ವಾಷಿಂಗ್ಟನ್: ಡೊನಾಲ್ಡ್ ಟ್ರಂಪ್ ಅವರ ಮೊದಲ ಪತ್ನಿ ಇವಾನಾ ಟ್ರಂಪ್(73) ಅವರು ಅವರು ನಿಧನರಾಗಿದ್ದಾರೆ.
ನ್ಯೂಯಾರ್ಕ್ ನಗರದ ತಮ್ಮ ನಿವಾಸದಲ್ಲಿ ಮೆಟ್ಟಿಲಿನಿಂದ ಜಾರಿ ಬಿದ್ದು, ಗುರುವಾರ ಇವಾನಾ ಟ್ರಂಪ್ ಅವರು ಕೊನೆಯುಸಿರೆಳೆದಿದ್ದಾರೆ. ಈ ಕುರಿತಂತ ಮಾಹಿತಿಯನ್ನು ಡೊನಾಲ್ಡ್ ಟ್ರಂಪ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ: 15 ದಿನದಲ್ಲಿ ಆರೋಪ ಮುಕ್ತನಾಗಿ ಬರುತ್ತೇನೆ ಎಂದ ಈಶ್ವರಪ್ಪ – ಪಾರದರ್ಶಕ ತನಿಖೆಗೆ ರಾಜ್ಯಪಾಲರ ಮೊರೆಹೋದ ಸಂತೋಷ್ ಪಾಟೀಲ್ ಕುಟುಂಬ
ಆಕೆ ಅದ್ಭುತ, ಸುಂದರ ಮಹಿಳೆ. ಅವಳ ಹೆಮ್ಮೆ ಮತ್ತು ಸಂತೋಷವೆಂದರೆ ಅವಳ ಮೂವರು ಮಕ್ಕಳಾದ ಡೊನಾಲ್ಡ್ ಜೂನಿಯರ್, ಇವಾಂಕಾ ಮತ್ತು ಎರಿಕ್. ಅವಳ ಬಗ್ಗೆ ನಮಗೆಲ್ಲರಿಗೂ ಹೆಮ್ಮೆ ಇತ್ತು. ಅವಳಿಗೂ ನಮ್ಮ ಬಗ್ಗೆ ತುಂಬಾ ಹೆಮ್ಮೆ ಇತ್ತು. ಅವರು ತಮ್ಮ ಮಕ್ಕಳಿಗೆ ತಾಳ್ಮೆ ಮತ್ತು ಕಠಿಣತೆ, ಸಹಾನುಭೂತಿ ಮತ್ತು ನಿರ್ಣಯದ ಬಗ್ಗೆ ಕಲಿಸಿದ್ದಾರೆ. ಆಕೆಯ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ: ಬಿಬಿಎಂಪಿಯಲ್ಲಿ 243 ವಾರ್ಡ್ ಫಿಕ್ಸ್- 55ನೇ ವಾರ್ಡ್ಗೆ ಪುನೀತ್ ಹೆಸರು ನಾಮಕರಣ
ಮಾಡೆಲ್ ಆಗಿದ್ದ ಇವಾನಾ 1977ರಲ್ಲಿ ಉದಯೋನ್ಮುಖ ರಿಯಲ್ ಎಸ್ಟೇಟ್ ಡೆವಲಪರ್ ಆಗಿದ್ದ ಡೊನಾಲ್ಡ್ ಟ್ರಂಪ್ ಅವರನ್ನು ವಿವಾಹವಾದ್ದರು. ಈ ಜೋಡಿಗೆ ಅದೇ ವರ್ಷದಲ್ಲಿಯೇ ಮೊದಲ ಮಗು ಡೊನಾಲ್ಡ್ ಜೂನಿಯರ್ ಜನಿಸಿದರು. ನಂತರ ಇವಾಂಕಾ 1981ರಲ್ಲಿ ಮತ್ತು ಎರಿಕ್ 1984 ರಲ್ಲಿ ಜನಿಸಿದ್ದರು. 1992ರಲ್ಲಿ ವಿಚ್ಛೇದನ ಪಡೆದರು.