ಅದ್ಭುತ ಅಭಿನಯದಿಂದ, ಅಮೋಘ ಸಿರಿಯಿಂದ ಕಲಾರಸಿಕರ ಹೃದಯ ಗೆಲ್ಲುವ ಕೆಲ ನಟಿಮಣಿಯರು, ಅಭಿಮಾನಿಗಳ ಪ್ರೀತಿ ಸಂಪಾದನೆ ಮಾಡುವುದರ ಜೊತೆಗೆ ಕರ್ನಾಟಕ ಕ್ರಷ್ ಪಟ್ಟಕ್ಕೇರಿ ಕರುನಾಡಿನ ಅಂಗಳದಲ್ಲಿ ಮೆರವಣಿಗೆ ಹೋಗಿ ಬರುತ್ತಾರೆ. ಕಳೆದ ವರ್ಷ ಕಾಂತಾರ ಲೀಲಾ ಹೊಸದೊಂದು ಕ್ರೇಜ್ ಸೃಷ್ಟಿಸಿ, ಮುತ್ತಿನ ಪಲ್ಲಕ್ಕಿ ಏರಿ ಕರ್ನಾಟಕ ಮಾತ್ರವಲ್ಲದೇ ಇಡೀ ಜಗತ್ತು ಸುತ್ತಿಬಂದರು. ಅಚ್ಚರಿ ಅಂದರೆ ಈ ನಟಿ ಕರ್ನಾಟಕ ತುಂಬೆಲ್ಲಾ ದಿಬ್ಬಣ ಹೊರಡುವ ಮೊದಲೇ ಸಂಚಲನ ಸೃಷ್ಟಿಸಿದ್ದಾರೆ. ಅದೊಂದು ಹಾಡಿನಿಂದ ಕರ್ನಾಟಕ ಕ್ರಷ್ ಕಿರೀಟ ಗೆಲ್ಲುವ ಭರವಸೆ ಮೂಡಿಸಿದ್ದಾರೆ. ಅಷ್ಟಕ್ಕೂ, ಆ ನಟಿ ಬೇರಾರು ಅಲ್ಲ ಕೌಸಲ್ಯ ಸುಪ್ರಜಾ ರಾಮನ (Kausalya Supraja Rama) ರಾಣಿ ಬೃಂದಾ ಆಚಾರ್ಯ
Advertisement
ಬೃಂದಾ ಆಚಾರ್ಯ (Brinda Acharya) ಹೊನ್ನಾವರದ ಹೊನ್ನಿನಂತಹ ಚೆಲುವೆ. ಅಮರ ಶಿಲ್ಪಿ ಜಕಣಚಾರಿ ಕೆತ್ತಿದ ಶಿಲಾಬಾಲಿಕೆಯಂತಿರೋ ಈ ಬೆಡಗಿ, ನಗುವೆಂಬ ಆಭರಣದಿಂದಲೇ ಕನ್ನಡ ಕಲಾಭಿಮಾನಿಗಳನ್ನ ಮನಸೂರೆಗೊಳ್ಳುತ್ತಿದ್ದಾರೆ. ತನ್ನ ಸಹಜ ಸೌಂದರ್ಯದಿಂದ ಹರೆಯದ ಹುಡುಗರ ಹೃದಯ ಕದ್ದು, ಪಡ್ಡೆಹೈಕ್ಳ ನಿದ್ದೆಗೆಡಿಸಿರೋ ಈ ಸುಂದರಿ, `ಕೌಸಲ್ಯೆಯ ಸುಪುತ್ರ ರಾಮ’ನಿಗೆ ಜೊತೆಯಾಗಿ ಕರ್ನಾಟಕ ಕ್ರಷ್ ಆಗುವತ್ತ ಹೊರಟಿದ್ದಾಳೆ. ಈಗಾಗಲೇ ಶಿವಾನಿಯಾಗಿ ಎಲ್ಲರ ಹೃದಯ ಗೆದ್ದಿದ್ದಾಳೆ. ಈಕೆಯ ಜವಾನಿ ಕಂಡು ತಲೆಕೆಡಿಸಿಕೊಂಡಿರೋ ಹುಡುಗರು, ನಾವು ಸೋತೋಗ್ಬಿಟ್ವಲ್ಲೇ ಶಿವಾನಿ ಅಂತ ಹಾಡಿ ಕುಣಿಯುತ್ತಿದ್ದಾರೆ.
