ಹುಬ್ಬಳ್ಳಿ: ನನ್ನ ಪತಿ ಇಲ್ಲದಿರುವ ನೋವು ನನಗೆ ಕಾಡುತ್ತಿದೆ ಎಂದು ಕುಂದಗೋಳ ಶಾಸಕಿ ಕುಸುಮಾ ಶಿವಳ್ಳಿ (Kusuma Shivalli) ಭಾವುಕರಾಗಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಪತಿ ಇರುತ್ತಿದ್ದರೆ ನಮ್ಮ ಕುಟುಂಬಕ್ಕೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಸೋಮವಾರ ನನಗೆ ನಿಂದನೆ ಮಾಡಿರುವವರನ್ನು ನಾನು ತಂದೆ ಸಮಾನ ಅಂದುಕೊಂಡಿದ್ದೆ. ಆದರೆ ಅವರು ಈ ರೀತಿಯಾಗಿ ಮಾತನಾಡುತ್ತಾರೆಂದು ಅಂದುಕೊಂಡಿರಲಿಲ್ಲ. ನಾನು ನನ್ನ ಪತಿ ಸ್ಥಾನವನ್ನು ತುಂಬುತ್ತೇನೆ ಎಂದರು.
ಕುಂದಗೋಳ ಕ್ಷೇತ್ರ (Kundagola Constituency) ದ ಜನತೆ ನನ್ನ ನಮ್ಮ ಕುಟುಂಬದ ಮೇಲೆಟ್ಟಿರುವ ನಂಬಿಕೆ ಉಳಿಸಿಕೊಳ್ಳುತ್ತೇನೆ. ಈ ಬಾರಿ ಟಿಕೆಟ್ ನೀಡುವ ಭರವಸೆಯನ್ನು ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನೀಡಿದ್ದಾರೆ ಎಂದು ಕುಸುಮಾ ಹೇಳಿದರು. ಇದನ್ನೂ ಓದಿ: ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗ್ಲಿ- ಅಭಿಮಾನಿಗಳಿಂದ ಶಬರಿಮಲೆಗೆ ಹರಕೆ
ಶಾಸಕಿಗೆ ನಿಂದನೆ: ಕುಸುಮಾ ಶಿವಳ್ಳಿಗೆ ಟಿಕೆಟ್ ಕೊಟ್ಟರೆ ಬಂಡಾಯ ಗ್ಯಾರಂಟಿ ಅನ್ನೋ ಪಟ್ಟು ಹಿಡಿದಿದ್ದಾರೆ. ಈ ಕುರಿತು ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಆಕಾಂಕ್ಷಿಗಳು ಬಂಡಾಯದ ಬಾವುಟ ಹಾರಿಸುವುದಾಗಿ ಹೇಳಿದ್ದಾರೆ. ಕುಂದಗೋಳ ಕಾಂಗ್ರೆಸ್ ಟಿಕೆಟ್ (Congress Ticket) ಆಕಾಂಕ್ಷಿಗಳು ಈ ಹಿಂದಿನ ಚುನಾವಣೆಯಲ್ಲೂ ನನ್ನ ಪರ ಕೆಲಸ ಮಾಡಿಲ್ಲಾ ಎಂದು ಶಾಸಕಿ ಕುಸುಮಾ ಶಿವಳ್ಳಿ ಹೇಳಿರುವುದಕ್ಕೆ ಆಕಾಂಕ್ಷಿಗಳು ತೀವ್ರ ಆಕ್ಷೇಪ ವ್ಯಕ್ತಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡುವಾಗ ಕಾಂಗ್ರೆಸ್ ಹಿರಿಯ ಮುಖಂಡರೊಬ್ಬರು ನಾಲಿಗೆ ಹರಿಬಿಟ್ಟಿದ್ದಾರೆ. ಹಾಲಿ ಶಾಸಕಿ ಕುಸುಮಾ ಶಿವಳ್ಳಿಯವರ ವಿರುದ್ಧ ಅವಾಚ್ಯ ಪದ ಬಳಕೆ ಮಾಡಿದ್ದಾರೆ. ಟಿಕೆಟ್ ಆಕಾಂಕ್ಷಿಗಳ ಪತ್ರಿಕಾ ಗೋಷ್ಠಿಯಲ್ಲಿ ನಾಲಗೆ ಹರಿಬಿಟ್ಟಿದ್ದಾರೆ. ಶಾಸಕಿಯನ್ನು ವಿರೋಧಿಸುವ ಬರದಲ್ಲಿ ಎಡವಟ್ಟು ಮಾಡಿಕೊಂಡಿದ್ದಾರೆ. ಅವಾಚ್ಯ ಶಬ್ದ ಬಳಸಿದ ಕಾಂಗ್ರೆಸ್ ಮುಖಂಡ ಸಿ.ಜಿ. ಪಾಟೀಲ್ ಸಿಟ್ಟಲ್ಲೆ ಹೊರ ನಡೆದಿದ್ದಾರೆ.
ಪತಿ ನಿಧನ: ಧಾರವಾಡ ಜಿಲ್ಲೆಯ ಕುಂದಗೋಳ ಕಾಂಗ್ರೆಸ್ ಶಾಸಕ ಹಾಗೂ ಪೌರಾಡಳಿತ ಸಚಿವ ಸಿ.ಎಸ್ ಶಿವಳ್ಳಿ (85) ಬೈಪಾಸ್ ಸರ್ಜರಿ ಮಾಡಿಸಿಕೊಂಡಿದ್ದು, ಸಾಯುವ ಮೊದಲ ಮಧ್ಯರಾತ್ರಿಯವರೆಗೂ ಧಾರವಾಡದಲ್ಲಿ ನಡೆದ ಕಟ್ಟಡ ದುರಂತ ಸ್ಥಳದಲ್ಲಿ ಹಾಜರಿದ್ದು ಪರಿಹಾರ ಕಾರ್ಯದಲ್ಲಿ ಭಾಗಿಯಾಗಿದ್ದರು. ಈ ದುರ್ಘಟನೆ ಸಂಭವಿಸಿದ ದಿನದಿಂದ ಸತತವಾಗಿ ಅಲ್ಲಿಯೇ ಬೀಡು ಬಿಟ್ಟು ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದರು. 2019 ರ ಮಾರ್ಚ್ 22ರ ಬೆಳಗ್ಗೆ ಹೃದಯಾಘಾತದಿಂದ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಕೊನೆಯುಸಿರೆಳೆದಿದ್ದರು.