ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ 2 ಸಿನಿಮಾ ಯಶಸ್ಸಿ ನಂತರ ಮತ್ತೆ ನಿರ್ದೇಶನಕ್ಕೆ ಪ್ರಶಾಂತ್ ವಾಪಸ್ಸಾಗಿದ್ದರು. ಕೆಜಿಎಫ್ 2 ಸಿನಿಮಾ ರಿಲೀಸ್ ಕಾರಣದಿಂದಾಗಿ ನಿಲ್ಲಿಸಿದ್ದ ಸಲಾರ್ ಸಿನಿಮಾಗೆ ಅವರು ಮತ್ತೆ ಚಾಲನೆ ನೀಡಿದ್ದು, ಸದ್ದಿಲ್ಲದೇ ಶೂಟಿಂಗ್ ಶುರು ಮಾಡಿದ್ದಾರೆ. ಚಿತ್ರೀಕರಣ ಪ್ರಾರಂಭವಾದ ಮೊದಲ ದಿನವೇ ಸಿನಿಮಾದ ಫೋಟೋವೊಂದು ಲೀಕ್ ಆಗಿದೆ. ಇದನ್ನೂ ಓದಿ : ಧನುಶ್ ನಟನೆಯ ಹಾಲಿವುಡ್ ಸಿನಿಮಾದ ಟ್ರೇಲರ್ ರಿಲೀಸ್ : ಎಲ್ಲಿದ್ದಾರೆ ಧನುಶ್?
ತಮ್ಮ ಸಿನಿಮಾದ ಯಾವುದೇ ಫೋಟೋ ಅಥವಾ ವಿಡಿಯೋ ಲೀಕ್ ಆಗದಂತೆ ಈವರೆಗೂ ಪ್ರಶಾಂತ್ ನೀಲ್ ಗೌಪ್ಯತೆಯನ್ನು ಕಾಪಾಡಿಕೊಂಡು ಬಂದಿದ್ದಾರೆ. ಆದರೆ, ಕೆಲವೊಂದ ಸಲ ಎಡವಟ್ಟುಗಳು ಆಗುತ್ತವೆ. ಈ ಬಾರಿ ಅದೇ ಆಗಿದೆ. ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಬಂದ ನಟ ಪ್ರಭಾಸ್ ಅವರ ಫೋಟೋ ಮತ್ತು ಸೆಟ್ ಹಾಕಿರುವ ಫೋಟೋಗಳು ಲೀಕ್ ಆಗಿವೆ. ಅವುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇದನ್ನೂ ಓದಿ : ಕೆಜಿಎಫ್ 2 ಪ್ರದರ್ಶನಕ್ಕೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾ
ಈ ಸಿನಿಮಾದ ಶೂಟಿಂಗ್ ಗಾಗಿ ಪ್ರಭಾಸ್ ಒಂದಷ್ಟು ತೂಕ ಹೆಚ್ಚಿಸಿಕೊಂಡಿದ್ದಾರೆ. ಇದನ್ನು ತೀರಾ ಸಿಕ್ರೇಟ್ ಆಗಿ ಇಟ್ಟು ಶೂಟಿಂಗ್ ಮಾಡಲಾಗುತ್ತಿತ್ತು. ಯಾರೋ ಚಿತ್ರೀಕರಣದ ಸ್ಥಳದಲ್ಲಿ ಪ್ರಭಾಸ್ ಇರುವ ಫೋಟೋವನ್ನು ತೆಗೆದು ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದಾರೆ. ಅದನ್ನು ಕಂಡು ಪ್ರಭಾಸ್ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಇದನ್ನೂ ಓದಿ : ತೆರೆಯ ಮೇಲೂ ಒಂದಾದ ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ
ಅಂದುಕೊಂಡಂತೆ ಆದರೆ, ಈ ವರ್ಷದ ಕೊನೆಯಲ್ಲಿ ಸಿನಿಮಾದ ಬಹುತೇಕ ಶೂಟಿಂಗ್ ಮುಗಿಯಲಿದೆ. ಮುಂದಿನ ವರ್ಷ ಮೊದಲ ಅಥವಾ ಎರಡನೇ ತಿಂಗಳಲ್ಲಿ ಸಲಾರ್ ಅನ್ನು ತೆರೆಗೆ ತರುವ ಪ್ಲ್ಯಾನ್ ಚಿತ್ರತಂಡದ್ದು. ಹಾಗಾಗಿಯೇ ಸಿಕ್ಕಾಪಟ್ಟೆ ಫಾಸ್ಟ್ ಆಗಿಯೇ ಶೂಟಿಂಗ್ ಮಾಡಲಾಗುತ್ತಿದೆ. ಚಿತ್ರತಂಡದ ಪ್ರಕಾರ ಅಕ್ಟೋಬರ್ ಹೊತ್ತಿಗೆ ಶೂಟಿಂಗ್ ಮುಗಿಯಬೇಕು. ನಂತರ ಪೋಸ್ಟ್ ಪ್ರೊಡಕ್ಷನ್ ಕೆಲಸ.