ಬೆಳಗಾವಿ: ಕರ್ನಾಟಕ (Karnataka) ಮತ್ತು ಮಹಾರಾಷ್ಟ್ರ (Maharastra) ಗಡಿ ವಿಚಾರದಲ್ಲಿ ಶಿವಸೇನೆ ಎರಡು ಬಣಗಳ ತಿಕ್ಕಾಟಕ್ಕೆ ಗಡಿ ಭಾಗದ ಜನರು ಹೈರಾಣಾಗಿದ್ದು ದಿನನಿತ್ಯ ವ್ಯಾಪಾರ ವಹಿವಾಟಕ್ಕೆ ಕಷ್ಟಪಡುತ್ತಿದ್ದಾರೆ.
ಕಳೆದ ಹಲವಾರು ವರ್ಷಗಳಿಂದ ಬೆಳಗಾವಿ ಗಡಿ ವಿಚಾರವನ್ನೇ ಮುಂದಿಟ್ಟುಕೊಂಡ ಎಂಇಎಸ್ ಮತ್ತು ಮಹಾರಾಷ್ಟ್ರದ ಶಿವಸೇನೆ ನಾಯಕರು ಪದೇಪದೇ ಕ್ಯಾತೆ ತೆಗೆಯುತ್ತಿದ್ದಾರೆ. ಈ ಮೊದಲು ನಾಡದ್ರೋಹಿ ಎಂಇಎಸ್ (MES) ಸಂಘಟನೆ ನಾಯಕರು ಹಾಗೂ ಶಿವಸೇನೆ (Shivasee) ಪುಂಡರು ಮಾತ್ರ ಕಿರಿಕ್ ಮಾಡುತ್ತಿದ್ದರು. ಇದೀಗ ಮಹಾರಾಷ್ಟ್ರದ ವಿಪಕ್ಷಗಳಿಗೂ ಗಡಿವಿವಾದವೇ ಅಸ್ತ್ರವಾಗಿದೆ. ಮಹಾರಾಷ್ಟ್ರ ರಾಜಕಾರಣಿಗಳು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬೆಳಗಾವಿ ಗಡಿವಿವಾದವನ್ನೇ ಬಳಕೆ ಮಾಡಿಕೊಳ್ಳುತ್ತಿದ್ದಾರೆ.
ಗಡಿವಿವಾದವನ್ನು ರಾಜಕೀಯ ಅಸ್ತ್ರವಾಗಿ ಬಳಸುತ್ತಿರುವ ಶಿವಸೇನೆ ಉದ್ಧವ್ ಠಾಕ್ರೆ ಬಣದ ಪುಂಡರು ತಮ್ಮ ಹಳೆಯ ಚಾಳಿಯನ್ನೇ ಮುಂದುವರಿಸುತ್ತಿದ್ದಾರೆ. ಮಹಾರಾಷ್ಟ್ರ ಸರ್ಕಾರದ ವಿರುದ್ಧ ಶಿವಸೇನೆ ಉದ್ಧವ್ ಠಾಕ್ರೆ (Uddhav Thackeray) ಬಣ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು ಬೆಳಗಾವಿಗೆ ಮಹಾರಾಷ್ಟ್ರ ಸಚಿವರ ಭೇಟಿ ರದ್ದಾಗಿದ್ದನ್ನೇ ಶಿವಸೇನೆ ರಾಜಕೀಯ ಅಸ್ತ್ರವಾಗಿ ಬಳಸುತ್ತಿದೆ. ಇದನ್ನೂ ಓದಿ: ತೆರಿಗೆ ವಂಚನೆ ಪ್ರಕರಣದಲ್ಲಿ ಟ್ರಂಪ್ ಕುಟುಂಬದ ಸಂಸ್ಥೆಗೆ ದಂಡ
ಮಹಾರಾಷ್ಟ್ರ ಸಚಿವರ ವಿರುದ್ಧ ಪ್ರತಿಭಟನೆ ನಡೆಸಲು ಕರ್ನಾಟಕದ ಗಡಿಗೆ ಆಗಮಿಸುತ್ತಿದ್ದ ಶಿವಸೇನೆ ಉದ್ಧವ್ ಠಾಕ್ರೆ ಬಣದ ಕಾರ್ಯಕರ್ತರು ಬಳೆ, ಅರಿಶಿಣ ಕುಂಕುಮ ಹಿಡಿದು ಪ್ರತಿಭಟಿಸಿದ್ದಲ್ಲದೇ ಕರ್ನಾಟಕ ಬಸ್ ಗಳಿಗೆ ಮಸಿ ಬಳಿಸಿ ಆಕ್ರೋಶ ವ್ಯಕ್ತಪಡಿಸಿ ಏಕನಾಥ ಶಿಂದೆ ನೇತೃತ್ವದ ಮಹಾರಾಷ್ಟ್ರ ಸರ್ಕಾರದ ಆಕ್ರೋಶ ಹೊರಹಾಕಿದ್ದಾರೆ. ಇತ್ತ ಇಬ್ಬರ ನಡುವೆ ನಡೆಯುತ್ತಿರು ಬಣ ರಾಜಕೀಯದಲ್ಲಿ ನಾಡದ್ರೋಹಿ ಎಂಇಎಸ್ ಸಂಘಟನೆ ಇಂಗು ತಿಂದ ಮಂಗನಂತಾಗಿದೆ.