– ಶಿರಹಟ್ಟಿ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಗೌಪ್ಯ
ಗದಗ: ನಿರೀಕ್ಷೆಯಂತೆ ಜಿಲ್ಲೆಯ ಗದಗ (Gadag Constituency), ರೋಣ (Rona Constituency) ಹಾಗೂ ನರಗುಂದ ವಿಧಾನಸಭಾ ಕ್ಷೇತ್ರಗಳಿಗೆ ಕಾಂಗ್ರೆಸ್‌ನಿಂದ ಅಭ್ಯರ್ಥಿಗಳ ಪಟ್ಟಿ (Congress Candidate List) ಘೋಷಣೆಯಾಗಿದ್ದು, ಶಿರಹಟ್ಟಿ ಕ್ಷೇತ್ರ ಮಾತ್ರ ಗೌಪ್ಯವಾಗಿ ಉಳಿದಿದೆ.
ಕಾಂಗ್ರೆಸ್ (Congress) ಮೊದಲ ಹಾಗೂ 2ನೇ ಪಟ್ಟಿ ಬಿಡುಗಡೆ ಆಗುತ್ತಿದ್ದಂತೆ ಇತರ ಪ್ರಬಲ ಟಿಕೆಟ್ ಆಕಾಂಕ್ಷಿಗಳಲ್ಲಿ ತಳಮಳ ಶುರುವಾಗಿದೆ. ಅವರವರ ರಾಜಕೀಯ ಗಾಡ್ ಫಾದರ್, ಮಠಾಧೀಶರ ಮೂಲಕ ರಾಜ್ಯ ಮುಖಂಡರ ಒತ್ತಡ ಹೇರುವ ಪ್ರಕ್ರಿಯೆ ತೀತ್ರಗೊಂಡಿದೆ. ಪ್ರಬಲ ಟಿಕೆಟ್ ಆಕಾಂಕ್ಷಿಗಳು ಸ್ವಪಕ್ಷೀಯರ ವಿರುದ್ಧವೇ ಕ್ಷೇತ್ರದಲ್ಲಿ ಅಪಪ್ರಚಾರಕ್ಕೆ ಕೈಹಾಕಿದ್ದಾರೆ. ಪ್ರತಿಸ್ಪರ್ಧಿಯ ನೈತಿಕ ಬಲ ಕುಗ್ಗಿಸುವ ಚಾಣಾಕ್ಷ ರಾಜಕೀಯ ನಡೆ ಎಗ್ಗಿಲ್ಲದೇ ಸಾಗಿದೆ. ಆಕಾಂಕ್ಷಿಗಳ ಪರ ಜಿಲ್ಲಾ ಪ್ರಭಾವಿ ಮುಖಂಡರು ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿರುವುದೂ ಅಲ್ಲಗೆಳೆಯುವಂತಿಲ್ಲ. ಇದನ್ನೂ ಓದಿ: ಅನಿರೀಕ್ಷಿತ ಬೆಳವಣಿಗೆಗಳಿಂದ ರಾಷ್ಟ್ರೀಯ ಪಕ್ಷಗಳು ವಿಲವಿಲ – ರೋಣ ಕ್ಷೇತ್ರದಲ್ಲಿ ಸಹೋದರರ ಸವಾಲ್
Advertisement
Advertisement
ಟಿಕೆಟ್ ವಿಚಾರದಲ್ಲಿ ಗೊಂದಲವಿಲ್ಲದ ಕ್ಷೇತ್ರಗಳನ್ನ ಆಯ್ಕೆ ಮಾಡಿಕೊಂಡಿರುವ ಕಾಂಗ್ರೆಸ್, ಪಕ್ಷ ತನ್ನ ಮೊದಲ ಹಾಗೂ 2ನೇ ಪಟ್ಟಿ ಬಿಡುಗಡೆ ಮಾಡಿದೆ. ನಿರೀಕ್ಷೆಯಂತೆ ಜಿಲ್ಲೆಯ ಗದಗದಿಂದ ಹೆಚ್.ಕೆ ಪಾಟೀಲ, ರೋಣದಿಂದ ಜಿ.ಎಸ್ ಪಾಟೀಲ ಹಾಗೂ ನರಗುಂದ ಕ್ಷೇತ್ರದಿಂದ ಬಿ.ಆರ್ ಯಾವಗಲ್ ಹೆಸರು ಘೋಷಣೆಯಾಗಿದೆ. ಶಿರಹಟ್ಟಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಘೋಷಣೆಗೆ ಅಧಿಕೃತ ಮುದ್ರೆ ಹೆಚ್.