ಗದಗ: ಜಮೀನಿನಲ್ಲಿ (Farm) ಮೆಣಸಿನಕಾಯಿ ಬೆಳೆ ಕಾಯುತ್ತಿದ್ದ ರೈತ ಕಾರ್ಮಿಕನ ತಲೆಯನ್ನು ದುಷ್ಕರ್ಮಿಗಳು ಕತ್ತರಿಸಿಕೊಂಡು ಹೋದ ಘಟನೆ ಗದಗ (Gadag) ತಾಲೂಕಿನ ತಿಮ್ಮಾಪೂರ (Thimmapur) ಗ್ರಾಮದ ಜಮೀನಿನಲ್ಲಿ ನಡೆದಿದೆ.
ಸಣ್ಣ ಹನುಮಪ್ಪ ಅಲಿಯಾಸ್ ಕುಂಟೆಪ್ಪ ವಜ್ರದ್ (65) ಎಂಬ ರೈತ ಕಾರ್ಮಿಕನ ರುಂಡವನ್ನು ಯಾರೋ ಕತ್ತರಿಸಿಕೊಂಡು ಹೋಗಿದ್ದಾರೆ. ಸ್ಥಳದಲ್ಲಿ ದೇಹ ಮಾತ್ರ ಇದ್ದು, ರುಂಡ ಇಲ್ಲ. ಮೃತ ರೈತ ಕಾರ್ಮಿಕ ಕೊಪ್ಪಳ (Koppal) ಜಿಲ್ಲೆಯ ಕುಕನೂರು ತಾಲೂಕಿನ ಮಾಳೆಕೊಪ್ಪ ನಿವಾಸಿ. ಈತ ತಿಮ್ಮಾಪೂರ ಗ್ರಾಮದ ಬಾಲಪ್ಪ ಕೊಪ್ಪದ ಎಂಬ ರೈತರ ಜಮೀನಲ್ಲಿ ಬೆಳೆ ಕಾಯುತ್ತಿದ್ದ. ಜಮೀನಿನ ಮಾಲಿಕರು ನಿತ್ಯ ಊಟ ಕೊಟ್ಟು ತಿಂಗಳಿಗೆ 7,000 ರೂ. ಕೊಡುವುದಾಗಿ ಹೇಳಿ ಜಮೀನು ಕಾಯುವಂತೆ ಹೇಳಿದ್ದರು. ಕಳೆದ ಒಂದು ತಿಂಗಳಿನಿಂದ ಮೆಣಸಿನಕಾಯಿ ಕಾಯುತ್ತಿದ್ದ. ಆದರೆ ಬೆಳಗ್ಗೆ ಮಾಲೀಕರು ಬಂದು ನೋಡಿದಾಗ ಕುಂಟೆಪ್ಪನ ರುಂಡ ಇಲ್ಲವಾಗಿದೆ. ಇದನ್ನೂ ಓದಿ: ದೇಶದಲ್ಲಿ ಭಯೋತ್ಪಾದಕ ಕೃತ್ಯಕ್ಕೆ ಸಂಚು ಆರೋಪ; 15 ಮಂದಿ ಐಸಿಸ್ ಶಂಕಿತರ ಬಂಧನ
Advertisement
Advertisement
ಯಾರು ಕೊಲೆ ಮಾಡಿದ್ದಾರೆ? ಯಾಕೆ ಆಗಿದೆ ಎಂಬುದು ತಿಳಿದು ಬಂದಿಲ್ಲ. ಆದರೆ ಕೊಲೆಯ ಹಿಂದೆ ಹಲವು ಅನುಮಾನಗಳು ವ್ಯಕ್ತವಾಗುತ್ತಿವೆ. ಸ್ಥಳಕ್ಕೆ ಗದಗ ಎಸ್.ಪಿ ಬಿ.ಎಸ್ ನೇಮಗೌಡ, ಡಿವೈಎಸ್ಪಿ ಸುಂಕದ್ ಹಾಗೂ ಗ್ರಾಮೀಣ ಪೊಲೀಸರು, ಬೆರಳಚ್ಚು ತಜ್ಞರು, ಶ್ವಾನದ ತಂಡ ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ. ರೈತ ಕಾರ್ಮಿಕನ ರುಂಡ ಹಾಗೂ ದುಷ್ಕರ್ಮಿಗಳ ಬಗ್ಗೆ ಹುಡುಕಾಟ ನಡೆಸಿದ್ದಾರೆ. ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಐಟಿ ದಾಳಿಯಲ್ಲಿ 290 ಕೋಟಿ ರೂ. ಜಪ್ತಿ – ಎಣಿಸಿದಷ್ಟು ಹೆಚ್ಚುತ್ತಲೇ ಇದೆ ಹಣ
Advertisement
Advertisement
ಇತ್ತೀಚೆಗೆ ಗದಗ ಜಿಲ್ಲೆಯಲ್ಲಿ ಮೆಣಸಿನಕಾಯಿ ಕಳ್ಳರ ಹಾವಳಿ ಹೆಚ್ಚಾಗಿದೆ. ತಮ್ಮ ಬೆಳೆ ಉಳಿಸಿಕೊಳ್ಳಲು ರೈತರು ಸಾಕಷ್ಟು ಕಷ್ಟ ಪಡುವಂತಾಗಿದೆ. ಆದರೆ ಈ ಘಟನೆಯಿಂದ ರೈತರು ಬೆಚ್ಚಿ ಬಿದ್ದಿದ್ದಾರೆ. ತಮ್ಮ ಬೆಳೆ ಉಳಿಸಿಕೊಳ್ಳಲು ಹಗಲು ರಾತ್ರಿ ಕಾವಲು ಕಾಯಲು ಭಯ ಪಡುವ ವಾತಾವರಣ ನಿರ್ಮಾಣವಾಗಿದೆ. ಇದನ್ನೂ ಓದಿ: ಬೇಲ್‌ನಲ್ಲಿ ಹೊರಬಂದ ಅತ್ಯಾಚಾರ ಆರೋಪಿ ಅಪ್ರಾಪ್ತೆ ಮೇಲೆ ಆ್ಯಸಿಡ್ ದಾಳಿ – ಬಳಿಕ ಆತ್ಮಹತ್ಯೆ