ಬ್ಲ್ಯಾಕ್‌ಬಾಕ್ಸ್‌ನಲ್ಲಿ ಅಡಗಿದೆ ವಿಮಾನ ದುರಂತದ ರಹಸ್ಯ – ನಾಳೆಯೊಳಗೆ ಅಪಘಾತಕ್ಕೆ ಅಸಲಿ ಕಾರಣ ಸಿಗುತ್ತಾ?

Public TV
1 Min Read
Ahmedabad Plane Crash 1 1

ಅಹಮದಾಬಾದ್: ದೇಶದ ಇತಿಹಾಸದಲ್ಲಿಯೇ ಅತಿ ದೊಡ್ಡ ವಿಮಾನ ದುರಂತ (Ahmedabad Plane Crash) ನಡೆದೋಗಿದೆ. ಪ್ರಯಾಣಿಕರು, ಸ್ಥಳೀಯರು ಸೇರಿ 260ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಈ ದುರಂತಕ್ಕೆ ಅಸಲಿ ಕಾರಣ ಏನು ಎಂಬುದು ಇಂದು ಅಥವಾ ನಾಳೆ ಗೊತ್ತಾಗುವ ಸಾಧ್ಯತೆಯಿದೆ.

ದೇಶದ ಇತಿಹಾಸದಲ್ಲಿಯೇ ಅತಿದೊಡ್ಡ ವಿಮಾನ ದುರಂತಗಳಲ್ಲಿ ಒಂದಾದ ಅಹಮದಾಬಾದ್ ವಿಮಾನ ಪತನ ದುರಂತದ ತನಿಖೆ ಚುರುಕುಗೊಂಡಿದೆ. ಟೇಕಾಫ್ ಆದ 25 ಸೆಕೆಂಡ್‌ಗಳಲ್ಲಿ ಪತನಗೊಂಡ ಜಾಗದಲ್ಲೀಗ ಬ್ಲ್ಯಾಕ್‌ಬಾಕ್ಸ್ (Black Box) ಹಾಗೂ ಡಿವಿಆರ್ ಪತ್ತೆಯಾಗಿದ್ದು, ದುರಂತಕ್ಕೆ ಅಸಲಿ ಕಾರಣ ಗೊತ್ತಾಗಲಿದೆ. ಬ್ಲ್ಯಾಕ್‌ಬಾಕ್ಸ್ ಸಿಕ್ಕ 48 ಘಂಟೆಗಳಲ್ಲಿಯೇ ರಿಪೋರ್ಟ್ ಸಿಗಲಿದೆ. ಇದನ್ನೂ ಓದಿ: ಬೆಂಗಳೂರು ಕಾಲ್ತುಳಿತ ಬೆನ್ನಲ್ಲೇ ಎಚ್ಚೆತ್ತ ಗುಜರಾತ್‌; ರಥಯಾತ್ರೆಯಲ್ಲಿ ಕಾಲ್ತುಳಿತ ತಪ್ಪಿಸಲು ನಯಾ ಪ್ಲ್ಯಾನ್‌ – AI ಟೆಕ್ನಾಲಜಿ ಮೊರೆ

ahemadabad plane crash

ಬ್ಲ್ಯಾಕ್‌ಬಾಕ್ಸ್‌ನಲ್ಲಿ ಎರಡು ವಿಧ ಇರುತ್ತದೆ. ಒಂದು ಕಾಕ್ ಪಿಟ್‌ನಲ್ಲಿರುವ ಬ್ಲ್ಯಾಕ್‌ಬಾಕ್ಸ್. ಇನ್ನೊಂದು ಡೆಟಾ ರೆಕಾರ್ಡ್ ಬಾಕ್ಸ್. ಒಂದು ಕಾಕ್ ಪಿಟ್‌ನಲ್ಲಿ ಎಟಿಸಿ, ಪೈಲಟ್‌ನೊಂದಿಗಿನ ಸಂಭಾಷಣೆಯ ಆಡಿಯೋ ರೆಕಾರ್ಡ್ ಆಗಿರುತ್ತದೆ. ಮತ್ತೊಂದು ಫ್ಲೈಟ್ ಡೆಟಾ ರೆಕಾರ್ಡರ್. ಇದರಲ್ಲಿ ಇಂಜಿನ್‌ನ ಕ್ಷಮತೆ, ವೇಗ, ಎತ್ತರ ಇತರೆ ತಾಂತ್ರಿಕ ಸಮಸ್ಯೆಗಳು ಏನೇ ಇದ್ದರೂ ಫ್ಲೈಟ್ ಡೆಟಾ ರೆಕಾರ್ಡರ್‌ನಲ್ಲಿ ಸೆರೆಯಾಗಿರುತ್ತದೆ. ಈ ಬ್ಲ್ಯಾಕ್ ಬಾಕ್ಸ್ 1 ಸಾವಿರ ಡಿಗ್ರಿ ಉಷ್ಣಾಂಶವಿದ್ದರೂ ಇದಕ್ಕೆ ಹಾನಿಯಾಗಲ್ಲ. ಸಮುದ್ರದ ಆಳಕ್ಕೆ ಬಿದ್ದರೂ 30 ದಿನಗಳವರೆಗೆ ಏನು ಹಾನಿಯಾಗಲಾರದ ಹಾಗೆ ವಿನ್ಯಾಸ ಮಾಡಿರಲಾಗುತ್ತದೆ. ಇದನ್ನೂ ಓದಿ: ವಿಜಯಪುರ | ಭಾರಿ ಮಳೆ – ತಗ್ಗು ಪ್ರದೇಶದ ಮನೆಗಳಿಗೆ ನುಗ್ಗಿದ ನೀರು

ಬ್ಲ್ಯಾಕ್ ಬಾಕ್ಸ್‌ಗೆ ಅತಿಯಾದ ಹೊಡೆತ, ಉಷ್ಣಾಂಶವಿದ್ದರೆ ಸೆನ್ಸಾರ್, ಚಿಪ್, ಕೇಬಲ್ ಇತರೆ ಎಲೆಕ್ಟ್ರಿಕ್ ಸಾಧನಗಳಿಗೆ ಹಾನಿಯಾಗುವ ಸಾಧ್ಯತೆಯಿದೆ. ಹಾನಿಯಾದರೂ ಅವುಗಳನ್ನು ಮರು ಜೋಡಿಸಿ ಡೇಟಾವನ್ನ ಪಡೆಯಬಹುದು. ಡಿಜಿಸಿಎ ಕೂಡ ತನಿಖೆಯನ್ನು ಚುರುಕುಗೊಳಿಸಿದ್ದು, ಇನ್ನೆರೆಡು ದಿನದಲ್ಲಿ ಈ ಅತಿದೊಡ್ಡ ದುರಂತಕ್ಕೆ ಕಾರಣ ಸಿಗಲಿದೆ. ಇದನ್ನೂ ಓದಿ: ಬೆಳಗಾವಿ | ಧಾರಾಕಾರ ಮಳೆಗೆ ಕೊಚ್ಚಿಹೋದ ಆಟೋ – ಚಾಲಕ ದುರ್ಮರಣ

Share This Article