ಕೆ ಪಾಟೀಲ ಅವರು ಒತ್ತಬೇಕಿದೆ. ಅವರ ಅಭಿಪ್ರಾಯದ ಮೇಲೆಯೇ ಶಿರಹಟ್ಟಿ ಕ್ಷೇತ್ರದ ಅಭ್ಯರ್ಥಿ ಘೋಷಣೆ ಆಗಲಿದೆ ಎನ್ನಲಾಗಿದೆ. ಶಿರಹಟ್ಟಿಯಲ್ಲಿ ಅಭ್ಯರ್ಥಿಗಳ ಅಂತಿಮ ಆಯ್ಕೆ ವಿಚಾರದಲ್ಲಿ ಹಿಂದೆಂದಿಗಿಂತಲೂ ಈ ಬಾರಿ ಗೊಂದಲ ಸೃಷ್ಟಿಯಾಗಿದ್ದು, ರಾಷ್ಟ್ರೀಯ ಪಕ್ಷಗಳಿಗೆ ತಲೆನೋವಾಗಿ ಪರಿಣಮಿಸಿದೆ. ಇದನ್ನೂ ಓದಿ: ಜೀವ ಬೆದರಿಕೆ ಹಿನ್ನೆಲೆ ದುಬಾರಿ ಬುಲೆಟ್ ಪ್ರೂಫ್ ಕಾರು ಖರೀದಿಸಿದ ಸಲ್ಮಾನ್
Advertisement
Advertisement
ಕ್ಷೇತ್ರದಲ್ಲಿ 14 ಜನ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಎಸ್ಸಿ ಮೀಸಲು ಕ್ಷೇತ್ರವಾದ್ದರಿಂದ ಮೋಚಿ, ಮಾದಿಗ, ಲಂಬಾಣಿ ಸಮುದಾಯದ ಆಕಾಂಕ್ಷಿಗಳು ಹೆಚ್ಚು ತವಕದಲ್ಲಿದ್ದಾರೆ. ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಮೋಚಿಗ ಸಮುದಾಯದ ನಾಯಕ. ಮೊದಲ ಬಾರಿ ಅದೃಷ್ಟ ಪರೀಕ್ಷೆಗೆ ಸಜ್ಜಾಗಿರುವ ಮಾದಿಗ ಸಮುದಾಯದ ಸುಜಾತಾ ದೊಡ್ಡಮನಿ ಹಾಗೂ ಅಂಬಣ್ಣ ಆರೋಲಿಕರ್ ಕಾಂಗ್ರೆಸ್ಸಿನ ಪ್ರಬಲ ಆಕಾಂಕ್ಷಿಗಳು. ಜಾತಿ ಲೆಕ್ಕಾಚಾರ ಕ್ಷೇತ್ರದಲ್ಲಿ ಮೋಚಿಗ ಸಮುದಾಯದ 1,500 ಮತಗಳಿದ್ದು, 22,000 ಮಾದಿಗ ಮತಗಳಿವೆ. 25,000 ಲಂಬಾಣಿ ಮತಗಳಿದ್ದು, ದೇವಪ್ಪ ಲಂಬಾಣಿ ಸಹ ಅರ್ಜಿ ಹಾಕಿದ್ದಾರೆ. ಹೀಗಾಗಿ ಸುಜಾತಾ ದೊಡ್ಡಮನಿ, ಅಂಬಣ್ಣ ಆರೋಲಿಕರ್ ಇವರು ಕೆ.ಹೆಚ್? ಮುನಿಯಪ್ಪ, ಮಲ್ಲಿಕಾರ್ಜುನ ಖರ್ಗೆ, ಡಾ.ಜಿ ಪರಮೇಶ್ವರ ಬಳಗದವರು. ಇನ್ನೂ ರಾಮಕೃಷ್ಣ ದೊಡ್ಡಮನಿ, ದೇವಪ್ಪ ಲಂಬಾಣಿ ಸಿದ್ದರಾಮಯ್ಯ ಬಳಗದಿಂದ ಸಹಜವಾಗಿ ಟಿಕೆಟ್ ಬೇಡಿಕೆಯಿಟ್ಟಿದ್ದಾರೆ. ಇನ್ನೂ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಯನ್ನು ನೋಡಿ ಬಿಜೆಪಿ ತಮ್ಮ ಅಭ್ಯರ್ಥಿಯನ್ನು ಘೋಷಿಸಲಿದೆ ಎನ್ನಲಾಗಿದೆ.
