ನವದೆಹಲಿ: ಆಂಜನೇಯನ ಜನ್ಮಸ್ಥಳ ಎಂದು ಪರಿಗಣಿಸಲಾಗುವ ನಾಸಿಕ್‌ನ (Nashik) ಅಂಜನೇರಿ ಬೆಟ್ಟಕ್ಕೆ ರೋಪ್‌ವೇ ನಿರ್ಮಿಸುವ ಯೋಜನಾ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ಪ್ರಾರಂಭಿಸಿದೆ. 377 ಕೋಟಿ ರೂ. ವೆಚ್ಚದಲ್ಲಿ ಬ್ರಹ್ಮಗಿರಿ (Brahmagiri) ಟ್ರೆಕ್ಕಿಂಗ್ ಪಾಯಿಂಟ್‌ನಿಂದ ಅಂಜನೇರಿ ಬೆಟ್ಟಗಳಿಗೆ (Anjaneri Hills) ಮುಂದಿನ ಎರಡು ವರ್ಷದ ಅವಧಿಯಲ್ಲಿ ರೋಪ್‌ವೇ (Ropeway) ನಿರ್ಮಿಸಲು ತಿರ್ಮಾನಿಸಿದೆ.
ಕೇಂದ್ರ ಸರ್ಕಾರದ ಪ್ರಮುಖ ‘ಪರ್ವತ್ಮಾಲಾ’ (Parvatmala) ಯೋಜನೆಯಡಿಯಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಶುಕ್ರವಾರ ಯೋಜನೆಗಾಗಿ ಬಿಡ್‌ಗಳನ್ನು ಆಹ್ವಾನಿಸಿದೆ. ಅಂಜನೇರಿ ಬೆಟ್ಟಗಳು ಹನುಮಂತನ ಜನ್ಮಸ್ಥಳ ಎಂದು ಹೇಳಲಾಗುತ್ತದೆ. ಇದು ಯಾತ್ರಿಕರು ಮತ್ತು ಚಾರಣಿಗರು ಭೇಟಿ ನೀಡುವ ಗುಹೆ ಮತ್ತು ಅಂಜನಿ ಮಾತಾ ದೇವಾಲಯವನ್ನು ಹೊಂದಿದೆ. ಇದನ್ನೂ ಓದಿ: ಪಠ್ಯಪುಸ್ತಕದಲ್ಲಿ ಸಾವರ್ಕರ್ ವಿಚಾರ ಕಡಿತದಿಂದ ವಿದ್ಯಾರ್ಥಿಗಳಿಗೆ ವಂಚನೆ: ರಂಜಿತ್ ಸಾವರ್ಕರ್
ಸುಮಾರು 4,200 ಅಡಿ ಎತ್ತರದಲ್ಲಿರುವ ದೇವಾಲಯವನ್ನು ತಲುಪಲು ಓರ್ವ ವ್ಯಕ್ತಿ ಮೂರು ಪರ್ವತಗಳನ್ನು ಏರಬೇಕಾಗಿದೆ. ಈ ಹಿನ್ನೆಲೆ ರೋಪ್‌ವೇ ನಿರ್ಮಾಣವಾದರೆ 5.7 ಕಿ.ಮೀ ಉದ್ದದ ರೋಪ್‌ವೇ ಮೂರು ಪರ್ವತಗಳನ್ನು ದಾಟಿ ಕೆಲವೇ ನಿಮಿಷಗಳಲ್ಲಿ ಬೆಟ್ಟದ ತುದಿಗೆ ಕರೆದೊಯ್ಯಲಿದೆ. ಇದನ್ನೂ ಓದಿ: ವೀಲ್‌ಚೇರ್ ಕೊರತೆ – ಸ್ಕೂಟಿಯಲ್ಲೇ ಆಸ್ಪತ್ರೆಯೊಳಗೆ ರೋಗಿಯನ್ನು ಕರೆದೊಯ್ದ ವ್ಯಕ್ತಿ
ಕೇಂದ್ರವು 2024ರ ವೇಳೆಗೆ ಒಟ್ಟು 90 ಕಿ.ಮೀನ 18 ರೋಪ್‌ವೇ ಯೋಜನೆಗಳನ್ನು ಯೋಜಿಸುತ್ತಿದೆ. ಶ್ರೀನಗರದ ಶಂಕರಾಚಾರ್ಯ ದೇವಸ್ಥಾನಕ್ಕೆ 1 ಕಿ.ಮೀ ರೋಪ್‌ವೇ, ಕೃಷ್ಣಾ ನದಿಗೆ ಅಡ್ಡಲಾಗಿ ಕರ್ನೂಲ್‌ನ ಶ್ರೀಶೈಲಂ ಜ್ಯೋತಿರ್ಲಿಂಗ ದೇವಸ್ಥಾನಕ್ಕೆ, ಲೇಹ್ ಅರಮನೆ, ಗ್ವಾಲಿಯರ್ ಕೋಟೆ, ಕೇದಾರನಾಥ ದೇವಾಲಯ, ಉತ್ತರಾಖಂಡದ ಹೇಮಕುಂಡ್ ಸಾಹಿಬ್‌ಗೆ ಮತ್ತು ತಮಿಳುನಾಡಿನಲ್ಲಿರುವ ಜನಪ್ರಿಯ ಗಿರಿಧಾಮ ಕೊಡೈಕೆನಾಲ್‌ಗೆ 12 ಕಿ.ಮೀ ರೋಪ್‌ವೇ ಯೋಜನೆಯನ್ನು ಯೋಜಿಸಲಾಗುತ್ತಿದೆ. ಇದನ್ನೂ ಓದಿ: ಮಹಿಳೆಯರು ತುಂಡುಡುಗೆ ಧರಿಸಿದ್ರೆ ಮಾತ್ರ ಸಮಸ್ಯೆ ಆಗುತ್ತೆ: ತೆಲಂಗಾಣ ಗೃಹ ಸಚಿವ
ಕರ್ನಾಟಕದ (Karnataka) ಉಡುಪಿ (Udupi) ಜಿಲ್ಲೆಯ ಕೊಡಚಾದ್ರಿ ಬೆಟ್ಟಗಳಿಗೆ 7 ಕಿ.ಮೀ ರೋಪ್‌ವೇ ಮತ್ತು ಹಿಮಾಚಲ ಪ್ರದೇಶದ ಕುಲುವಿನಲ್ಲಿರುವ ಬಿಜ್ಲಿ ಮಹಾದೇವ ದೇವಸ್ಥಾನಕ್ಕೆ 3 ಕಿ.ಮೀ, ತೆಲಂಗಾಣದ ಈಗಳಪೆಂಟಾದಿಂದ ಕೃಷ್ಣಾ ನದಿಗೆ ಅಡ್ಡಲಾಗಿ ಆಂಧ್ರಪ್ರದೇಶದ ಶ್ರೀಶೈಲಂ ದೇವಸ್ಥಾನಕ್ಕೆ ಮತ್ತೊಂದು ರೋಪ್‌ವೇ ನಿರ್ಮಿಸಲು ಕೇಂದ್ರ ಸರ್ಕಾರ ಪ್ಲಾನ್ ಮಾಡಿಕೊಂಡಿದೆ. ಇದನ್ನೂ ಓದಿ: ರಾಜ್ಯದ ಪರ ಧ್ವನಿ ಎತ್ತದೇ ಸುಮ್ಮನಿರುವ ಬಿಜೆಪಿ ಸಂಸದರು ದಂಡಪಿಂಡಗಳು: ಬಿ.ವಿ ಶ್ರೀನಿವಾಸ್