ನೀಲಿ ಚಿತ್ರಗಳ ತಾರೆ ಬಾಯ್‌ಫ್ರೆಂಡ್ ಜೊತೆ ಶವವಾಗಿ ಪತ್ತೆ

Public TV
1 Min Read
Jesse Jane 1

ಮಿತಿ ಮೀರಿದ ಮಾದಕವಸ್ತು ಸೇವನೆಯಿಂದಾಗಿ ವಯಸ್ಕ ಚಿತ್ರಗಳ ತಾರೆ ಅಮೆರಿಕಾದ ಜೆಸ್ಸಿ ಜೇನ್ ಮತ್ತು ಆಕೆಯ ಬಾಯ್ ಫ್ರೆಂಡ್, ನಟ ಬ್ರೆಟ್ ಹ್ಯಾಸೆನ್ಮುಲ್ಲರ್ ಶವವಾಗಿ ಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. 43ರ ವಯಸ್ಸಿನ ಈ ನೀಲಿ ಚಿತ್ರಗಳ ತಾರೆ, ಬಾಯ್ ಫ್ರೆಂಡ್ ಮನೆಯಲ್ಲೇ ಒಟ್ಟಾಗಿ ವಾಸಿಸುತ್ತಿದ್ದರು ಎಂದು ತಿಳಿದು ಬಂದಿದೆ.

Jesse Jane 3

ಜೇನ್ ಮತ್ತು ಅವರ ಬಾಯ್‌ಫ್ರೆಂಡ್ ಶವಗಳು ಒಟ್ಟಿಗೆ ಸಿಕ್ಕಿರುವುದರಿಂದ ಈ ಕುರಿತಂತೆ ತನಿಖೆ ಕೂಡ ನಡೆಸಲಾಗುತ್ತಿದ್ದು, ಒಕ್ಲಹೋಮಾದ ಮೂರ್‌ನಲ್ಲಿರುವ ಮೂರ್ ಪೊಲೀಸ್ ಠಾಣೆಯು ತನಿಖೆಯನ್ನು ಕೈಗೆತ್ತಿಕೊಂಡಿದೆ. ಈ ಇಬ್ಬರ ಸಾವು ಅವರ ಅಭಿಮಾನಿಗಳಿಗೆ ಶಾಕ್ ನೀಡಿದೆ.

Jesse Jane 2

2003ರಲ್ಲಿ ನೀಲಿ ಚಿತ್ರದ ಮೂಲಕ ಈ ಉದ್ಯಮಕ್ಕೆ ಕಾಲಿಟ್ಟ ಜಸ್ಸಿ ಜೇನ್ಸ್. ದುಬಾರಿ ವೆಚ್ಚದ ಚಿತ್ರಗಳಲ್ಲೂ ನಟಿಸಿದ್ದಾರೆ. ಹವಾಯಿಯನ್ ವೆಡ್ಡಿಂಗ್ ಸಿನಿಮಾ ಸೇರಿದಂತೆ ಸಾಕಷ್ಟು ಚಿತ್ರಗಳು ಇವರ ಜನಪ್ರಿಯ ಚಿತ್ರಗಳ ಲಿಸ್ಟ್‌ನಲ್ಲಿವೆ.

 

ನೀಲಿ ಚಿತ್ರಗಳಲ್ಲಿ ನಟಿಸುವುದು ಮಾತ್ರವಲ್ಲ, ಟಿವಿ ಕಾರ್ಯಕ್ರಮಗಳಲ್ಲಿ, ಸೌಂದರ್ಯ ಸ್ಪರ್ಧೆಯಲ್ಲೂ ಇವರು ಭಾಗಿಯಾಗಿದ್ದಾರೆ. ಸಾಕಷ್ಟು ಪುರಸ್ಕಾರಗಳನ್ನು ಪಡೆದಿದ್ದಾರೆ. ಅದರಲ್ಲೂ ಇವರು ನಡೆಸಿಕೊಡುತ್ತಿದ್ದ ಮಿಡ್ ನೈಟ್ ಕಾರ್ಯಕ್ರಮ ಸಾಕಷ್ಟು ಜನರ ಮೆಚ್ಚುಗೆಗೆ ಪಾತ್ರವಾಗಿತ್ತು.

Share This Article