ಮೊದಲಿನಂತೆ ಕಾಂಗ್ರೆಸ್? `ಮೋಚಿ'(ಎಡಗೈ) ಸಮುದಾಯಕ್ಕೆ ಮಣೆ ಹಾಕಿದ್ದಲ್ಲಿ ಬಿಜೆಪಿಯು ಮಾದಿಗ ಮತ್ತು ಲಂಬಾಣಿ ಸಮುದಾಯಕ್ಕೆ ಮಣೆ ಹಾಕಬಹುದು. ಒಂದು ವೇಳೆ ಮಾದಿಗ(ಎಡಗೈ) ಸಮುದಾಯದ ಸುಜಾತ ಅಥವಾ ಅಂಬಣ್ಣ ಅವರಿಗೆ ಕಾಂಗ್ರೆಸ್ ಮಣೆ ಹಾಕಿದ್ದಲ್ಲಿ ಮಹಿಳೆಯ ಪ್ರತಿಸ್ಪಧಿಯಾಗಿ ಗದಗ ನಗರಸಭೆ ಅಧ್ಯೆ ಉಷಾ ದಾಸರ ಅವರನ್ನ ಅಭ್ಯಥಿರ್ಯಾಗಿ ಬಿಜೆಪಿ ಪರಿಗಣಿಸಲೂಬಹುದು ಎಂಬ ಮಾತುಗಳು ಕ್ಷೇತ್ರದಲ್ಲಿ ಚರ್ಚೆಯಲ್ಲಿವೆ.
ಬಿಜೆಪಿಗೆ ಹೋಲಿಸಿದರೆ, ಕಾಂಗ್ರೆಸ್ ಪಕ್ಷದಲ್ಲಿ ಒಳ ಬೇಗುದಿ ಕಡಿಮೆಯಿದೆ. ಆದ್ರೆ ರೋಣ ಮತ್ತು ಗದಗ ಕ್ಷೇತ್ರದ ಬಿಜೆಪಿಯಲ್ಲಿ ಸ್ವಪಕ್ಷೀಯರಿಂದಲೇ ಒಳಸಂಚು ರೂಪಿಸುತ್ತಿದ್ದು, ಅಭ್ಯರ್ಥಿಗಳಿಗೆ ಅಪಾಯ ತಂದೊಡ್ಡಲು ಪ್ರತ್ಯೇಕ ಗುಂಪು ಸೃಷ್ಟಿಸಲಾಗುತ್ತಿದೆ ಎನ್ನುವ ಮಾತುಗಳೂ ಕೇಳಿಬರುತ್ತಿವೆ. ಒಟ್ಟಿನಲ್ಲಿ ಕಾಂಗ್ರೆಸ್ ಪಕ್ಷದಲ್ಲಿನ ಒಳ ಬೇಗುದಿ ಹೆಚ್ಚಾಗಿದ್ದು, ಶಿರಹಟ್ಟಿ ಕ್ಷೇತ್ರದ ಅಭ್ಯರ್ಥಿ ಘೋಷಣೆ ನಂತರ ಮತ್ತಷ್ಟು ವ್ಯಾಪಿಸುತ್ತಾ ಎಂಬುದನ್ನ ಕಾದುನೋಡಬೇಕಿದೆ.