ಬಾಲಿವುಡ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದ ನಂತರ ಮತ್ತೊಂದು ಸಿನಿಮಾ ಘೋಷಣೆ ಮಾಡಿದ್ದು, ಈ ಚಿತ್ರಕ್ಕೆ ಅವರು ‘ದಿ ಡೆಲ್ಲಿ ಫೈಲ್ಸ್’ ಎಂದು ಹೆಸರಿಟ್ಟಿದ್ದಾರೆ. ಈ ಸಿನಿಮಾ ಘೋಷಣೆ ಆಗುತ್ತಿದ್ದಂತೆಯೇ ಮಹಾರಾಷ್ಟ್ರ ಸಿಖ್ ಅಸೋಷಿಯೇಷನ್ ನಿರ್ದೇಶಕರ ವಿರುದ್ಧ ಕಿಡಿಕಾರಿದೆ. ಇಂತಹ ದ್ವೇಷದ ಕಥೆಗಳನ್ನು ಇಟ್ಟುಕೊಂಡು ನಿರ್ದೇಶಕರು ದುಡ್ಡು ಮಾಡುತ್ತಿದ್ದಾರೆ. ಸಮಾಜದಲ್ಲಿ ಮತ್ತಷ್ಟು ದ್ವೇಷ ಬಿತ್ತುತ್ತಿದ್ದಾರೆ ಎಂದು ಅಸೋಷಿಯೇಷನ್ ಆಪಾದನೆ ಮಾಡಿದೆ. ಇದನ್ನೂ ಓದಿ : ನಟಿ ಮಂದನಾ ಕರೀಮಿಗೆ ಮೋಸ ಮಾಡಿದ್ರಾ ನಿರ್ದೇಶಕ ಅನುರಾಗ್ ಕಶ್ಯಪ್?
Advertisement
ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ‘ದಿ ಡೆಲ್ಲಿ ಫೈಲ್ಸ್’ ಸಿನಿಮಾದಲ್ಲಿ ಯಾವ ರೀತಿಯ ಕಥೆಯನ್ನು ಹೇಳುತ್ತಿದ್ದಾರೆ ಎಂದು ಈವರೆಗೂ ಬಹಿರಂಗ ಪಡಿಸಲಿಲ್ಲ. ಆದರೆ, ನೈಜ ಘಟನೆಯನ್ನು ಆಧರಿಸಿದ ಸಿನಿಮಾ ಎಂದು ಹೇಳಿಕೊಂಡಿದ್ದಾರೆ. ಡೆಲ್ಲಿಗೂ ಚೆನ್ನೈಗೂ ನಂಟಿದೆ ಎಂದು ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಹೀಗಾಗಿ ಇದು ಸಿಖ್ ನರಮೇಧದ ಕಥೆ ಎಂದು ಊಹಿಸಲಾಗುತ್ತಿದೆ. ಹೀಗಾಗಿಯೇ ಸಿಖ್ ಸಂಘ ಈ ಸಿನಿಮಾಗೆ ವಿರೋಧ ವ್ಯಕ್ತ ಪಡಿಸಿದೆ. ಇದನ್ನೂ ಓದಿ : ಗಮನ ಸೆಳೆದ ‘ಒಂದಂಕೆ ಕಾಡು’ ಮೋಷನ್ ಪೋಸ್ಟರ್
Advertisement
Advertisement
ಸಮಾಜದಲ್ಲಿ ಈಗಾಗಲೇ ಧರ್ಮ ಧರ್ಮಗಳ ನಡುವೆ ದ್ವೇಷದ ಭಾವನೆಗಳನ್ನು ಹಂಚಲಾಗುತ್ತಿದೆ. ಧ್ರುವೀಕರಣದಲ್ಲಿ ಕೆಲಸಗಳು ಮಾನ ಸಂಬಂಧಗಳನ್ನೇ ಹಾಳು ಮಾಡುತ್ತಿವೆ. ಶಾಂತಿಯನ್ನು ಸ್ಥಾಪಿಸಬೇಕಾದ ಇಂತಹ ಸಮಯದಲ್ಲಿ ವಿವೇಕ್ ಅಗ್ನಿಹೋತ್ರಿ ಅವರು ದುಡ್ಡಿಗಾಗಿ ಜನರ ನಡುವೆ ದ್ವೇಷದ ಭಾವನೆಗಳನ್ನು ಬಿತ್ತುತ್ತಿದ್ದಾರೆ. ಇದರಿಂದಾಗಿ ಮತ್ತಷ್ಟು ಮನಸ್ಸುಗಳು ಹಾಳಾಗುತ್ತವೆ. ಹಾಗಾಗಿ ‘ದಿ ಡೆಲ್ಲಿ ಫೈಲ್ಸ್’ ಸಿನಿಮಾವನ್ನು ವಿರೋಧಿಸುವುದಾಗಿ ಮಹಾರಾಷ್ಟ್ರ ಸಿಖ್ ಅಸೋಷಿಯೇಷನ್ ಪತ್ರಿಕಾ ಪ್ರಕಟನೆಯನ್ನು ಹೊರಡಿಸಿದೆ. ಇದನ್ನೂ ಓದಿ : Love…ಲಿ ಅಂತಿದ್ದಾರೆ ಆಂಗ್ರಿ ಯಂಗ್ ಮ್ಯಾನ್ ವಸಿಷ್ಠ ಸಿಂಹ: ಚಿಟ್ಟೆ ನ್ಯೂ ಲುಕ್ ಹೇಗಿದೆ ಗೊತ್ತಾ?
Advertisement
ಈಗಾಗಲೇ ವಿವೇಕ್ ಅಗ್ನಿಹೋತ್ರಿ ಅವರು ‘ದಿ ತಾಷ್ಕೆಂಟ್ ಫೈಲ್ಸ್’ ಮತ್ತು ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾಗಳ ಮೂಲಕ ಜನಾಂಗದ ಮಧ್ಯೆ ಮನಸ್ತಾಪಗಳನ್ನು ತಂದಿಟ್ಟಿದ್ದಾರೆ. ಆದ ಘಟನೆಗಳನ್ನು ನೆನಪಿಸುವುದಕ್ಕಿಂತ ಸಮಾಜದಲ್ಲಿ ಶಾಂತಿಯನ್ನು ಸ್ಥಾಪಿಸುವಂತಹ ಸಿನಿಮಾಗಳನ್ನು ಮಾಡಲಿ. ಸೃಜನಶೀಲ ಮಾಧ್ಯಮ ದುರಂತಗಳಿಗೆ ಬಳಕೆ ಆಗಬಾರದು. ದುಡ್ಡು ಮಾಡುವುದಕ್ಕಾಗಿ ಈ ರೀತಿಯ ಸಿನಿಮಾಗಳನ್ನು ಮಾಡಬಾರದು ಎಂದು ಪತ್ರದಲ್ಲಿ ಬರೆದಿದೆ ಸಿಖ್ ಅಸೋಷಿಯೇನ್.