ವಿಜಯಪುರ: ಖಗ್ರಾಸ ಚಂದ್ರಗ್ರಹಣ ಹಿನ್ನೆಲೆಯಲ್ಲಿ ವಿಜಯಪುರ ನಗರದ ಬಹುತೇಕ ಹೆರಿಗೆ ಆಸ್ಪತ್ರೆಗಳು ಖಾಲಿ-ಖಾಲಿಯಾಗಿದೆ.
ನಗರದ ಆಸ್ಪತ್ರೆಗಳಲ್ಲಿ ತುಂಬು ಗರ್ಭಿಣಿ ಸ್ತ್ರೀಯರಿಗೆ ಸಿಸೇರಿಯನ್ ಗಾಗಿ ದಿನಾಂಕ ನೀಡಿದ್ದರೂ ಯಾರೊಬ್ಬರು ಆಸ್ಪತ್ರೆಯತ್ತ ತಲೆ ಹಾಕುತ್ತಿಲ್ಲ. ಸಿಸೇರಿಯನ್ ಗಾಗಿ ನಿಗದಿಪಡಿಸಿದ ಡೇಟ್‍ಗಳು ಗ್ರಹಣದ ಹಿನ್ನೆಲೆಯಲ್ಲಿ ರದ್ದಾಗಿದೆ. ಇದನ್ನು ಓದಿ: ಚಂದ್ರಗ್ರಹಣ: ರಾಜ್ಯ ರಾಜಕೀಯದಲ್ಲಿ ಗ್ರಹಣ ಯಾರಿಗೆ ಹಿಡಿಯುತ್ತೆ?
Advertisement
Advertisement
ಗರ್ಭಿಣಿಯರ ಮನೆಯವರು ಹೆರಿಗೆಗೆ ನಿರಾಕರಣೆ ಮಾಡಿದ್ದು, ಬಹುತೇಕ ಆಸ್ಪತ್ರೆಗಳು ಖಾಲಿ ಖಾಲಿಯಾಗಿವೆ. ಇನ್ನು ಕೆಲವರು ಶನಿವಾರಕ್ಕೆ ಸಿಸೇರಿಯನ್ ಮುಂದೂಡಿದ್ದಾರೆ.
Advertisement
ಚಂದ್ರ ಗ್ರಹಣದಿಂದಾಗಿ ಮುಂದೆ ಹುಟ್ಟಲಿರುವ ಮಗುವಿಗೆ ಕಂಟಕವಾಗುತ್ತದೆ ಎಂದು ಭಾವಿಸಿ ಗರ್ಭಿಣಿಯರು ದೇವರ ನಾಮ ಸ್ಮರಣೆಯ ಮೊರೆ ಹೋಗಿದ್ದಾರೆ. ಸ್ತ್ರೋತ್ರ ಪುಸ್ತಕಗಳನ್ನು ಓದುತ್ತ ಕುಳಿತ ಗರ್ಭಿಣಿ ಸ್ತ್ರೀಯರು ದೇವರ ನಾಮಸ್ಮರಣೆಯಲ್ಲಿ ತಲ್ಲೀನರಾಗಿದ್ದಾರೆ. ಇದನ್ನು ಓದಿ: ಗ್ರಹಣ ಎಫೆಕ್ಟ್ ಬೆಂಗಳೂರಿನ ರಸ್ತೆಗಳು ಖಾಲಿ ಖಾಲಿ