ವರ್ಷದ ಪ್ರಯತ್ನದ ಫಲ, `ಕಾಜೂರು ಕರ್ಣ’ ಸೆರೆ – ರೈತರ ಗುಂಡಿನ ದಾಳಿಯಿಂದ ಆನೆ ನರಳಾಟ

Public TV
2 Min Read
Kodagu Elephant 4

ಮಡಿಕೇರಿ: ಮೈತುಂಬೆಲ್ಲ ಗುಂಡೇಟಿನ ಚಹರೆಗಳು. ಎರಡು ಕಾಲಿನಲ್ಲಿ ಸ್ವಾಧೀನ ಇಲ್ಲದೇ ರೋದಿಸುತ್ತಿರುವ ಕಾಡಾನೆ. ಸಾಕಾನೆ ಶಿಬಿರದ ಆನೆ ಕ್ರಾಲ್ ಒಳಗೆ ಚಿಕಿತ್ಸೆ ಪಡೆಯುತ್ತಿರುವ ಕಾಜೂರು ಕರ್ಣ. ಈ ದೃಶ್ಯ ಕಂಡು ಬಂದಿದ್ದು ಕೊಡಗಿನ ದುಬಾರೆ ಸಾಕಾನೆ ಶಿಬಿರ (Dubare Elephant camp) ದಲ್ಲಿ.

Kodagu Elephant 3

ಹೌದು. ಒಂದು ವರ್ಷದ ಪ್ರಯತ್ನದ ಫಲವಾಗಿ `ಕಾಜೂರು ಕರ್ಣ’ ಸೆರೆಯಾಗಿದ್ದಾನೆ. ಆದ್ರೆ ಜಮೀನಿಗೆ ಲಗ್ಗೆ ಇಡುವ ವೇಳೆ ರೈತರು (Farmers) ಆನೆ ಮೇಲೆ ಗುಂಡಿನ ದಾಳಿಯಿಂದ ಆನೆ ನರಳಾಡುತ್ತಿದೆ. ಆನೆಯ ನರಳಾಟ ಕಂಡು ಅರಣ್ಯ ಇಲಾಖೆ ಸಿಬ್ಬಂದಿ ಕಣ್ಣೀರು ಹಾಕುತ್ತಿದ್ದಾರೆ. ಇದನ್ನೂ ಓದಿ: ಭಾರತ್‌ ಜೋಡೋ ಯಾತ್ರೆಯಲ್ಲಿ ಕಾಣಿಸಿಕೊಂಡಿದ್ದ ʻಕೈʼ ಕಾರ್ಯಕರ್ತೆ ಸೂಟ್‌ಕೇಸ್‌ನಲ್ಲಿ ಶವವಾಗಿ ಪತ್ತೆ

Kodagu Elephant 2

ಕೆಲ ವರ್ಷಗಳಿಂದ ಸೋಮವಾರಪೇಟೆ ತಾಲ್ಲೂಕಿನ ಕಾಜೂರು ಭಾಗದಲ್ಲಿ ಜನರಿಗೆ ಇನ್ನಿಲ್ಲದಂತೆ ಕಾಡುತ್ತಿದ್ದ ಒಂಟಿ ಸಲಗವನ್ನು ಅರಣ್ಯ ಇಲಾಖೆ (Forest Department) ಒಂದು ತಿಂಗಳ ಹಿಂದೆ ಸೆರೆ ಹಿಡಿಯುವಲ್ಲಿ ಯಶಸ್ವಿಯಾಯಿತು. ಕಾಜೂರು ಕರ್ಣ ಎಂದೇ ಕಾಜೂರು ಭಾಗದಲ್ಲಿ ಹೆಸರಾಗಿದ್ದ ಕಾಡಾನೆ (Wild Elephant) ಸೆರೆಗೆ ಒಂದು ವರ್ಷದ ಹಿಂದೆಯೆ ಅನುಮತಿ ದೊರೆತಿತ್ತು. ಆದರೆ, ಅಷ್ಟೂ ದಿನಗಳಿಂದ ಅರಣ್ಯ ಇಲಾಖೆಯ ಕಣ್ತಪ್ಪಿಸಿ ಚಾಣಾಕ್ಷತನದಿಂದ ಈ ಆನೆ ತಪ್ಪಿಸಿಕೊಳ್ಳುತ್ತಿತ್ತು. ಸಿಸಿಟಿವಿಗಳನ್ನು ಅಳವಡಿಸಿ ಕಾಡಾನೆಯನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಸೆರೆ ಹಿಡಿದು ದುಬಾರೆ ಸಾಕಾನೆ ಶಿಬಿರಕ್ಕೆ ಕರೆತಂದಿದ್ದಾರೆ. ಆದ್ರೆ, ಈ ವೇಳೆ ಕಾಜೂರು ಕರ್ಣನ ಮೈತುಂಬ ಗುಂಡಿನ ದಾಳಿಗಳೇ ನಡೆದಿರೋದು ಕಂಡು ಬಂದಿದೆ.

