ಬೆಂಗಳೂರು: ಫಿಲಿಪೈನ್ಸ್ ಗಣರಾಜ್ಯದ ಅಧ್ಯಕ್ಷ ಫರ್ಡಿನ್ಯಾಂಡ್ ಆರ್. ಮಾರ್ಕೋಸ್ ಜ್ಯೂ. ಅವರು ಗುರುವಾರ ಬೆಂಗಳೂರಿಗೆ ಭೇಟಿ ನೀಡಿದರು. ಈ ವೇಳೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರನ್ನು ಭೇಟಿಯಾಗಿ ಸಂವಾದ ನಡೆಸಿದರು. ಈ ವೇಳೆ ಡಿಸಿಎಂ ಡಿ.ಕೆ.ಶಿವಕುಮಾರ್ ಉಪಸ್ಥಿತರಿದ್ದರು.
ರಾಜ್ಯಪಾಲರು ಕರ್ನಾಟಕದ ಜನತೆ ಪರವಾಗಿ ಫಿಲಿಪೈನ್ಸ್ ಅಧ್ಯಕ್ಷರಿಗೆ ಸ್ವಾಗತ ಕೋರಿ, ಭಾರತ ಮತ್ತು ಫಿಲಿಪೈನ್ಸ್ ನಡುವಿನ ಬೆಳೆಯುತ್ತಿರುವ ಸ್ನೇಹಪೂರ್ಣ ಸಂಬಂಧಗಳಿಗೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಭೇಟಿಯು ಸ್ನೇಹಪೂರ್ಣ ಮತ್ತು ಸೌಹಾರ್ದಪೂರ್ಣವಾಗಿ ನೆರವೇರಿದ್ದು, ಉಭಯ ರಾಷ್ಟ್ರಗಳ ನಡುವಿನ ಸಹಕಾರ ಮತ್ತು ಬಾಂಧವ್ಯದ ಬಲವರ್ಧನಕ್ಕೆ ಉತ್ತೇಜನ ನೀಡಿದೆ.