Advertisement
Advertisement
ಇದೇ ಖುಷಿಯಲ್ಲಿ ನಮ್ಮೊಟ್ಟಿಗೆ ಮಾತಿಗಿಳಿದ ಶಿವಾನಿ, ಜುಲೈ 28 ರಿಂದ ನಾನು ಪಡ್ಡೆಹುಡುಗರ ಆಲ್ ಟೈಮ್ ಕ್ರಷ್ ಆಗೋದ್ರಲ್ಲಿ ನೋ ಡೌಟ್ ಎಂದರು. ಅಂದ್ಹಾಗೇ, ಜುಲೈ 28 ರಂದು ಶಿವಾನಿ ನಟಿಸಿರುವ `ಕೌಸಲ್ಯ ಸುಪ್ರಜಾ ರಾಮ’ ಚಿತ್ರ ಕರ್ನಾಟಕದಾದ್ಯಂತ ಅದ್ದೂರಿಯಾಗಿ ರಿಲೀಸ್ ಆಗ್ತಿದೆ. ಶಶಾಂಕ್ (Shashank) ನಿರ್ದೇಶನ ಚಿತ್ರಕ್ಕಿದ್ದು, ಡಾರ್ಲಿಂಗ್ ಕೃಷ್ಣಾಗೆ (Darling Krishna) ಶಿವಾನಿ ಅಲಿಯಾಸ್ ಬೃಂದಾ ಆಚಾರ್ಯ ಜೋಡಿಯಾಗಿದ್ದಾರೆ. ಮಿಲನ ನಾಗರಾಜ್ ಕೂಡ ಈ ಸಿನಿಮಾದಲ್ಲಿ ಮಿಂಚಿದ್ದು, ನಿಧಿ ಪಾತ್ರವನ್ನ ಡೈರೆಕ್ಟರ್ ಗುಟ್ಟಾಗಿರಿಸಿದ್ದಾರೆ
Advertisement
ನಿರ್ದೇಶಕ ಶಶಾಂಕ್ ಅವರು ತಮ್ಮ ಸಿನಿಮಾಗಳಲ್ಲಿ ನಟಿಮಣಿಯರಿಗೆ ಪವರ್ ಫುಲ್ ರೋಲ್ ನ ಸೃಷ್ಟಿ ಮಾಡ್ತಾರೆ. ಫರ್ಪಾಮೆನ್ಸ್ ಗೆ ಸ್ಕೋಪ್ ಇರುವ ಪಾತ್ರ ಕೆತ್ತನೆ ಮಾಡುವುದರಿಂದ ಮೊಗ್ಗಿನ ಮನಸು ಡೈರೆಕ್ಟರ್ ಜೊತೆ ವರ್ಕ್ ಮಾಡುವುದಕ್ಕೆ ನಾಯಕಿಯರು ತುದಿಗಾಲಲ್ಲಿ ನಿಂತಿರ್ತಾರೆ. ಇದಕ್ಕೆ ಬೃಂದಾ ಆಚಾರ್ಯ ಕೂಡ ಹೊರತಾಗಿರಲಿಲ್ಲ. ಯಾವಾಗ ಶಶಾಂಕ್ ಸರ್ ಸಿನಿಮಾದಲ್ಲಿ ಅವಕಾಶ ಸಿಗುತ್ತಪ್ಪ ಅಂತ ಕಾಯ್ತಿದ್ದ ಬೃಂದಾಗೆ, `ಕೌಸಲ್ಯ ಸುಪ್ರಜಾ ರಾಮ’ ಚಿತ್ರದಲ್ಲಿ ಶಿವಾನಿ ಪಾತ್ರ ಪೋಷಣೆ ಮಾಡುವ ಚಾನ್ಸ್ ಸಿಗ್ತು. ರಿಯಲ್ ಲೈಫ್ ನಲ್ಲೂ ಎಂಜಿನಿಯರ್ ಆಗಿ ವರ್ಕ್ ಮಾಡ್ತಿದ್ದ ಬೃಂದಾಗೆ, ರೀಲ್ ಲೈಫ್ ನಲ್ಲಿ, `ಕೌಸಲ್ಯ ಸುಪ್ರಜಾ ರಾಮ’ದಲ್ಲಿ ಎಂಜಿನಿಯರ್ ಹುಡುಗಿ ಪಾತ್ರ ಪ್ಲೇ ಮಾಡುವ ಅದೃಷ್ಟ ಒದಗಿಬಂತು. ಹೀಗಾಗಿ, ಬೃಂದಾ ದಿಲ್ ಖುಷ್ ಆಗಿದ್ದಾರೆ. ಈ ಸಿನಿಮಾ ರಿಲೀಸ್ ಆದ್ಮೇಲೆ ಎಲ್ಲಾ ಹುಡುಗರು ಶಿವಾನಿ ಥರ ಹುಡುಗಿ ಬೇಕು ಅಂತ ಹಠ ಹಿಡಿಯುತ್ತಾರೆಂದು ಖುಷಿಯಿಂದ ಹೇಳಿಕೊಳ್ತಾರೆ.
ಈ ಹಿಂದೆ ಬೃಂದಾ ಎರಡು ಸಿನಿಮಾ ಮಾಡಿದ್ದಾರೆ. ನೆನಪಿರಲಿ ಪ್ರೇಮ್ ಜೊತೆ `ಪ್ರೇಮಂ ಪೂಜ್ಯಂ’ ಚಿತ್ರದಲ್ಲಿ ಕ್ಲಾಸಿಕ್ ಕ್ಯಾರೆಕ್ಟರ್ ಪ್ಲೇ ಮಾಡಿ ಎಲ್ಲರ ಏಂಜೆಲ್ ಆಗಿದ್ದರು. `ಜೂಲಿಯಟ್’ ಚಿತ್ರಕ್ಕಾಗಿ ಮಾರ್ಷಲ್ ಆರ್ಟ್ಸ್ ಕಲಿತು ಕಿಕ್ಕಿರಿಸಿದ್ದರು. ಈಗ `ಕೌಸಲ್ಯ ಸುಪ್ರಜಾ ರಾಮ’ದಲ್ಲಿ ಶಿವಾನಿಯಾಗಿ ಕಲಾರಸಿಕರನ್ನು ಕ್ಲೀನ್ ಬೋಲ್ಡ್ ಮಾಡಲು ಬರುತ್ತಿದ್ದಾರೆ. ಕಿರುತೆರೆ ಲೋಕದಲ್ಲಿ ಶನಿ ಸೀರಿಯಲ್ ನಲ್ಲಿ ದಾಮಿನಿಯಾಗಿ ಮಿಂಚಿ, ಪ್ರೇಮಂ ಪೂಜ್ಯಂ ಎನ್ನುತ್ತಾ ಬಿಗ್ ಸ್ಕ್ರೀನ್ ಗೆ ಲಗ್ಗೆ ಇಟ್ಟ ಬೃಂದಾ, ಒಂದಾದ್ಮೇಲೊಂದು ಸಿನಿಮಾ ಮೂಲಕ ಬೆಳ್ಳಿತೆರೆನಾ ಆವರಿಸಿಕೊಳ್ತಿದ್ದಾರೆ. ಸಿನಿಮಾದಿಂದ ಸಿನಿಮಾಗೆ ಭಿನ್ನ- ವಿಭಿನ್ನ ಪಾತ್ರಗಳನ್ನ ಆಯ್ಕೆ ಮಾಡಿಕೊಂಡು ಚಿತ್ರಪ್ರೇಮಿಗಳ ದಿಲ್ ಕದಿಯುತ್ತಿದ್ದಾರೆ. ಸ್ಟಾರ್ ನಾಯಕಿಯಾಗುವತ್ತ ಲಗ್ಗೆ ಇಡುತ್ತಿದ್ದಾರೆ. ಆಲ್ ದಿ ಬೆಸ್ಟ್ ಬೃಂದಾ ಆಚಾರ್ಯ
Web Stories