ಇವತ್ತಿನ ದಿನಗಳಲ್ಲಿ ಸಂಬಂಧಗಳಿಗೆ ಬೆಲೆನೇ ಇಲ್ಲ. ಸಣ್ಣಪುಟ್ಟ ಜಗಳಕ್ಕೆ, ಕೋಪಕ್ಕೆ, ಮನಸ್ತಾಪಕ್ಕೆ ಸಂಬಂಧಗಳನ್ನೇ ಕಡಿದುಕೊಳ್ತಾರೆ. ನಾವು ತುಂಬಾ ಸ್ಪೀಡ್ ಇದ್ದೀವಿ, ನಾವು ಅಲ್ಲಿದ್ದರೆ ಸುಖವಾಗಿರ್ತೀವಿ, ಇಲ್ಲಿದ್ದರೆ ಸುಖವಾಗಿರ್ತೀವಿ ಅಂತ ಏನೇನೋ ಕಲ್ಪನೆಯಲ್ಲಿ ಬದುಕುತ್ತಿದ್ದೇವೆ. ಆದರೆ, ಜೀವನ ಅಂದರೆ ಏನು? ಹೆಂಗ್ ಬದುಕಬೇಕು, ಯಾಕೆ ಬದುಕಬೇಕು ಅನ್ನುವುದು ತುಂಬಾ ಇಂಪಾರ್ಟೆಂಟ್ ಆಗುತ್ತೆ. ಹೀಗಾಗಿ, ಜೀವನದ ಬಗ್ಗೆ ಅರಿವು ಮೂಡಿಸೋಕೆ ಪ್ಲಸ್ ಬಿರುಕುಬಿಟ್ಟಿರುವ ಸಂಬಂಧಗಳಿಗೆ ಅಮೃತದಾರದಿಂದ ಹೊಲಿಗೆ ಹಾಕೋದಕ್ಕೆ ‘ಮಾವು-ಬೇವು’ (Mavu Bevu) ಎಂಬ ಸಿನಿಮಾ ಬರುತ್ತಿದೆ. ಈಗಿನ ಜನರೇಷನ್ ಗೆ ಇಂತಹ ಸಿನಿಮಾದ ಅಗತ್ಯವಿತ್ತು ಅಂತಾರೇ ನಟಿ ಸಿತಾರಾ.
Advertisement
ಮಾವು-ಬೇವು ಪ್ರಸಿದ್ದ ನಟ ಕಮ್ ನಿರ್ದೇಶಕ ಸುಚೇಂದ್ರ ಪ್ರಸಾದ್ (Suchendra Prasad) ನಿರ್ದೇಶನ ಮಾಡಿರುವಂತಹ ಚಿತ್ರ. ಈ ಚಿತ್ರದಲ್ಲಿ ಸಿತಾರಾ ಪೋಷಕ ನಟಿಯಾಗಿ ಅಭಿನಯಿಸಿದ್ದಾರೆ. ಜೊತೆಗೆ ವಸ್ತ್ರವಿನ್ಯಾಸಕಿಯಾಗಿ ಕೆಲಸ ಮಾಡಿದ್ದಾರೆ. ಇದೇ ಮೊದಲ ಭಾರಿಗೆ ಸುಚೇಂದ್ರ ಪ್ರಸಾದ್ ಅವರ ನಿರ್ದೇಶನದಲ್ಲಿ ಕೆಲಸ ಮಾಡಿದ ಅನುಭವ ಹಂಚಿಕೊಂಡ ಸಿತಾರಾ, ಸುಚೇಂದ್ರ ಪ್ರಸಾದ್ ಅವರನ್ನು ಜ್ಞಾನಭಂಡಾರ ಎಂದು ಹೊಗಳಿದರು. ನುರಿತ ತಂಡದ ಜೊತೆಗೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯವೆಂತಲೂ ಹೇಳಿಕೊಂಡರು. ಇದನ್ನೂ ಓದಿ:ಸಲ್ಮಾನ್ ಖಾನ್ ನಂಬರ್ ಬ್ಲಾಕ್ ಮಾಡಿದ್ದರಂತೆ ಸಿದ್ಧಾರ್ಥ್ ಶುಕ್ಲಾ ಪ್ರೇಯಸಿ!
