ವಿಶಾಖಪಟ್ಟಣಂ: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಬ್ಯಾಟರ್‌ಗಳರು ಸಿಕ್ಸರ್, ಬೌಂಡರಿ ಚಚ್ಚಿದ ಪರಿಣಾಮ ಕೋಲ್ಕತ್ತಾ ನೈಟ್‌ರೈಡರ್ಸ್ ತಂಡವು ಐಪಿಎಲ್‌ನಲ್ಲಿ (IPL) ಮತ್ತೊಂದು ವಿಶೇಷ ಸಾಧನೆ ಮಾಡಿದೆ.
7 ವಿಕೆಟ್ ನಷ್ಟಕ್ಕೆ 272 ರನ್ ಸಿಡಿಸುವ ಮೂಲಕ ಐಪಿಎಲ್ ಟೂರ್ನಿ ಇತಿಹಾಸದಲ್ಲೇ ಅತಿ ಹೆಚ್ಚು ರನ್ ಸಿಡಿಸಿದ 2ನೇ ತಂಡ ಹೆಗ್ಗಳಿಗೆಕೆ ಕೆಕೆಆರ್ ತಂಡ ಪಾತ್ರವಾಗಿದೆ. ಈ ಹಿಂದೆ ಅತಿ ಹೆಚ್ಚು ರನ್ ಸಿಡಿಸಿದ ದಾಖಲೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಹೆಸರಿನಲ್ಲಿತ್ತು. 2013ರಲ್ಲಿ ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಪುಣೆ ವಾರಿಯರ್ಸ್ ವಿರುದ್ಧ 5 ವಿಕೆಟ್ ನಷ್ಟಕ್ಕೆ 263 ರನ್ ಹೊಡೆದಿತ್ತು. ಈ ಪಂದ್ಯದಲ್ಲಿ ಕ್ರಿಸ್ ಗೇಲ್ ಔಟಾಗದೇ 175 ರನ್ ಚಚ್ಚಿದ್ದರು.
Advertisement
Advertisement
ಆದ್ರೆ ಇತ್ತೀಚೆಗಷ್ಟೇ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವು 277 ಬಾರಿಸುವ ಮೂಲಕ ಆರ್‌ಸಿಬಿ ಹೆಸರಿನಲ್ಲಿದ್ದ ದಾಖಲೆಯನ್ನು ನುಚ್ಚುನೂರು ಮಾಡಿತ್ತು. ಈದೀಗ ಕೋಲ್ಕತ್ತಾ ನೈಟ್‌ರೈಡರ್ಸ್ 272 ರನ್ ಸಿಡಿಸುವ ಮೂಲಕ ಆರ್‌ಸಿಬಿ ದಾಖಲೆಯನ್ನ ನುಚ್ಚುನೂರು ಮಾಡಿದೆ. ಆದ್ರೆ ಹೈದರಾಬಾದ್ ತಂಡದ 277 ರನ್‌ಗಳ ದಾಖಲೆ ಮುರಿಯುವಲ್ಲಿ ವಿಫಲವಾಯಿತು.
Advertisement
IPL ನಲ್ಲಿ ರನ್ ಹೊಳೆ ಹರಿಸಿದ ಟಾಪ್-5 ತಂಡಗಳು:
ಸನ್ ರೈಸರ್ಸ್ ಹೈದರಾಬಾದ್ – 277 ರನ್
ಕೋಲ್ಕತ್ತಾ ನೈಟ್ ರೈಡರ್ಸ್ – 272 ರನ್
ರಾಯಲ್ ಚಾಲೆಂಜರ್ಸ್ ಬೆಂಗಳೂರು – 263 ರನ್
ಲಕ್ನೋ ಸೂಪರ್ ಜೈಂಟ್ಸ್ – 257 ರನ್
ರಾಯಲ್ ಚಾಲೆಂಜರ್ಸ್ ಬೆಂಗಳೂರು – 248
Advertisement
ರನ್ ಏರಿದ್ದು ಹೇಗೆ?
50 ರನ್ 23 ಎಸೆತ
100 ರನ್ 45 ಎಸೆತ
150 ರನ್ 66 ಎಸೆತ
200 ರನ್ 92 ಎಸೆತ
250 ರನ್ 111 ಎಸೆತ
272 ರನ್ 120 ಎಸೆತ
ಬಲ ನೀಡಿದ ಶತಕ, ಅರ್ಧಶತಕಗಳ ಜೊತೆಯಾಟ:
ಆರಂಭದಿಂದಲೇ ಡೆಲ್ಲಿ ಬೌಲರ್‌ಗಳನ್ನು ಬೆಂಡೆತ್ತಲು ಶುರು ಮಾಡಿದ ಕೆಕೆಆರ್ ಬ್ಯಾಟರ್‌ಗಳು ಕೊನೇವರೆಗೂ ಕ್ರೀಸ್‌ನಲ್ಲಿ ಅಬ್ಬರಿಸಿದರು. ಮೊದಲ ವಿಕೆಟ್‌ಗೆ ಪಿಲ್ ಸಾಲ್ಟ್ – ಸುನೀಲ್ ನರೇನ್ ಜೋಡಿ 27 ಎಸೆತಗಳಲ್ಲಿ 60 ರನ್ ಬಾರಿಸಿದರೆ, 2ನೇ ವಿಕೆಟ್‌ಗೆ ರಘುವಂಶಿ ಮತ್ತು ಸುನೀಲ್ ನರೇನ್ ಜೋಡಿ 48 ಎಸೆತಗಳಲ್ಲಿ ಬರೋಬ್ಬರಿ 104 ರನ್ ಕಲೆಹಾಕಿತು. ಈ ಬೆನ್ನಲ್ಲೇ ರಸೆಲ್-ಅಯ್ಯರ್ ಜೋಡಿ ಕೇವಲ 24 ಎಸೆತಗಳಲ್ಲಿ ಸ್ಫೋಟಕ 56 ರನ್ ಬಾರಿಸಿದರೆ, ರಿಂಕು-ರಸೆಲ್ ಜೋಡಿ ಕೇವಲ 11 ಎಸೆತಗಳಲ್ಲಿ 32 ರನ್ ಚಚ್ಚಿತು. ಪರಿಣಾಮ ತಂಡದ ಮೊತ್ತ 270 ರನ್‌ಗಳ ಗಡಿ ದಾಟುವಲ್ಲಿ ಯಶಸ್ವಿಯಾಯಿತು.
ಡೆಲ್ಲಿಗೆ 273 ರನ್‌ಗಳ ಗುರಿ:
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಕೆಕೆಆರ್ 7 ವಿಕೆಟ್ ನಷ್ಟಕ್ಕೆ 20 ಓವರ್‌ಗಳಲ್ಲಿ 272 ರನ್ ಬಾರಿಸಿತು. ಪಿಲ್ ಸಾಲ್ಟ್ 18 ರನ್, ಸುನೀಲ್ ನರೇನ್ 85 ರನ್ (39 ಎಸೆತ, 7 ಸಿಕ್ಸರ್, 7 ಬೌಂಡರಿ), ರಘು ವಂಶಿ 54 ರನ್ (27 ಎಸೆತ, 3 ಸಿಕ್ಸರ್, 5 ಬೌಂಡರಿ), ರಸೆಲ್ 41 ರನ್ (19 ಎಸೆತ, 3 ಸಿಕ್ಸರ್, 4 ಬೌಂಡರಿ), ರಿಂಕು ಸಿಂಗ್ 26 ರನ್ (8 ಎಸೆತ, 3 ಸಿಕ್ಸರ್, 1 ಬೌಂಡರಿ) ಚಚ್ಚಿದರು. ಹೆಚ್ಚುವರಿ 22 ರನ್‌ಗಳು ತಂಡಕ್ಕೆ ಸೇರ್ಪಡೆಯಾಯಿತು.