಿದ್ದ ಕೆಲವರು ಕನ್ನಡ ಪರ ಸಂಘಟನೆ ಕಟ್ಟಿಕೊಂಡು, ಹೋರಾಟ ಮಾಡುತ್ತಿರುವುದು ಗುಟ್ಟಿನ ಸಂಗತಿಯೇನಲ್ಲ. ಆದರೆ, ಈ ಸಿನಿಮಾ ಯಾರ ಕುರಿತಾದದ್ದು ಎನ್ನುವುದೇ ಸಸ್ಪೆನ್ಸ್. ಇದನ್ನೂ ನೋಡಿ : ನಟ ಚೇತನ್‌ಗೆ ನೀಡಿದ್ದ ಗನ್ ಮ್ಯಾನ್ ಹಿಂಪಡೆದ ಸರ್ಕಾರ
Advertisement
Advertisement
ಗುರು ದೇಶಪಾಂಡೆ ಸಾರಥ್ಯದಲ್ಲಿ ಪೆಂಟಗನ್ ಸಿನಿಮಾ ಮೂಡಿ ಬರುತ್ತಿದೆ. ಐದು ಜನ ನಿರ್ದೇಶಕರು, ಐದು ಕಥೆಗಳನ್ನು ಈ ಸಿನಿಮಾದಲ್ಲಿ ಹೇಳುತ್ತಿದ್ದಾರೆ. ಆ ಐದು ಕಥೆಗಳಲ್ಲಿ ಒಂದು ಕನ್ನಡ ಪರ ಹೋರಾಟಗಾರನ ಕುರಿತಾದದ್ದುಆಗಿದೆ ಎನ್ನುವುದು ವಿಶೇಷ. ಇದನ್ನೂ ಓದಿ : ಪ್ರಭಾಸ್‍ಗೆ ಮಿರ್ಚಿ ಪ್ರಶ್ನೆ ಕೇಳಿದ ದೀಪಿಕಾ ಪಡುಕೋಣೆ!
Advertisement
ಚೂರಿಕಟ್ಟೆ ಖ್ಯಾತಿಯ ರಾಘು ಶಿವಮೊಗ್ಗ, ಆಕಾಶ್ ಶ್ರೀವತ್ಸ, ಚಂದ್ರ ಮೋಹನ್, ಕಿರಣ್ ಕುಮಾರ್ ತಲಾ ಒಂದೊಂದು ಕಥೆಗೆ ನಿರ್ದೇಶನ ಮಾಡಿದ್ದರೆ, ಕನ್ನಡ ಪರ ಹೋರಾಟಗಾರನ ಕಥೆಗೆ ಗುರು ದೇಶಪಾಂಡೆ ನಿರ್ದೇಶಕರು. ಇದನ್ನೂ ಓದಿ: ಭಾಸ್ಕರ್.ವಿ.ರೆಡ್ಡಿ ಕ್ಯಾಮೆರಾ ಕಣ್ಣಲ್ಲಿ ಸೆರೆಯಾದ ಮ್ಯೂಸಿಕಲ್ ಲವ್ ಸ್ಟೋರಿ ಸಿನಿಮಾ ‘ಮೈಸೂರು
ಈಗಾಗಲೇ ನಾಲ್ಕೂ ಕಥೆಗಳ ಚಿತ್ರೀಕರಣ ಮುಗಿದಿದ್ದು, ಐದನೇ ಕಥೆಯಾದ ಕನ್ನಡ ಪರ ಹೋರಾಟಗಾರನ ಕಥೆಯ ಚಿತ್ರೀಕರಣ ಕೂಡ ಕೊನೆಯ ಹಂತದಲ್ಲಿದೆ. ಈ ಪಾತ್ರವನ್ನು ಖ್ಯಾತ ನಟ ಕಿಶೋರ್ ಮಾಡುತ್ತಿದ್ದಾರೆ. ಅಲ್ಲದೇ, ಕರ್ನಾಟಕ ರಕ್ಷಣಾ ವೇದಿಕೆಯಲ್ಲಿ ಗುರುತಿಸಿಕೊಂಡಿರುವ, ನಟಿ ಅಶ್ವಿನಿ ಗೌಡ ಕೂಡ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ.