ಉಡುಪಿ: ಧಾರ್ಮಿಕ ದತ್ತಿ ಇಲಾಖೆಯ (Muzrai Department) ದೇಗುಲದಲ್ಲಿ (Temple) ವೈಷ್ಣವರು ತಪ್ತ ಮುದ್ರಾಧಾರಣೆ (Tapta Mudra Dharana), ಫೋಟೋ ಇಟ್ಟು ಸಾರ್ವಜನಿಕ ಪೂಜೆ ಮಾಡಬಾರದು ಎಂಬ ಆದೇಶಕ್ಕೆ ಉಡುಪಿಯ (Udupi) ಮಾಧ್ವರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಅಂದ್ರೆ ಇದೇನಾ ಅಂತ ವಿದ್ವಾಂಸರು ಇಲಾಖೆಯ ಆದೇಶವನ್ನು ಕಟುವಾಗಿ ಟೀಕಿಸಿದ್ದಾರೆ.
Advertisement
ಉಡುಪಿ ಕೃಷ್ಣಮಠ (Udupi Mutt) ಸೇರಿದಂತೆ ಅಷ್ಟಮಠಗಳಲ್ಲಿ ಈ ಬಗ್ಗೆ ಚರ್ಚೆಯಾಗಿದೆ. ಮಾಧ್ವ ಪಂಡಿತರು ಆದೇಶಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಜನಪ್ರತಿನಿಧಿಗಳ ಜೊತೆ ಮಾತನಾಡಿ ವಿವರಿಸಿದ್ದಾರೆ. ಒಂದಿಬ್ಬರು ಸಂಕುಚಿತ ಮನಸ್ಸಿನವರು ತ್ರಿಮತಸ್ಥರ ನಡುವೆ ಹುಳಿ ಹಿಂಡುವ ಕೆಲಸ ಮಾಡಿದ್ದಾರೆ. ಕ್ಷುಲ್ಲಕ ಮಾತುಗಳಿಗೆ ಕಿವಿ ಕೊಟ್ಟರೆ ಎಲ್ಲರನ್ನು ಜೊತೆಗೆ ತೆಗೆದುಕೊಂಡು ಹೋಗಲು ಸಾಧ್ಯವೇ? ದೇವಸ್ಥಾನದ ಚಾವಡಿ 10 ಮನಸ್ಸಿನ ಸದ್ವಿಚಾರಗಳನ್ನು ಇಡೀ ಸಮಾಜಕ್ಕೆ ಕೊಡಬೇಕು. ಆಚಾರ ವಿಚಾರದಲ್ಲಿ ತಪ್ಪು ಹುಡುಕಿ ಹುಡುಕಿ ಹುಡುಕಿ ರಾಡಿ ಎಬ್ಬಿಸುವ ಕೆಲಸವನ್ನು ಬಿಟ್ಟುಬಿಡಿ ಎಂದು ಧಾರ್ಮಿಕ ವಿದ್ವಾಂಸ ವಾಸುದೇವ ಭಟ್ ಪೆರಂಪಳ್ಳಿ ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ಸರ್ಕಾರಿ ದೇಗುಲದಲ್ಲಿ ತಪ್ತಮುದ್ರಾಧಾರಣೆಗೆ ಬ್ರೇಕ್ – ಸತ್ಯನಾರಾಯಣ ಪೂಜೆ, ಶನಿಕಥೆಗೆ ಅಡ್ಡಿ
Advertisement
Advertisement
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ವಾಸುದೇವ ಭಟ್, ಸುತ್ತೋಲೆಯನ್ನು ತಂದಿರುವ ರಾಜ್ಯ ಸರ್ಕಾರದ ನಡೆಯ ಬಗ್ಗೆ ನಮಗೆ ಆಶ್ಚರ್ಯವಾಗಿದೆ. ಸರ್ಕಾರದ ಸುತ್ತೋಲೆ ಬಹಳ ಅಸಂಗತವಾಗಿದೆ. ಧಾರ್ಮಿಕ ವಿದ್ವಾಂಸರು ವಿಮರ್ಶೆ ಮಾಡಬೇಕಾದ ಸ್ಥಿತಿಯಿದೆ. ಆದೇಶ ಹೊರಡಿಸುವ ಮೊದಲು ಅವಲೋಕಿಸುವ ಕೆಲಸವನ್ನು ಮಾಡಿಲ್ಲ. ಯಾರದೋ ಒತ್ತಾಯ ಮತ್ತು ವೈಯಕ್ತಿಕ ಹಿತಾಸಕ್ತಿಯಿಂದ ಈ ಆದೇಶ ಹೊರಡಿಸುವ ರೀತಿಯಲ್ಲಿ ಮೇಲ್ನೋಟಕ್ಕೆ ಗೊತ್ತಾಗುತ್ತಿದೆ ಸುತ್ತೋಲೆಯನ್ನು ತರಾತುರಿಯಿಂದ ತಂದ ಹಾಗೆ ಕಾಣಿಸುತ್ತಿದೆ. ಕೆಲವು ಸಂಪ್ರದಾಯಗಳನ್ನು ಉದಾಹರಣೆಗೆ ತಪ್ತ ಮುದ್ರಾಧಾರಣೆಯನ್ನು ಸರ್ಕಾರಿ ದೇವಸ್ಥಾನಗಳಲ್ಲಿ ಮಾಡಬಾರದು ತಪ್ತ ಮುತ್ರಧಾರಣೆ ಮಾಡುವುದರಿಂದ ಒಂದು ದೇವಸ್ಥಾನದ ಆಚಾರ ವಿಚಾರಕ್ಕೆ ಯಾವುದೇ ಸಮಸ್ಯೆಗಳು ಬರುವುದಿಲ್ಲ. ತಪ್ತ ಮುದ್ರಾಧಾರಣೆಯನ್ನು ಮಠಾಧೀಶರುಗಳು ಮನೆ ಮನೆಗಳಲ್ಲಿ ಮಾಡುವಂತಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಮಠಾಧೀಶರುಗಳು ಈ ವಿಧಿ ನೆರವೇರಿಸಬೇಕು. ಮುದ್ರಾಧಾರಣೆ ಯಾರಿಗೆ ಆಸಕ್ತಿ ಇದೆ ಅವರು ಅದರಲ್ಲಿ ಭಾಗವಹಿಸಬಹುದು. ಯಾರಿಗೂ ಒತ್ತಾಯ ಮಾಡಿ ಮುದ್ರೆ ಹಾಕುವುದಿಲ್ಲ. ಹಿಂದಿನಿಂದಲೂ ಇದು ನಡೆದುಕೊಂಡು ಬಂದಿದೆ ಎಂದು ಹೇಳಿದರು.
Advertisement
ಆಷಾಢ ಶುದ್ಧ ಏಕಾದಶಿ ಮತ್ತು ಕಾರ್ತಿಕ ಶುದ್ಧ ಏಕಾದಶಿಯ ದಿನ ಮುದ್ರಾಧಾರಣೆಗೆ ಮಹತ್ವವಿದೆ. ಮಾಧ್ವ ಸಂಪ್ರದಾಯದ ಮಠಾಧೀಶರುಗಳು ಮುದ್ರಾಧಾರಣೆ ಮಾಡುತ್ತಾರೆ. ಆ ದಿನಗಳಲ್ಲಿ ತಪ್ತ ಮುತ್ರಾಧಾರಣೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದ ಭಕ್ತರಿಗೆ ಗ್ರಾಮದ ದೇವಸ್ಥಾನ ಅಥವಾ ಊರಿನ ದೇವಸ್ಥಾನದಲ್ಲಿ ಮುದ್ರೆ ಹಾಕಲಾಗುತ್ತದೆ. ಈಶ್ವರ ದೇವಸ್ಥಾನ, ದುರ್ಗಾದೇವಿ ದೇವಸ್ಥಾನಗಳು ಸುಬ್ರಮಣ್ಯ ದೇವಸ್ಥಾನಗಳಲ್ಲಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಹೀಗೆ ಮುಜರಾಯಿ ವ್ಯಾಪ್ತಿಯ ಹಲವಾರು ದೇವಸ್ಥಾನಗಳಲ್ಲಿ ಅನುಕೂಲಕ್ಕೆ ತಕ್ಕಂತೆ ಮುದ್ರಾಧಾರಣೆ, ಸತ್ಯನಾರಾಯಣ ಕಥೆ ಮಾಡಿಕೊಂಡು ಹೋಗಲಾಗುತ್ತಿದೆ. ದೇವಸ್ಥಾನಗಳು ಇರುವುದೇ ಆಧ್ಯಾತ್ಮಿಕವಾದ ಧಾರ್ಮಿಕವಾದ ಕಾರ್ಯಕ್ರಮಗಳನ್ನು ಮಾಡಲು. ಹಲವಾರು ವರ್ಷಗಳಿಂದ ಸರ್ಕಾರಿ ದೇವಸ್ಥಾನಗಳಲ್ಲಿ ನಡೆದುಕೊಂಡು ಹೋಗ್ತಾ ಇದೆ. ಏಕಾಏಕಿ ಇದಕ್ಕೆ ಯಾಕೆ ವಿರೋಧ ಬಂತು ಎಂಬುದು ಅರ್ಥವಾಗುತ್ತಿಲ್ಲ. ಸರ್ಕಾರ ಸುತ್ತೋಲೆಯನ್ನು ವಾಪಸ್ ತೆಗೆದುಕೊಳ್ಳಬೇಕು. ಶತಮಾನಗಳಿಂದ ನಡೆದುಕೊಂಡು ಬಂದ ಆಗಮೊಕ್ತ ವಿಧಿ ವಿಧಾನಗಳು ಪರಂಪರೆಗಳು ಕಾಲಾವಧಿ ಪ್ರಕ್ರಿಯೆಗಳು ಪೂರಕವಾಗಿ ನಡೆಯುತ್ತಿದೆ. ಇದನ್ನೂ ಓದಿ: ಕೆಂಪೇಗೌಡ ಪೇಟದಲ್ಲಿ ಕಂಗೊಳಿಸಿದ ಪ್ರಧಾನಿ ಮೋದಿ
ದೇವಸ್ಥಾನಗಳ ಭಕ್ತರಿಂದ ದೂರುಗಳು ಬಂದರೆ ವಿರೋಧಗಳು ವ್ಯಕ್ತವಾದರೆ ಸರ್ಕಾರ ಪರಾಮರ್ಶೆ ನಡೆಸಿ ಈ ಆದೇಶವನ್ನು ಹೊರಡಿಸಬೇಕಿತ್ತು. ದೂರೆಲ್ಲಿದೆ ಯಾರಿಂದ ಬಂದಿದೆ ಎಂಬುದೀಗ ಇರುವ ಪ್ರಶ್ನೆ. ಏಕಾಏಕಿ ಇಂತಹ ಎಡವಟ್ಟುಗಳನ್ನು ಯಾಕೆ ಮಾಡುತ್ತಾರೆ ಎಂಬುದು ಗೊತ್ತಾಗುತ್ತಿಲ್ಲ. ತ್ರಿಮತಸ್ಥ ಬ್ರಾಹ್ಮಣರ ನಡುವೆ ಒಡಕು ತಂದಿಡುವ ಕೆಲಸವನ್ನು ಯಾರೋ ಮಾಡುತ್ತಿದ್ದಾರೆ. ಹಿಂದೂ ಸಮುದಾಯದ ನಡುವೆ ಕೆಲವು ಕ್ಷುಲ್ಲಕ ಕಾರಣಗಳನ್ನು ತಂದಿಟ್ಟು ಚಂದ ನೋಡುತ್ತಿದ್ದಾರೆ. ಯಾರ ಮೇಲೆಯೂ ಹಾನಿ ಮಾಡದ ಯಾರ ಮೇಲೆಯೂ ಸವಾರಿ ಮಾಡದ ಆಚರಣೆಗಳನ್ನು ದೇವಸ್ಥಾನಗಳಲ್ಲಿ ಧಾರ್ಮಿಕ ಕೇಂದ್ರಗಳಲ್ಲಿ ನಡೆಸಿದರೆ ತಪ್ಪೇನು? ದುರುದ್ದೇಶ ಇಲ್ಲದ ಆಚರಣೆಗಳು ಧಾರ್ಮಿಕ ಕೇಂದ್ರಗಳಲ್ಲಿ ನಡೆದರೆ ತಪ್ಪೇನು? ಮುದ್ರಾಧಾರಣೆಯಲ್ಲಿ ಪಾಲ್ಗೊಳ್ಳುವುದು ವೈಷ್ಣವ ಭಕ್ತರು ಮಾತ್ರ. ಹಲವಾರು ದೇವಸ್ಥಾನಗಳಲ್ಲಿ ವೈಷ್ಣವರೇ ಪೂಜೆಯನ್ನು ನೆರವೇರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಯಾವುದೇ ಗೊಂದಲಗಳು ಆಗಿಲ್ಲ. ಅತಿ ಹೆಚ್ಚು ಸಂಖ್ಯೆಯಲ್ಲಿ ಶೈವರಿರುವ ಪ್ರದೇಶಗಳಲ್ಲಿ ಯಾವ ವೈಷ್ಣವರು ಕೂಡ ತಪ್ತ ಮುದ್ರಾಧಾರಣೆಯನ್ನು ಮಾಡುವುದಿಲ್ಲ. ಅಲ್ಲಿ ಯಾವುದೇ ಗೊಂದಲಗಳು ಆಗಿಲ್ಲ. ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಧಾರವಾಡ ಮತ್ತು ಉತ್ತರ ಕರ್ನಾಟಕದ ಕೆಲವು ಜಿಲ್ಲೆ ಈ ಸಂಪ್ರದಾಯ ಆಚರಣೆಯಲ್ಲಿ ಇದೆ ಎಂದು ವಾಸುದೇವ ಭಟ್ ವಿವರಿಸಿದರು. ಇದನ್ನೂ ಓದಿ: ಮೋದಿಯಿಂದಾಗಿ ನಳಿನ್ ಕುಮಾರ್ ಕಟೀಲ್ ಡಾಲರ್ ಪದ ಕೇಳಿದರೆ ಬೆಚ್ಚಿ ಬೀಳುತ್ತಾರೆ: ಕಾಂಗ್ರೆಸ್
ಹಲವಾರು ಶೈವ ದೇವಸ್ಥಾನಗಳಲ್ಲಿ ವೈಷ್ಣವರೇ ಪೂಜೆ ಮಾಡಿಕೊಂಡು ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಈಶ್ವರ ದೇವಸ್ಥಾನಗಳಲ್ಲಿ ವಿಷ್ಣು ಸಹಸ್ರನಾಮ ಬಹಳ ಕಾಲಗಳಿಂದ ನಡೆದುಕೊಂಡು ಬರುತ್ತಿದೆ. ದೇವಸ್ಥಾನದ ಚಾವಡಿಗಳಲ್ಲಿ ಧಾರ್ಮಿಕ ಕಾರ್ಯಗಳು ನಡೀತಾ ಇರಬೇಕು. ವಿಷ್ಣು ದೇವಸ್ಥಾನಗಳಲ್ಲಿ ರುದ್ರಯಾಗ ನಡೆಯುತ್ತದೆ. ದುರ್ಗಾ ದೇವಸ್ಥಾನಗಳಲ್ಲಿ ಸತ್ಯನಾರಾಯಣ ಪೂಜೆ, ಶನಿ ಪೂಜೆಗಳು ನಡೆದುಕೊಂಡು ಬರುತ್ತಿವೆ. ಯಾವುದೇ ದೇವರ ಭಾವಚಿತ್ರಗಳನ್ನು ದೇವಸ್ಥಾನದಲ್ಲಿ ಇಟ್ಟು ಪೂಜೆ ಮಾಡುತ್ತಿದ್ದೀರಿ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಶಿವ ದುರ್ಗೆ ವಿಷ್ಣುವಿನ ದೇವಸ್ಥಾನದಲ್ಲಿ ಸತ್ಯನಾರಾಯಣ ಪೂಜೆ ನಿರಂತರವಾಗಿ ನಡೆದುಕೊಂಡು ಬರುತ್ತಿದೆ. ಇದು ತಪ್ಪು ಅಂತ ನೀವು ಹೇಳ್ತೀರಾ? ವರಮಹಾಲಕ್ಷ್ಮಿ, ಶನಿ ಪೂಜೆಗಳು ದೇವಸ್ಥಾನಗಳಲ್ಲಿ ನಡೆಯುತ್ತದೆ ಇದು ತಪ್ಪಾ ಎಂದು ಧಾರ್ಮಿಕ ದತ್ತಿ ಇಲಾಖೆಗೆ ಪ್ರಶ್ನೆ ಮಾಡಿದರು.
ದೇವಸ್ಥಾನದ ಪದ್ಧತಿಗಳಿಗೆ ಇಂತಹ ಬೆಳವಣಿಗೆಗಳಿಂದ ಯಾವ ತೊಂದರೆ ಆಗಿದೆ ಎಂದು ಸ್ಪಷ್ಟಪಡಿಸಬೇಕು. ಅನಗತ್ಯವಾದ ಚರ್ಚೆಗೆ ಸರ್ಕಾರ ಎಡೆ ಮಾಡಿಕೊಟ್ಟಿದೆ. ಯಾವುದೋ ಕಲ್ಯಾಣ ಮಂಟಪಗಳು ಯುವಕ ಮಂಡಲ ಸಾರ್ವಜನಿಕ ಸಭಾಂಗಣದಲ್ಲಿ ನಡೆಯುವ ಬದಲು ಧಾರ್ಮಿಕ ಕೆಲಸಗಳು ದೇವಸ್ಥಾನಗಳಲ್ಲಿ ನಡೆದರೆ ಏನು ತಪ್ಪು? ದೇವಸ್ಥಾನಗಳಲ್ಲಿ ಋಷಿಮುನಿಗಳು ಆಚಾರತ್ರಯರ ಜಯಂತಿ ಮಾಡದೆ ಹೋದರೆ ಇದನ್ನೆಲ್ಲಾ ಸಾರ್ವಜನಿಕ ಕಟ್ಟೆಗಳಲ್ಲಿ ರಸ್ತೆ ಬದಿಗಳಲ್ಲಿ ಮಾಡಲು ಸಾಧ್ಯವೇ? ಧಾರ್ಮಿಕ ಸನಾತನ ಧರ್ಮದ ಚೌಕಟ್ಟಿನಲ್ಲಿ ಇಂಥ ಆಚರಣೆಗಳು ಆಗದಿದ್ದರೆ ಏನು ಪ್ರಯೋಜನ? ರಾಮಾನುಜಾಚಾರ್ಯರು ಶಂಕರಾಚಾರ್ಯರು ಮಧ್ವಾಚಾರ್ಯ ಜಯಂತಿ ಜಯಂತಿಗಳು ಒಂದು ದೇವಸ್ಥಾನಗಳಲ್ಲಿ ನಡೆಯುತ್ತಿದೆ ಎಂದರೆ ಖುಷಿ ಪಡಬೇಕು ಅದಕ್ಕೆ ವಿರೋಧ ವ್ಯಕ್ತಪಡಿಸುವುದಲ್ಲ. ಸನಾತನ ಧರ್ಮಕ್ಕೆ ಯಾರೆಲ್ಲ ಕೊಡುಗೆಗಳನ್ನು ಕೊಟ್ಟಿದ್ದಾರೆ ಅವರನ್ನು ದೇವಸ್ಥಾನಗಳಲ್ಲಿ ಆಚರಣೆ ಮಾಡಿದರೆ ಏನು ನಷ್ಟ. ಯಾರಿಗೆ ಏನು ಸಮಸ್ಯೆ. ಹಾಗಾದರೆ ಸಮಾಜಕ್ಕೆ ಕೊಡುವ ಸಂದೇಶಗಳಾದರೂ ಏನು ಸಮಾಜವನ್ನು ಒಗ್ಗೂಡಿಸುವ ಕೆಲಸ ಬಿಟ್ಟು ಅದರಲ್ಲಿ ಹುಳಿ ಹಿಂಡುವ ಕೆಲಸವನ್ನು ಮಾಡಬೇಡಿ. ಕೆಲಸದಲ್ಲಿ ಹುಳುಕು ಅನ್ನು ಹುಡುಕುವ ಪ್ರಯತ್ನ ಮಾಡಬಾರದು. ತಪ್ತ ಮುದ್ರಾಧಾರಣೆಯಿಂದ ದೈಹಿಕ ಕ್ಷಮತೆ. ವೈಜ್ಞಾನಿಕವಾಗಿ ದೇಹಕ್ಕೆ ಬೇಕಾಗುವಂತಹ ಕ್ಷಮತೆಯನ್ನು ತಪ್ತ ಮುದ್ರಾಧಾರಣೆ ಕೊಡುತ್ತದೆ. ಎಲ್ಲಾ ಸಮುದಾಯದವರು ಮುದ್ರಾಧಾರಣೆಯನ್ನು ಮಾಡಿಸಿಕೊಂಡು ಬರುತ್ತಾರೆ. ದೇಹದಲ್ಲಿ ಪ್ರತಿರೋಧ ಶಕ್ತಿಯನ್ನು ಹೆಚ್ಚಿಸುತ್ತದೆ. ಚೆನ್ನೈನಲ್ಲಿ ಅನೇಕ ಸಂಖ್ಯೆಯಲ್ಲಿ ಬ್ರಾಹ್ಮಣರೇತರರು ಮುದ್ರಾ ಆಧಾರಣೆಯನ್ನು ಮಾಡಿಕೊಂಡು ಬರುತ್ತಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.