ಯಶ್ ನಾಯಕನಾಗಿ ನಟಿಸಿರುವ ಕೆಜಿಎಫ್ 1 ಮತ್ತು ಕೆಜಿಎಫ್ 2 ಚಿತ್ರಗಳು ಇತ್ತೀಚೆಗಷ್ಟೇ ಜಪಾನ್ ಭಾಷೆಗೆ ಡಬ್ ಆಗಿ ರಿಲೀಸ್ ಆಗಿದ್ದವು. ಕನ್ನಡದ ಚಿತ್ರಕ್ಕೆ ಜಪಾನ್ ಸಿನಿಮಾ ನೋಡುಗರು ಕೂಡ ಅತ್ಯುತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ರಿಲೀಸ್ ಆದ ಹತ್ತು ದಿನಕ್ಕೆ ಸಾವಿರದ ನಾಲ್ಕು ನೂರು ಟಿಕೆಟ್ ಗಳು ಮಾರಾಟವಾಗಿವೆ ಎಂದು ಅಂದಾಜಿಸಲಾಗಿದೆ. ಅದರಲ್ಲೂ ವಾರಾಂತ್ಯದ ಬಹುತೇಕ ಶೋಗಳು ಹೌಸ್ ಫುಲ್ ಪ್ರದರ್ಶನ ಕಂಡಿವೆ.
Advertisement
ಪ್ರಶಾಂತ್ ನೀಲ್ (Prashant Neel) ನಿರ್ದೇಶನದ ಕೆಜಿಎಫ್ (KGF) ಸರಣಿ ಸಿನಿಮಾಗಳು ರಿಲೀಸ್ ಆಗಿ ಹಲವು ವರ್ಷಗಳೇ ಕಳೆದಿದಿದ್ದರೂ ಅದರ ಕ್ರೇಜ್ ಇನ್ನೂ ನಿಂತಿಲ್ಲ ಎನ್ನುವುದಕ್ಕೆ ಜಪಾನ್ ನೋಡುಗರೇ ಸಾಕ್ಷಿಯಾಗಿದ್ದಾರೆ. ಭಾರತದಲ್ಲೂ ಕೆಜಿಎಫ್ 1 ಮತ್ತು ಕೆಜಿಎಫ್ 2 ಎರಡೂ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಸಾಕಷ್ಟು ಕಮಾಯಿ ಮಾಡಿದವು. ಇದೀಗ ಈ ಎರಡೂ ಚಿತ್ರಗಳು ಜಪಾನ್ (Japan) ಭಾಷೆಗೆ ಡಬ್ ಆಗಿ ಅಲ್ಲಿಯೂ ಉತ್ತಮ ಕಲೆಕ್ಷನ್ ಮಾಡಿವೆ.
Advertisement
Advertisement
ಇದೇ ಮೊದಲ ಬಾರಿಗೆ ಜಪಾನ್ ನಲ್ಲಿ ಏಕಕಾಲಕ್ಕೆ ಸರಣಿ ಚಿತ್ರಗಳು ಬಿಡುಗಡೆ ಆಗಿದ್ದು ವಿಶೇಷ. ಸಿನಿಮಾ ರಿಲೀಸ್ ಗೂ ಮುನ್ನ ಜಪಾನ್ ನಲ್ಲಿ ಪ್ರಚಾರ ಕಾರ್ಯ ಕೂಡ ಶುರು ಮಾಡಿದ್ದರಿಂದ, ಸಿನಿಮಾ ಬಿಡುಗಡೆಗೂ ಮೊದಲು ಕೆಜಿಎಫ್ 1 ಸಿನಿಮಾ 91 ಶೋಗಳು ಹಾಗೂ ಕೆಜಿಎಫ್ 2 ಸಿನಿಮಾದ 85 ಶೋಗಳು ಮುಂಗಡವಾಗಿ ಬುಕ್ ಆಗಿದ್ದವು.
Advertisement
ಕೆಜಿಎಫ್ ಚಿತ್ರಗಳ ಮೂಲಕ ಪ್ಯಾನ್ ಇಂಡಿಯಾ ನೋಡುಗರನ್ನು ತಲುಪಿದ್ದರು ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ನಟ ಯಶ್ (Yash). ಕೆಜಿಎಫ್ 1 ಮಾಡಿದ ಮೋಡಿಯೇ ಕೆಜಿಎಫ್ 2 ಚಿತ್ರಕ್ಕೆ ಸಾಕಷ್ಟು ಪ್ಲಸ್ ಪಾಯಿಂಟ್ ಆಯಿತು. ಮೊದಲ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ತಂದುಕೊಟ್ಟ ಹಣದ ಎರಡರಷ್ಟು ಪಾರ್ಟ್ 2 ಮಾಡಿತು. ಹೀಗಾಗಿ ಎರಡೂ ಚಿತ್ರಗಳ ಮೂಲಕ ಕೇವಲ ದೇಶದಲ್ಲಿ ಮಾತ್ರವಲ್ಲ, ವಿದೇಶದಲ್ಲೂ ಕನ್ನಡ ಚಿತ್ರಗಳಿಗೆ ಬೇಡಿಕೆ ಬಂತು.
ಆರ್.ಆರ್.ಆರ್ ಸಿನಿಮಾದ ನಂತರ ದಕ್ಷಿಣದ ಮತ್ತೊಂದು ಸಿನಿಮಾ ಜಪಾನ್ ಭಾಷೆಯಲ್ಲಿ ರಿಲೀಸ್ ಆಗುತ್ತಿರುವುದು ಗುರುತಿಸಬೇಕಾದ ಸಂಗತಿ. ಅದಕ್ಕಾಗಿ ನಟ ಯಶ್ ಜಪಾನ್ ಭಾಷೆಯಲ್ಲೇ ವಿಡಿಯೋವೊಂದನ್ನು ಮಾಡಿ, ಸಿನಿಮಾ ನೋಡುವಂತೆ ಅಲ್ಲಿನ ಅಭಿಮಾನಿಗಳಿಗೆ ಮನವಿ ಮಾಡಿದ್ದರು.
ರಾಜಮೌಳಿ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಆರ್.ಆರ್.ಆರ್ ಸಿನಿಮಾ ಕೂಡ ಈ ಹಿಂದೆ ಜಪಾನ್ ಭಾಷೆಯಲ್ಲಿ ರಿಲೀಸ್ ಆಗಿತ್ತು. ನೂರು ಕೋಟಿಗೂ ಅಧಿಕ ಹಣವನ್ನು ಬಾಕ್ಸ್ ಆಫೀಸಿನಲ್ಲಿ ಲೂಟಿ ಮಾಡಿತ್ತು. ಆ ಸಿನಿಮಾ ಗೆಲುವು ಕಂಡ ಬೆನ್ನಲ್ಲೇ ಕೆಜಿಎಫ್ ಸಿನಿಮಾವನ್ನೂ ಜಪಾನ್ ಭಾಷೆಯಲ್ಲಿ ರಿಲೀಸ್ ಮಾಡಲಾಗಿದೆ. ಅದಕ್ಕೆ ಉತ್ತಮ ರೀತಿಯಲ್ಲೇ ಪ್ರತಿಕ್ರಿಯೆ ವ್ಯಕ್ತವಾಗಿದೆ.
Web Stories