ನವದೆಹಲಿ: ಟೀಂ ಇಂಡಿಯಾದ ದಿ ಬೆಸ್ಟ್ ಡೆಪ್ತ್ ಬೌಲರ್ ಎಂಬ ಹೆಗ್ಗಳಿಕೆ ಪಡೆದಿದ್ದ ಜಸ್ಪ್ರೀತ್ ಬುಮ್ರಾ, ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಏಕದಿನ ಪಂದ್ಯದ ಓವರ್ ಒಂದರಲ್ಲಿ 19 ರನ್ ನೀಡಿದ್ದಾರೆ.
ದೆಹಲಿಯ ಫಿರೋಜ್ ಶಾ ಕೋಟ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಅಂತಿಮ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 272 ರನ್ ಗಳಿಸಿತು.
Advertisement
Advertisement
ಪಂದ್ಯದ 48 ನೇ ಓವರ್ ಬೌಲ್ ಮಾಡಿ ಬುಮ್ರಾ ಬೌಲಿಂಗ್ ನಲ್ಲಿ ರಿಚರ್ಡ್‍ಸನ್ ಹಾಗೂ ಕಮ್ಮಿನ್ಸ್ 4 ಬೌಂಡರಿ ಸಮೇತ 19 ರನ್ ಸಿಡಿಸಿದರು. ಈ ಮೂಲಕ ಈ ಓವರ್ ಬುಮ್ರಾ ಏಕದಿನ ವೃತ್ತಿ ಜೀವನದ ದುಬಾರಿ ಎನಿಸಿಕೊಂಡಿತು.
Advertisement
10 ಓವರ್ ಬೌಲ್ ಮಾಡಿ ಬುಮ್ರಾ ಕೇವಲ ಯಾವುದೇ ವಿಕೆಟ್ ಪಡೆಯದೆ 39 ರನ್ ನೀಡಿದ್ದಾರೆ. ಬುಮ್ರಾ ಬೌಲ್ ಮಾಡಿದ 60 ಎಸೆತಗಳಲ್ಲಿ 40 ಎಸೆತಗಳು ಡಾಟ್ ಆಗಿರುವುದು ವಿಶೇಷವಾಗಿದೆ. ಉಳಿದಂತೆ ಭುವನೇಶ್ವರ್ ಕುಮಾರ್ 3, ಶಮಿ ಮತ್ತು ಜಡೇಜಾ ತಲಾ 2 ಹಾಗೂ ಕುಲ್ದೀಪ್ ಯಾದವ್ 1 ವಿಕೆಟ್ ಪಡೆದರು. ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಇರುವ ಟೀಂ ಇಂಡಿಯಾಗೆ ಗೆಲ್ಲಲು 273 ರನ್ ಗಳ ಅಗತ್ಯವಿದೆ.
Advertisement
Innings Break!#TeamIndia restrict Australia to a total of 272/9 in 50 overs
Scorecard – https://t.co/8JniSIXQKn #INDvAUS pic.twitter.com/dyHKwRSLgI
— BCCI (@BCCI) March 13, 2019
ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ ಪರ ಖವಾಜಾ ಶತಕ ಸಿಡಿಸಿದರೆ, ಹ್ಯಾಡ್ಸ್ ಕಂಬ್ 52 ರನ್ ಸಿಡಿಸಿ ಆಸೀಸ್ ಸ್ಪರ್ಧಾತ್ಮಕ ಮೊತ್ತ ಗಳಿಸಲು ಕಾರಣರಾದರು. ಉಳಿದಂತೆ ಸರಣಿಯಲ್ಲಿ 366 ರನ್ ಗಳಿಸಿದ ಖವಾಜಾ ಭಾರತ ವಿರುದ್ಧದ 5 ಪಂದ್ಯಗಳ ಏಕದಿನ ಟೂರ್ನಿಯಲ್ಲಿ ಅತೀ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡರು. ಈ ಹಿಂದೆ 2014ರಲ್ಲಿ ನ್ಯೂಜಿಲೆಂಡ್ ತಂಡದ ಕೆನ್ ವಿಲಿಯಮ್ಸನ್ 361 ಹಾಗೂ 2015 ರಲ್ಲಿ ಎಬಿ ಡಿವಿಲಿಯರ್ಸ್ 358 ರನ್ ಹೊಡೆದಿದ್ದರು.
Who's taking the ???? home tonight?
????for India
????for Australia#INDvAUS pic.twitter.com/sJPODbSmoW
— BCCI (@BCCI) March 13, 2019
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv