ಬಾಲಿವುಡ್ ನ ಖ್ಯಾತ ನಟ ಅಕ್ಷಯ್ ಕುಮಾರ್ ನಟನೆಯ ‘ಓ ಮೈ ಗಾಡ್’ ಸಿನಿಮಾಗೆ ದಿನಕ್ಕೊಂದು ಸಂಕಷ್ಟ ಎದುರಾಗುತ್ತಿದೆ. ಈವರೆಗೂ ಸೆನ್ಸಾರ್ ಮಂಡಳಿಯಿಂದ ನಾನಾ ರೀತಿಯ ತೊಂದರೆಗಳನ್ನು ಅನುಭವಿಸಿದ್ದ ಚಿತ್ರತಂಡ, ಇದೀಗ ಉಜ್ಜಯಿನಿಯ ಮಹಾಕಾಳೇಶ್ವರ (Ujjain Mahakaleshwar) ದೇವಾಲಯದ ಅರ್ಚಕರ ಆಕ್ರೋಶಕ್ಕೆ ಕಾರಣವಾಗಿದೆ. ಚಿತ್ರಕ್ಕೆ ಸೆನ್ಸಾರ್ ಮಂಡಳಿಯು ವಯಸ್ಕರ ಚಿತ್ರದ ಪ್ರಮಾಣ ಪತ್ರ ನೀಡಿರುವುದರಿಂದ ಅರ್ಚಕರು ಸಿಡಿದೆದ್ದಿದ್ದಾರೆ.
Advertisement
ಈ ಸಿನಿಮಾದಲ್ಲಿ ಅಕ್ಷಯ್ ಕುಮಾರ್, ಶಿವನ (Shiva) ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಅವರು ಶಿವತಾಂಡವ ನೃತ್ಯ ಕೂಡ ಮಾಡುತ್ತಾರಂತೆ. ಆ ದೃಶ್ಯಗಳನ್ನು ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನದ ಆವರಣದಲ್ಲಿ ಚಿತ್ರೀಕರಣ ಮಾಡಲಾಗಿದೆಯಂತೆ. ಆ ದೃಶ್ಯಗಳನ್ನು ಚಿತ್ರದಿಂದ ಕೈ ಬಿಡಬೇಕು ಎಂದು ಅರ್ಚಕರು (Priests) ಆಗ್ರಹ ಮಾಡಿದ್ದಾರೆ. ಒಂದು ವೇಳೆ ದೃಶ್ಯಗಳನ್ನು ಡಿಲೀಟ್ ಮಾಡದೇ ಇದ್ದರೆ ಪ್ರತಿಭಟಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
Advertisement
Advertisement
ಓ ಮೈ ಗಾಡ್ ವಯಸ್ಕರ ಸಿನಿಮಾ
Advertisement
ಬಾಲಿವುಡ್ (Bollywood) ಹೆಸರಾಂತ ನಟ ಅಕ್ಷಯ್ ಕುಮಾರ್ (Akshay Kumar) ನಟನೆಯ ‘ಓ ಮೈ ಗಾಡ್ 2’ (Oh My God 2) ಸಿನಿಮಾ ವಿವಾದಿತ ಅಂಶಗಳು ಇರುವ ಕಾರಣದಿಂದಾಗಿ ಕೇಂದ್ರ ಚಲನಚಿತ್ರ ಪ್ರಮಾಣೀಕೃತ ಮಂಡಳಿ (ಸಿ.ಬಿ.ಎಫ್.ಸಿ) ಸೆನ್ಸಾರ್ ಪತ್ರವನ್ನು (Censor) ಕೊಡಲು ನಿರಾಕರಿಸಿತ್ತು (Denial). ಜೊತೆಗೆ ಈ ಸಿನಿಮಾವನ್ನು ಪರಿಶೀಲನಾ ಸಮಿತಿಗೆ ಕಳುಹಿಸಿ ಕೊಡಲಾಗಿತ್ತು. ಪರಿಶೀಲನಾ ಸಮಿತಿಯು ಕೊನೆಗೂ ಚಿತ್ರಕ್ಕೆ ಪ್ರಮಾಣ ಪತ್ರ ದಯಪಾಲಿಸಿದೆ.
ಸಿಬಿಎಫ್ಸಿ ಸಿನಿಮಾದ ಒಟ್ಟು 20 ಕಡೆ ದೃಶ್ಯಗಳನ್ನು ಕತ್ತರಿಸಲು ತಿಳಿಸಲಾಗಿತ್ತು. ಕೆಲವು ಕಡೆ ಮಾತುಗಳನ್ನು ಮ್ಯೂಟ್ ಮಾಡಲು ಹೇಳಲಾಗಿತ್ತು. ಇಷ್ಟೆಲ್ಲ ಮಾಡಿದರೂ ಚಿತ್ರಕ್ಕೆ ವಯಸ್ಕರು ನೋಡಬಹುದಾದ ಸಿನಿಮಾ ಎಂದು ‘ಎ’ ಸರ್ಟಿಫಿಕೇಟ್ ನೀಡಲಾಗಿತ್ತು. ಇದೀಗ ಒಂದಷ್ಟು ಬದಲಾವಣೆಯನ್ನು ಮಾಡಿಕೊಳ್ಳಲು ಹೇಳುವ ಮೂಲಕ ಪರಿಶೀಲನಾ ಸಮಿತಿಯೂ ‘ಎ’ ಪ್ರಮಾಣ ಪತ್ರ ನೀಡಿದೆ. ಹಾಗಾಗಿ 18 ವರ್ಷ ತುಂಬಿದವರು ಮಾತ್ರ ಈ ಸಿನಿಮಾ ನೋಡಬಹುದಾಗಿದೆ.
ಅಕ್ಷಯ್ ಕುಮಾರ್ ಈ ಸಿನಿಮಾದಲ್ಲಿ ಶಿವನ ಪಾತ್ರ ಮಾಡಿದ್ದಾರೆ. ಈ ಪಾತ್ರದ ಮೂಲಕ ಲೈಂಗಿಕ ಶಿಕ್ಷಣವನ್ನು ಹೇಳಲು ಹೊರಟಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾಗಿಯೇ ಸೆನ್ಸಾರ್ ಪತ್ರವನ್ನು ನೀಡಲು ನಿರಾಕರಿಸಿತ್ತು. ಲೈಂಗಿಕ ಶಿಕ್ಷಣದ ಕುರಿತಾಗಿ ಕಥಾ ಹಂದರ ಹೊಂದಿರುವ ಈ ಸಿನಿಮಾದಲ್ಲಿ ಇಂತಹ ವಿಷಯವನ್ನು ಶಿವನ ಮೂಲಕ ಹೇಳಲು ಹೊರಟಿರುವುದು ಸೆನ್ಸಾರ್ ಮಂಡಳಿಯನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು.
Web Stories