Kodagu Elephant

ಎರಡು ಕಾಲಿಗೂ ಗುಂಡೆಟ್ಟು ತಗುಲಿ ಕಾಲಿನ ಸ್ವಾದಿನವನ್ನೆ ಕರ್ಣ ಕಳೆದುಕೊಂಡು ಮುಕರೋಧನೆಯನ್ನು ಅನುಭವಿಸುತ್ತಿದ್ದಾನೆ. ಒಂದು ತಿಂಗಳಿನಿಂದ ನಿದ್ರೆಯನ್ನು ಮಾಡದೇ ನೋವು ನುಂಗುತ್ತಿದ್ದಾನೆ. ಆನೆ ಪರಿಸ್ಥಿತಿ ಕಂಡು ಅರಣ್ಯ ಇಲಾಖೆ ಅಧಿಕಾರಿಗಳೇ ಕಣ್ಣಿರು ಸುರಿಸುತ್ತಿದ್ದಾರೆ. ಗುಂಡಿನ ದಾಳಿ ನಡೆಸುವ ಬದಲು ಪಟಾಕಿ ಸಿಡಿಸಿ, ಸದ್ದು ಮಾಡಿ ಕಾಡಾನೆಗಳನ್ನು ಹಿಮ್ಮೆಟ್ಟಿಸಿ ಅಂತ ಅರಣ್ಯ ಇಲಾಖೆ ಸಿಬ್ಬಂದಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಕಿಚನ್‌ನಲ್ಲಿ ಕಪ್ಪು ಪ್ಲಾಸ್ಟಿಕ್ ಕಂಟೇನರ್ ಬಳಸೋ ಮುನ್ನ ಎಚ್ಚರ! – ಇದು ಎಷ್ಟು ಸುರಕ್ಷಿತ?

ಕೊಡಗು ಜಿಲ್ಲೆಯಲ್ಲಿ ಆನೆ ಮಾನವನ ಸಂಘರ್ಷ ಹಲವಾರು ವರ್ಷಗಳಿಂದ ಇದೆ. ಇಲ್ಲಿನ ಜನ ಕಾಡಾನೆಗಳ ಜೊತೆಯೂ ಬದುಕು ಸಾಗಿಸುವ ದಾರಿಯನ್ನು ಕಂಡುಕೊಂಡಿದ್ದಾರೆ. ಶಿಬಿರದಲ್ಲಿ ಇರುವ ಕಾಜೂರು ಕರ್ಣನ ಪರಿಸ್ಥಿತಿಯನ್ನು ಕಂಡು ರೈತರು ಕೂಡ ಮರಗುತ್ತಿದ್ದಾರೆ. ಇದನ್ನ ಅರಣ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿ ಕಾಡಾನೆಗಳು ನಾಡಿನತ್ತ ಕಾಲಿಡದಂತೆ ಕ್ರಮವಹಿಸಿ ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ರಾಜಕೀಯ ಚದುರಂಗದಾಟಕ್ಕೆ ಮೂಡಿಗೆರೆ ಬಿಜೆಪಿ ಬಲಿ, ಬಹುಮತವಿದ್ರೂ ಕಾಂಗ್ರೆಸ್‌ಗೆ ಅಧಿಕಾರ!

Share This Article