ಮೈಸೂರು: ರಾಜ್ಯ ಹಲವು ಡ್ಯಾಂಗಳು ಭರ್ತಿಯಾಗಿ ನಾಡು ಸಮೃದ್ಧಿಯಾಗಿದ್ದು, ಈ ಬಾರಿ ಅದ್ಧೂರಿ ದಸರಾ ಆಚರಣೆ ಮಾಡುವುದಾಗಿ ಸಿಎಂ ಕುಮಾರಸ್ವಾಮಿ ಅವರು ಮೈಸೂರಿನಲ್ಲಿ ಹೇಳಿದ್ದಾರೆ.
ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿದ ವೇಳೆ ಮಾತನಾಡಿದ ಸಿಎಂ ಹೆಚ್‍ಡಿಕೆ, ರಾಜ್ಯದ ಹಲವು ಜಲಾಶಯಗಳು ಭರ್ತಿಯಿಂದ ನಾಡು ಸಮೃದ್ಧಿಯಾಗಿದೆ. ಈ ಬಾರಿ ಉತ್ತಮ ಮಳೆ ಬಿದ್ದಿರುವುದರಿಂದ ವಿದ್ಯುತ್ ಸಮಸ್ಯೆಯೂ ನಿವಾರಣೆ ಆಗಿದೆ. 12 ವರ್ಷಗಳ ನಂತರ ಕೆಲ ಜಲಾಶಯಗಳಿಗೆ ನಾನೇ ಬಾಗಿನ ಅರ್ಪಣೆ ಮಾಡುತ್ತಿದ್ದೇನೆ. ಇದಕ್ಕೆಲ್ಲ ತಾಯಿ ಚಾಮುಂಡೇಶ್ವರಿಯ ಆಶಿರ್ವಾದ ಕಾರಣವಾಗಿದ್ದು, ನಾಡು ಸಮೃದ್ಧಿ ಆಗಿರೋ ಕಾರಣ ಅದ್ಧೂರಿ ದಸರಾ ಮಾಡುತ್ತೇವೆ. ನಾವು ಮಾಡುವ ದಸರಾ ಆಚರಣೆ ರಾಜ್ಯಕ್ಕೆ ಮಾದರಿಯಾಗುತ್ತದೆ. ಈ ಕುರಿತು ಈಗಾಗಲೇ ವಿಧಾನಸಭೆಯಲ್ಲಿ ಸಭೆ ಕರೆದು ಚರ್ಚೆ ನಡೆದಿದೆ ಎಂದು ಹೇಳಿದ್ದಾರೆ.
Advertisement
Advertisement
ಆಷಾಢ ಮಾಸದ ಮೊದಲ ಶುಕ್ರವಾರ ಚಾಮುಂಡೇಶ್ವರಿ ಪೂಜೆ ಸಲ್ಲಿಸಿದ ಸಿಎಂ ರಾಜ್ಯದ ಅಭಿವೃದ್ಧಿಗೆ ಹಾಗೂ ರೈತರ ನೆಮ್ಮದಿಯ ಜೀವನಕ್ಕೆ ತಾಯಿಯಲ್ಲಿ ಪ್ರಾರ್ಥಿಸಿದ್ದೇನೆ. ಇಂದು ನನ್ನ ಜೊತೆ ಹಲವು ಸಚಿವರು ಜೊತೆಗಿದ್ದು ತಾಯಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ. ಕಬಿನಿ ಹಾಗೂ ಕೆಆರ್‍ಎಸ್ ಜಲಾಶಯಗಳಿಗೆ ಬಾಗಿನ ಅರ್ಪಣೆ ಮಾಡುವ ಶುಭಕಾರ್ಯವನ್ನು ಇಟ್ಟುಕೊಂಡಿದ್ದೇವೆ. ಈ ಎಲ್ಲ ಕಾರಣದಿಂದ ಆಷಾಢ ಶುಕ್ರವಾರದಂದು ಪೂಜೆಗೆ ಬಂದಿದ್ದೇವೆ ಎಂದು ಹೇಳಿದರು.
Advertisement
ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಸಿಎಂ ಹೆಚ್‍ಡಿಕೆ ಹೇಳಿಕೆ ಆಷಾಢ ಮಾಸ, ಈ ಮಾಸದಲ್ಲಿ ಯಾವುದೇ ಶುಭಕಾರ್ಯಗಳನ್ನ ನಡೆಸೋದಿಲ್ಲ. ಆದರೆ ಇದೇ ಮಾಸದಲ್ಲಿ ದೇವರ ಆರಾಧನೆಯಿಂದ ಸಂಪೂರ್ಣ ಫಲ ಪ್ರಾಪ್ತಿಯಾಗುತ್ತದೆ ಎಂಬುದು ಆಸ್ತಿಕರ ನಂಬಿಕೆ. ಅದರಲ್ಲೂ ಆಷಾಢ ಮಾಸದಲ್ಲಿ ಶಕ್ತಿದೇವತೆಗಳ ಆರಾಧನೆಯಿಂದ ಕುಟುಂಬ ಸದಸ್ಯರ ಆರೋಗ್ಯ, ಐಶ್ವರ್ಯ ಸಂಪತ್ತು ಅಭಿವೃದ್ಧಿಯಾಗುತ್ತೆ ಅನ್ನೋದು ಭಕ್ತರ ನಂಬಿಕೆ. ಈ ನಂಬಿಕೆಯಿಂದಲೇ ನೂರಾರು ವರ್ಷಗಳಿಂದ ಮೈಸೂರಿನ ಅಧಿದೇವತೆಯಾದ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಆಷಾಢ ಮಾಸದ ವಿಶೇಷ ಪೂಜಾ ಕೈಂಕರ್ಯಗಳನ್ನು ಆಯೋಜಿಸುತ್ತಾ ಬರಲಾಗಿದೆ.