ಗಂಡನ ಹೆಸರನ್ನು ಯಾರು ಏನಂತ ಕರೆಯುತ್ತಾರೋ ಗೊತ್ತಿಲ್ಲ. ಆದರೆ, ಕನ್ನಡದ ರ್ಯಾಪರ್ ಚಂದನ್ ಶೆಟ್ಟಿ ಅವರ ಪತ್ನಿ, ಕಿರುತೆರೆ ಬಾರ್ಡಿ ಬಾಲ್ ನಿವೇದಿತಾ ಮಾತ್ರ ಗಂಡನನ್ನು ಡಿಫರೆಂಟ್ ಹೆಸರಿನಿಂದ ಕರೆಯುತ್ತಾರೆ. ಆ ಹೆಸರು ಮೊನ್ನೆಯಷ್ಟೇ ರಿವಿಲ್ ಆಗಿದೆ. ಇದನ್ನು ಓದಿ: ‘ಅಣ್ಣಾವ್ರ ನಾಡು’: ಡಾ.ರಾಜ್ ಕುಮಾರ್ ನೆನೆದ ರಾಕಿಂಗ್ ಸ್ಟಾರ್ ಯಶ್
Advertisement
ಸದ್ಯ ಖಾಸಗಿ ಮನರಂಜನಾ ವಾಹಿನಿಯೊಂದರ ರಿಯಾಲಿಟಿ ಶೋನಲ್ಲಿ ನಿವೇದಿತಾ ಭಾಗಿಯಾಗಿದ್ದಾರೆ. ಇದರ ಗ್ರ್ಯಾಂಡ್ ಓಪನಿಂಗ್ ವೇದಿಕೆಯ ಮೇಲೆ ನಿವೇದಿತಾ ಇದ್ದರು. ನಿಮ್ಮನ್ನು ವೆಲ್ ಕಮ್ ಮಾಡೋಕೆ ವಿಶೇಷ ಅತಿಥಿಯೊಬ್ಬರು ವೇದಿಕೆಯ ಮೇಲೆ ಬರಲಿದ್ದಾರೆ ಎಂದು ನಿರೂಪಕ ಪಾವಗಡ ಮಂಜು ಹೇಳುತ್ತಾರೆ. ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಬಂದಿದ್ದು ಚಂದನ್ ಶೆಟ್ಟಿ. ಗಂಡನನ್ನು ನೋಡುತ್ತಿದ್ದಂತೆಯೇ ನಿವೇದಿತಾ ಸರ್ಪ್ರೈಸ್ ರೀತಿಯಲ್ಲಿ.. ‘ಓ.. ಕುಕ್ಕಿ..’ ಎಂದು ಕರೆಯುತ್ತಾರೆ. ಇಂಥದ್ದೊಂದು ಹೆಸರನ್ನು ಕರೆಯುತ್ತಿದ್ದಂತೆಯೇ ಆ ಕಾರ್ಯಕ್ರಮದ ಜಡ್ಜ್ ಆಗಿದ್ದ ಸೃಜನ್ ಲೋಕೇಶ್ ಅವರು ನಿವಿಯಲ್ಲಿ ಕಾಲೆಳೆಯುತ್ತಾರೆ. ‘ಒಂದೇ ಬಾರಿ ಕುಕ್ಕಿ.. ಪದೇ ಪದೇ ಕುಕ್ಕಿಕ್ಕಿಕ್ಕಿ. ಮಾಡಬೇಡಿ’ ಎನ್ನುತ್ತಾರೆ. ಹೀಗೆ ತಮಾಷೆಯಾಗಿಯೇ ಕಾರ್ಯಕ್ರಮ ಸಾಗುತ್ತದೆ. ಇದನ್ನೂ ಓದಿ : ಸೂಪರ್ಸ್ಟಾರ್ ಮಹೇಶ್ ಬಾಬು ಜೊತೆ ಕಾಣಿಸಿಕೊಂಡ ಮೇಘಾ ಶೆಟ್ಟಿ
Advertisement
Advertisement
ಚಂದನ್ ಮತ್ತು ನಿವೇದಿತಾ ಯಾವ ರೀತಿಯಲ್ಲಿ ಅನ್ಯೋನ್ಯವಾಗಿದ್ದಾರೆ ಅಂದರೆ, ಚಂದನ್ ಸ್ವತಃ ಹೆಂಡತಿಯನ್ನೇ ಕಾಲೆಳೆಯುತ್ತಾರೆ. ಇದೇ ಸಂದರ್ಭದಲ್ಲಿ ‘ನೀವು ಕಾರ್ಯಕ್ರಮ ಮುಗಿದ ಮೇಲೆ ಮನೆಗೆ ಬರ್ತೀರಿ.. ನೆನಪಿಡಿ’ ಎಂದು ಕಣ್ಣಲ್ಲೇ ಬೆದರಿಸುತ್ತಾರೆ. ಅದನ್ನು ಪದೇ ಪದೇ ಹೇಳುವ ಮೂಲಕ ಚಂದನ್ ಅವರನ್ನು ಹೆದರಿಸುತ್ತಾರೆ. ಆಗ ನಗುತ್ತಲೇ ಚಂದನ್, ‘ಹೌದೌದು.. ಮನೆಗೆ ಹೋಗಬೇಕು’ ಎಂದು ಅವರು ತಮಾಷೆ ಮಾಡುತ್ತಾರೆ. ಇದನ್ನೂ ಓದಿ : ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳಕ್ಕೆ ರಾಕಿಂಗ್ ಸ್ಟಾರ್ ಯಶ್ ಭೇಟಿ
Advertisement
ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ‘ಪತಿಯನ್ನು ಇಂಥದ್ದೊಂದು ಹೆಸರಿನಿಂದ ಕರೆಯುವುದನ್ನು ನಾವು ಮೊದಲ ಬಾರಿಗೆ ನೋಡುತ್ತಿದ್ದೇವೆ’ ಎಂದು ಕೆಲವರು ಟ್ರೋಲ್ ಮಾಡುತ್ತಿದ್ದಾರೆ. ನಾಯಿಮರಿಗೆ ಕರೆಯುವ ಹೆಸರನ್ನು ಚಂದನ್ ಗೆ ಇಟ್ಟಿದ್ದಾರಲ್ಲ ಪಾಪ ಎಂದೂ ಕೆಲವರು ಕಾಮೆಂಟ್ ಮಾಡಿದ್ದಾರೆ.