ಬೆಂಗಳೂರು: ಸಿಎಂ ಸಿದ್ದರಾಮಯ್ಯ (Siddaramaiah) ಅವರಿಂದು 14ನೇ ಬಾರಿ ಬಜೆಟ್ (Budget 2023) ಮಂಡನೆ ಮಾಡುತ್ತಿದ್ದಾರೆ. ಈ ಬಜೆಟ್ನಲ್ಲಿ ಗ್ಯಾರಂಟಿಗಳೇ ಸವಾಲುಗಳಾಗಿವೆ. ಹಾಗಾಗಿ ಗ್ಯಾರಂಟಿಗಳನ್ನ ಜಾರಿಗೆ ಅನುದಾನ ಸರಿದೂಗಿಸುವ ಜೊತೆಗೆ ಹೊಸ ಭರವಸೆಗಳನ್ನು ಹುಟ್ಟಿಸುತ್ತಾ ಅನ್ನೋದು ಕುತೂಹಲವಾಗಿದೆ.
5 ಗ್ಯಾರಂಟಿ ಅನುಷ್ಠಾನದ ಹೊರೆಯೊಂದಿಗೆ ಆರ್ಥಿಕ ವ್ಯವಸ್ಥೆ ಸರಿದೂಗಿಸುವ ಜವಬ್ದಾರಿಯೂ ಸಿದ್ದರಾಮಯ್ಯ ಅವರ ಮೇಲಿದೆ. ಸಿಎಂ ಸಿದ್ದರಾಮಯ್ಯ ಮುಂದಿರುವ ಆರ್ಥಿಕ ಸಂಕಷ್ಟದ ಸವಾಲಿನಲ್ಲಿ ಬಜೆಟ್ ಗಾತ್ರ ಮತ್ತು ರಾಜ್ಯದ ಸಾಲದ ಹೊರೆ ಎರೆಡು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಇಂದು 14ನೇ ಬಜೆಟ್ ಮಂಡಿಸಲಿರುವ ಸಿಎಂ- ಗ್ಯಾರಂಟಿ ಮಧ್ಯೆ ಹೆಚ್ಚಿದ ನಿರೀಕ್ಷೆ
Advertisement
Advertisement
ಕಳೆದ ಬಾರಿ ಸಿಎಂ ಆಗಿದ್ದ ಬಸವರಾಜ್ ಬೊಮ್ಮಾಯಿಯವರಿಂದ 3.09 ಲಕ್ಷ ಕೋಟಿ ಗಾತ್ರದ ಬಜೆಟ್ ಮಂಡನೆಯಾಗಿತ್ತು. ಈ ಬಾರಿ ಸಿದ್ದರಾಮಯ್ಯ ಮಂಡಿಸುವ ಬಜೆಟ್ ಗಾತ್ರ 3 ಲಕ್ಷಣ 35 ಸಾವಿರದಿಂದ 40 ಸಾವಿರ ಕೋಟಿವರೆಗೂ ಹೆಚ್ಚಬಹುದು ಎಂದು ಅಂದಾಜಿಸಲಾಗಿದೆ. 2023-24ನೇ ಸಾಲಿನ ಬಜೆಟ್ ನಲ್ಲಿ 77,750 ಕೋಟಿ ವರೆಗೆ ಸಾಲ ಪಡೆಯಲು ಅವಕಾಶವಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಮಾನ ಮರ್ಯಾದೆ, ಕೊಲೆಗಡುಕ, ಕಿತ್ತುಹೋದವರು – ಹೆಚ್ಡಿಕೆ Vs ಚಲುವರಾಯಸ್ವಾಮಿ
Advertisement
Advertisement
ಸಾಲದ ಮೊತ್ತ:
* 2012-13ರಲ್ಲಿ – 1 ಲಕ್ಷ ಕೋಟಿ ರೂ. ದಾಟಿತ್ತು
* 2016-17 ರಲ್ಲಿ – 2 ಲಕ್ಷ ಕೋಟಿ ರೂ ಮೀರಿತ್ತು
* 2019-20 ರಲ್ಲಿ – 3 ಲಕ್ಷ ಕೋಟಿ ರೂ ಮೀರಿತ್ತು
* 2020-21 ರಲ್ಲಿ – 4 ಲಕ್ಷ ಕೋಟಿ ದಾಟಿತ್ತು (ಕೋವಿಡ್ + ಪ್ರವಾಹದಿಂದ ಸಾಲದ ಪ್ರಮಾಣ ಹೆಚ್ಚಳ) ವಾಗಿತ್ತು
* 2022-23ರ ಅಂತ್ಯಕ್ಕೆ 5 ಲಕ್ಷ ಕೋಟಿ ಹೊಸ್ತಿಲಲ್ಲಿ ಬಂದು ನಿಂತಿದೆ.
Web Stories