ಬೆಂಗಳೂರು: ಸಿಲಿಕಾನ್ ಸಿಟಿ ವಿಮಾನ ನಿಲ್ದಾಣ ಹಾಗೂ ನಮ್ಮ ನಗರದ ಬಗ್ಗೆ ಈ ಹಿಂದೆ ಇದ್ದ ದಕ್ಷತೆ ಹಾಗೂ ಖ್ಯಾತಿ ಇತ್ತೀಚೆಗೆ ಹಾಳಾಗುತ್ತಿದೆ ಎಂದು ಖ್ಯಾತ ಉದ್ಯಮಿ ಹಾಗೂ ಬೆಂಗಳೂರು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ಮಾಜಿ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ ಟ್ವಿಟ್ಟರ್‌ನಲ್ಲಿ ಟೀಕೆ ಮಾಡಿದ್ದಾರೆ.
ಟ್ವಿಟ್ಟರ್‌ನಲ್ಲಿ ಬೆಂಗಳೂರು ವಿಮಾನ ನಿಲ್ದಾಣದ ಬಗ್ಗೆ ಟೀಕಿಸಿರುವ ಕಿರಣ್, ನಮ್ಮ ಪ್ರಯಾಣ ಯಾವಾಗಲೂ ಸ್ಮಾರ್ಟ್ ಹಾಗೂ ಡಿಜಿಟಲ್ ಆಗಿರಬೇಕು. ಮುಖವನ್ನು ಗುರುತಿಸುವ ತಂತ್ರಜ್ಞಾನ, ಬಯೋಮೆಟ್ರಿಕ್ಸ್ ಪ್ರವೇಶ ಹಾಗೂ ನಿರ್ಗಮನವನ್ನು ಪರಿಣಾಮಕಾರಿಯಾಗಿ ಮಾಡಬೇಕು. ಆದರೆ ಪ್ರಯಾಣದ ಬಗ್ಗೆ ಇರುವ ಈ ತಂತ್ರಜ್ಞಾನದ ನಮ್ಮ ನಿರೀಕ್ಷೆ ದುಃಸ್ವಪ್ನವಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಮರು ಪರೀಕ್ಷೆ ನಡೆದರೆ ಜ್ಞಾನೇಂದ್ರರಂತಹ ಅಸಮರ್ಥರು ಪಿಎಸ್‍ಐಗಳಾಗಿ ನೇಮಕಗೊಂಡರೂ ಆಶ್ಚರ್ಯ ಇಲ್ಲ: ಸಿದ್ದು
Advertisement
Immigration needs to be smart n digital. Face recognition technology n biometrics should make the entry n exit efficient. Right now immigration is a nightmare at @BLRAirport n is ruining our city’s previous reputation of being most efficient @HariMarar
— Kiran Mazumdar-Shaw (@kiranshaw) April 30, 2022
Advertisement
ಈ ಟೀಕೆಗೆ ಪ್ರತಿಕ್ರಿಯೆ ನೀಡಿರುವ ಬೆಂಗಳೂರು ವಿಮಾನ ನಿಲ್ದಾಣದ ಅಧಿಕೃತ ಖಾತೆ, ಪತ್ರ ಬರೆದಿರುವುದಕ್ಕಾಗಿ ಧನ್ಯವಾದಗಳು. ನಾವು ಖಂಡಿತವಾಗಿಯೂ ನಿಮ್ಮ ಪ್ರತಿಕ್ರಿಯೆಯನ್ನು ನಮ್ಮ ಕಾರ್ಯಾಚರಣೆ ತಂಡದೊಂದಿಗೆ ಹಂಚಿಕೊಳ್ಳುತ್ತೇವೆ ಎಂದು ಬರೆದಿದೆ. ಇದನ್ನೂ ಓದಿ: ಶೀಘ್ರದಲ್ಲೇ ಪಿಎಸ್‍ಐ ಮರುಪರೀಕ್ಷೆ ದಿನಾಂಕ ಪ್ರಕಟ: ಆರಗ ಜ್ಞಾನೇಂದ್ರ