ಬೆಂಗಳೂರು: ರೆಸ್ಟೋರೆಂಟ್ ಲೆಕ್ಕವನ್ನು ಕೇಳಿದ್ದಕ್ಕೆ ವ್ಯಕ್ತಿಯೋರ್ವ ಪಾರ್ಟ್ನರ್‌ನನ್ನೇ ಕೊಂದಿರುವ ಘಟನೆ ಕುಂಬಳಗೋಡು (Kumbalgodu) ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಹಿರಿಸಾವೆ ಮೂಲದ ಸೋಮೇಗೌಡ(36) ಮೃತ ದುರ್ದೈವಿ. ಶನಿವಾರ ಸಂಜೆ ಕುಂಬಳಗೋಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಆರೋಪಿಯನ್ನು ಮಂಡ್ಯ ಮೂಲದ ಮುತ್ತುರಾಜ್ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಇದನ್ನೂ ಓದಿ: ಪತ್ರಕರ್ತರಿಗೆ ದೀಪಾವಳಿ ಗಿಫ್ಟ್ – ಕೊಟ್ಟಿರಬಹುದೇನೋ ಎಂದ ಆರಗ ಜ್ಞಾನೇಂದ್ರ
ಹರೀಶ್, ಸೋಮೇಗೌಡ, ಮುತ್ತುರಾಜ್ ಮೂವರು ಸ್ನೇಹಿತರು ಸೇರಿಕೊಂಡು ಕುಂಬಳಗೋಡು ಬಳಿಯ ಅಮರಾವತಿ ರೆಸ್ಟೋರೆಂಟ್ ತೆರೆದಿದ್ದರು. ಎರಡು ತಿಂಗಳ ಹಿಂದಷ್ಟೇ ರೆಸ್ಟೋರೆಂಟ್ ಓಪನ್ ಆಗಿತ್ತು. ಮುತ್ತುರಾಜ್ ಹೋಟೆಲ್ ಅನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದನು. ಹರೀಶ್ ಮತ್ತು ಸೋಮೇಗೌಡ ಹೆಚ್ಚಾಗಿ ಹೋಟೆಲ್ ಕಡೆಗೆ ಬರುತ್ತಿರಲಿಲ್ಲ. ಆದರೆ ಎರಡು ತಿಂಗಳ ನಂತರ ಮುತ್ತುರಾಜ್ ಬಳಿ ಬಂದು ಸೋಮೇಗೌಡ ಲೆಕ್ಕ ಕೇಳಿದ್ದಾರೆ. ಈ ವೇಳೆ ಐದು ಲಕ್ಷ ಲಾಸ್ ಆಗಿರುವುದಾಗಿ ಮುತ್ತುರಾಜ್ ಲೆಕ್ಕ ತೋರಿಸಿದ್ದಾನೆ.
ಆಗ ಹೋಟೆಲ್ ಚೆನ್ನಾಗಿಯೇ ನಡೆಯುತ್ತಿದೆ, ಲಾಸ್ ಹೇಗೆ ಆಯಿತು ಎಂದು ಸೋಮೇಗೌಡ ಪ್ರಶ್ನೆ ಮಾಡಿ, ಮತ್ತೊಬ್ಬ ಪಾರ್ಟ್ನರ್ ಹರೀಶ್‍ಗೂ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಈ ವೇಳೆ ಇಬ್ಬರ ಮಧ್ಯೆ ಜಗಳವಾಗಿದ್ದು, ಅಲ್ಲಿಯೇ ಇದ್ದ ತರಕಾರಿ ಕಟರ್‌ನಿಂದ ಸೋಮೇಗೌಡರ ಮೇಲೆ ಮುತ್ತುರಾಜ್ ಹಲ್ಲೆ ಮಾಡಿದ್ದಾನೆ. ಬಳಿಕ ಗಾಯಾಳು ಸೋಮೇಗೌಡನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಸದ್ಯ ಈ ಘಟನೆ ಸಂಬಂಧ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇದನ್ನೂ ಓದಿ: ಬಂಡೆಮಠ ಶ್ರೀ ಆತ್ಮಹತ್ಯೆ ಕೇಸ್ – ಕಣ್ಣೂರು ಶ್ರೀ, ಯುವತಿ ಅರೆಸ್ಟ್