Advertisement
Advertisement
ಹಾಗೇ ಮಾತು ಮುಂದುವರೆಸಿ ತಮ್ಮ ಜರ್ನಿಯನ್ನು ಮೆಲುಕು ಹಾಕಿದ ನಟಿ ಸಿತಾರಾ (Sitara), ದಾವಣಗೆರೆಯ ದೊಡ್ಡಮಾಗಡಿ ನನ್ನ ಮೂಲ. 2005 -2006 ರಲ್ಲಿ ನೀನಾಸಂ ಮುಗಿಸಿಕೊಂಡೆ. ಅದು ರಂಗಭೂಮಿ ಆಗಿದ್ದರಿಂದ ಎಲ್ಲರೂ ಎಲ್ಲಾ ಕೆಲಸ ಕಲೀಬೇಕು. ಹೀಗಾಗಿ, ಸೆಟ್, ಲೈಟ್, ಪ್ರಾಪರ್ಟಿ, ಮೇಕಪ್, ಕಾಸ್ಟ್ಯೂಮ್ ಸೇರಿದಂತೆ ಎಲ್ಲವನ್ನೂ ಅಭ್ಯಾಸ ಮಾಡಿದೆ. ನಾಲ್ಕೈದು ವರ್ಷ ಅಲ್ಲೇ ಕೆಲಸ ಮಾಡಿ, 2014ರಲ್ಲಿ ಬೆಂಗಳೂರಿಗೆ ಬಂದೆ. ಅಗ್ನಿಸಾಕ್ಷಿ ನನ್ನ ಮೊದಲ ಸೀರಿಯಲ್ಲು. ರಂಗಿತರಂಗ ನನ್ನ ಮೊದಲ ಚಿತ್ರ. ನಾನು ಆ್ಯಕ್ಟ್ ಮಾಡಿದ ಎಲ್ಲಾ ಸೀರಿಯಲ್ ಹಾಗೂ ಸಿನಿಮಾಗಳಲ್ಲಿ ನಾನೇ ನನ್ನ ಪಾತ್ರಕ್ಕೆ ಕಾಸ್ಟ್ಯೂಮ್ ಡಿಸೈನ್ ಮಾಡಿಕೊಂಡಿದ್ದೇನೆ. ನಾಗಕನ್ನಿಕೆ, ಸುಬ್ಬಲಕ್ಷ್ಮಿ ಸಂಸಾರ, ಗಂಗಾ, ಇವಳೇ ವೀಣಾ ಪಾಣಿ ಸೇರಿದಂತೆ ಹಲವು ಧಾರಾವಾಹಿಗಳಿಗೆ ವಸ್ತ್ರವಿನ್ಯಾಸಕಿಯಾಗಿ ಕೆಲಸ ಮಾಡಿದ್ದೇನೆ. ಕ್ಯಾಮೆರಾ ಹಿಂದೆ ನಿತ್ಯನಿರಂತರವಾಗಿ ದುಡಿಯುತ್ತಿದ್ದು, ಆಗಾಗ ಕ್ಯಾಮೆರಾ ಮುಂದೆಯೂ ಕಾಣಿಸಿಕೊಳ್ಳುವುದಕ್ಕೆ ಅವಕಾಶಗಳು ಸಿಗ್ತಿವೆ. ಸದ್ಯ ಮಾವು-ಬೇವು ಸಿನಿಮಾ ರಿಲೀಸ್‍ಗಾಗಿ ಎದುರು ನೋಡ್ತಿದ್ದೇನೆ. ಸಿನಿಮಾ ಸಾಕಷ್ಟು ಶೋ ಆಗಿದ್ದು, ನಾನು ನಾಲ್ಕೈದು ಭಾರಿ ಚಿತ್ರ ನೋಡಿದ್ದೇನೆ. ತುಂಬಾ ಅದ್ಭುತವಾಗಿ ಮೂಡಿ ಬಂದಿದ್ದು, ಕನ್ನಡ ಕಲಾಭಿಮಾನಿಗಳೆಲ್ಲರೂ ಫಸ್ಟ್ ಡೇ ಫಸ್ಟ್ ಶೋ ಥಿಯೇಟರ್ ಗೆ ಬಂದು ಸಿನಿಮಾ ನೋಡಲಿ ಅಂತ ಕೇಳಿಕೊಳ್ಳುತ್ತೇನೆ’ ಎಂದರು.