ಡೆಹ್ರಾಡೂನ್: ದೇಶದಲ್ಲಿ ಟೊಮೆಟೋ (Tomato) ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಅದೇ ರೀತಿ ಉತ್ತರಾಖಂಡದಲ್ಲಿ (Uttarakhand) ಟೊಮೆಟೋ ಕೆಜಿಗೆ 200-250 ರೂ. ಆಗಿದ್ದು, ಬೆಲೆ ಏರಿಕೆಯಿಂದ ಗ್ರಾಹಕರು ಹೈರಾಣಾಗಿದ್ದಾರೆ.
ಉತ್ತರಕಾಶಿಯಲ್ಲಿ ಟೊಮೆಟೋ ಅತ್ಯಂತ ದುಬಾರಿಯಾಗಿದ್ದು, ಗಂಗೋತ್ರಿ (Gangotri) ಮತ್ತು ಯಮುನೋತ್ರಿಯಲ್ಲಿ (Yamunotri) ಕೆಜಿಗೆ 200-250 ರೂ. ಇದೆ. ಇದರಿಂದ ಗ್ರಾಹಕರು (Customers) ಸಂಕಷ್ಟಕ್ಕೆ ಸಿಲುಕಿದ್ದು, ಟೊಮೆಟೋ ಖರೀದಿಸಲು ಮುಂದಾಗುತ್ತಿಲ್ಲ ಎಂದು ತರಕಾರಿ ಮಾರಾಟಗಾರ ರಾಕೇಶ್ ತಿಳಿಸಿದ್ದಾರೆ. ಇದನ್ನೂ ಓದಿ: ಧಾರಾಕಾರ ಮಳೆಗೆ ಉಡುಪಿಯಲ್ಲಿ ಮತ್ತೊಂದು ಬಲಿ
ಕಳೆದ ವರ್ಷ ಸುರಿದ ಭಾರೀ ಮಳೆಯ ಪರಿಣಾಮ ಹಲವೆಡೆ ಟೊಮೆಟೋ ಬೆಳೆಗಳು ನಾಶವಾಗಿದ್ದವು. ಇದರಿಂದ ಪೂರೈಕೆ ಸರಪಳಿಯಲ್ಲಿ ಅಡಚಣೆಗಳು ಉಂಟಾಗಿದ್ದು, ತರಕಾರಿಗಳ ದರ ತೀವ್ರ ಏರಿಕೆಯಾಗಿದೆ ಎಂದು ಹಲವರು ಹೇಳುತ್ತಾರೆ. ಅಲ್ಲದೇ ಟೊಮೆಟೋ ಅಲ್ಪಾವಧಿಯ ತರಕಾರಿಯಾದ್ದರಿಂದ ಪ್ರತಿ ವರ್ಷ ಈ ಸಮಯದಲ್ಲಿ ಬೆಲೆ ಏರಿಕೆಯಾಗುತ್ತದೆ. ಇದನ್ನೂ ಓದಿ: ರಾಯಚೂರಿನಲ್ಲಿ ಮಳೆಯಿಲ್ಲದೆ ಒಣಗುತ್ತಿರೋ ಬೆಳೆ- ಜಾನುವಾರು ಬಿಟ್ಟು ಬೆಳೆ ತಿನ್ನಿಸಿದ ರೈತರು
ಚೆನ್ನೈನಲ್ಲಿ (Chennai) ಟೊಮೆಟೋ ಬೆಲೆ ಕೆಜಿಗೆ 110-130 ರೂ. ಇದೆ. ಬೆಲೆ ಏರಿಕೆಯ ನಡುವೆ ತಮಿಳುನಾಡು (Tamil Nadu) ಸರ್ಕಾರ ಗ್ರಾಹಕರಿಗೆ ಸಹಾಯ ಮಾಡುವ ಸಲುವಾಗಿ ಚೆನ್ನೈನ ಪಡಿತರ ಅಂಗಡಿಗಳಲ್ಲಿ ಪ್ರತಿ ಕೆಜಿಗೆ 60 ರೂ. ಸಬ್ಸಿಡಿ ದರದಲ್ಲಿ ಟೊಮೆಟೋ ಮಾರಾಟ ಮಾಡಲು ಪ್ರಾರಂಭಿಸಿದೆ. ಇದನ್ನೂ ಓದಿ: ಉತ್ತರಕನ್ನಡದಲ್ಲಿ ಮಳೆಯಬ್ಬರಕ್ಕೆ ನಡೆದುಕೊಂಡು ಹೋಗ್ತಿದ್ದ ಇಬ್ಬರು ನೀರುಪಾಲು
ಕರ್ನಾಟಕದಲ್ಲೂ (Karnataka) ಟೊಮೆಟೋ ಬೆಲೆ ಏರಿಕೆಯಾಗಿದ್ದು, ಬೆಂಗಳೂರಿನಲ್ಲಿ (Bengaluru) ಪ್ರಸ್ತುತ ಟೊಮೆಟೋ ದರ ಕೆಜಿಗೆ 101-121 ರೂ.ಗೆ ಮಾರಾಟವಾಗುತ್ತಿದೆ. ಮಾರ್ಚ್ ಮತ್ತು ಏಪ್ರಿಲ್ ತಿಂಗಳಿನಲ್ಲಿ ತಾಪಮಾನ ಏರಿಕೆಯಾಗುವುದರಿಂದ ತರಕಾರಿಗಳ ದರ ಹೆಚ್ಚಾಗುತ್ತದೆ. ಅಲ್ಲದೇ ಟೊಮೆಟೋ ಬೆಳೆಗಳನ್ನು ಕ್ರಿಮಿ ಕೀಟಗಳು ನಾಶಪಡಿಸಿದರೆ ಸಾಮಾನ್ಯವಾಗಿ ಬೆಲೆ ಏರಿಕೆಯಾಗುತ್ತದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಟೊಮೆಟೊ ಆಯ್ತು.. ಈಗ ಶುಂಠಿ, ಹಸಿರು ಮೆಣಸಿನಕಾಯಿ ಬೆಲೆಯಲ್ಲೂ ಏರಿಕೆ
Web Stories