ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೆಲ ದೊಡ್ಡವರ ಮಕ್ಕಳಿಗೆ ತಲೆಯೇ ನಿಲ್ಲುವುದಿಲ್ಲ. ಕುಡಿದ ಮತ್ತಿನಲ್ಲಿ ಲಾಯರ್ ಅಂತಾ ಹೇಳಿದರೂ ಬಿಡದೇ ಮನಸೋ ಇಚ್ಚೇ ಥಳಿಸಿರುವ ಘಟನೆ ನಡೆದಿದೆ.
ಕಳೆದ ಭಾನುವಾರ ರಾತ್ರಿ 10.30ರ ಸುಮಾರಿಗೆ ಹಲಸೂರು ಗೇಟ್ ಠಾಣಾ ವ್ಯಾಪ್ತಿಯ ಪೊಲೀಸ್ ಕಾರ್ನರ್ ಸರ್ಕಲ್ ಬಳಿ ಲಾಯರ್ ಪ್ರವೀಣ್ ಗೌಡ ಅವರು ಬರುತ್ತಿದ್ದರು. ಇದೇ ವೇಳೆ ಬೆಂಜ್ ಕಾರೊಂದು ಪಕ್ಕ ಬಂದು ಸಿಗ್ನಲ್‍ನಲ್ಲಿ ನಿಂತಿತು. ಕಾರಿನ ಪಕ್ಕದಲ್ಲಿ ಪಾಸ್ ಮಾಡಿಕೊಂಡು ಬೈಕ್‍ನಲ್ಲಿ ಮುಂದೆ ಹೋಗುತ್ತಿರಬೇಕಾದರೆ, ಕಾರೊಳಗಿದ್ದ ವ್ಯಕ್ತಿ ನೋಡಿಕೊಂಡು ಹೋಗೋಲೇ ಅಂತಾ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇದನ್ನೂ ಓದಿ: ಅಮರನಾಥ ಯಾತ್ರೆ: ನೈಸರ್ಗಿಕ ವಿಕೋಪದಿಂದ 8 ಯಾತ್ರಾರ್ಥಿಗಳು ಸಾವು
Advertisement
Advertisement
ಸಿಗ್ನಲ್ ಆನ್ ಆಗಿದ್ದರಿಂದ ಬೆಂಜ್ ಕಾರು ಹಿಂದೆ ವಕೀಲರು ಹೋಗುತ್ತಿರಬೇಕಾದರೆ, ಕಾರು ನಿಲ್ಲಿಸಿ ಕೆಳಗಿಳಿದು ವಕೀಲ ಪ್ರವೀಣ್ ಗೌಡ ಬಳಿಯ ಹೆಲ್ಮೆಟ್ ಕಿತ್ತುಕೊಂಡು ಹಲ್ಲೆ ನಡೆಸಿದ್ದಾರೆ. ಮುಖ, ತುಟಿ ಹಾಗೂ ತಲೆಯ ಭಾಗಕ್ಕೆ ಹಲ್ಲೆ ಮಾಡಿ, ಎಡಭಾಗದ ಭುಜಕ್ಕೆ ಆಯುಧದಿಂದ ಥಳಿಸಿದ್ದಾರೆ. ಇದನ್ನೂ ಓದಿ: ಡೋನಾಲ್ಡ್ ಟ್ರಂಪ್ ಮೊದಲ ಪತ್ನಿ ಇವಾನಾ ಟ್ರಂಪ್ ವಿಧಿವಶ
Advertisement
Advertisement
ಕಾರಿನಿಂದ ಡ್ರೈವರ್‍ನನ್ನು ಕೆಳಗಿಳಿಸಿ ಹಲ್ಲೆ ಮಾಡಿದ್ದಾರೆ. ಮುಖಕ್ಕೆ ಹೊಡೆದಿದ್ದರಿಂದ ಒಂದು ಹಲ್ಲು ಮುರಿದಿದೆ. ಹೇಗೊ ತಪ್ಪಿಸಿಕೊಂಡು ಬಂದು ಕಾರಿನ ನಂಬರ್ ನೋಟ್ ಮಾಡಿಕೊಂಡು ಹಲಸೂರು ಗೇಟ್ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಆದರೆ 1 ವಾರವಾದರೂ ಪೊಲೀಸರು ಆರೋಪಿಗಳನ್ನು ಬಂಧಿಸಿರಲಿಲ್ಲ. ಕೊನೆಗೆ ವಕೀಲರ ಸಂಘ ಎಂಟ್ರಿಯಾದಾಗ ರಾಕೇಶ್ ಹಾಗೂ ರಂಗನಾಥ್ ಎಂಬ ಇಬ್ಬರು ಕನ್ಷ್ಟ್ರಕ್ಷನ್ ಕಂಪನಿಯ ಮಾಲೀಕರನ್ನು ಅರೆಸ್ಟ್ ಮಾಡಿದ್ದಾರೆ.
ಈ ಹಿಂದೆ ಅರೆಸ್ಟ್ ಆದ ಆರೋಪಿಗಳ ಕುಟುಂಬಸ್ಥರು ಉಪ್ಪಾರಪೇಟೆ ಠಾಣಾ ವ್ಯಾಪ್ತಿಯಲ್ಲಿ ಪ್ರತಿಷ್ಟಿತ ಕ್ಲಬ್ ನಡೆಸುತ್ತಿದ್ದರಂತೆ.. ಮದದಲ್ಲಿ ಸ್ವೇಚ್ಛಾಚಾರಿಗಳಂತೆ ವರ್ತಿಸುವ ಇಂಥವರಿಗೆ ಕಾನೂನಿನ ಪಾಠ ಕಲಿಸಬೇಕಿದೆ. ಸದ್ಯ ಆರೋಪಿಗಳನ್ನ ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.