ಹುಲಿ ಉಗುರು ಪ್ರಕರಣಕ್ಕೆ (Tiger Claw)ಸಂಬಂಧಿಸಿದಂತೆ ಜಗ್ಗೇಶ್ (Jaggesh) ಮತ್ತೆ ತಮ್ಮ ನೋವು ತೋಡಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಕುರಿತು ಬರೆದುಕೊಂಡಿರುವ ಅವರು, ಸಂಬಂಧದ ಬೆಲೆಯನ್ನೂ ಈ ಮೂಲಕ ತಿಳಿಸುವ ಪ್ರಯತ್ನ ಮಾಡಿದ್ದಾರೆ. ಪ್ರಚಾರದ ಬಗ್ಗೆ ಚಾಟಿ ಬೀಸಿದ್ದಾರೆ.
ನಾನಾಯಿತು ನನ್ನ ಬದುಕಾಯಿತು ಎಂದು ಶ್ರದ್ಧೆಯಿಂದ ಬಾಳುತ್ತಿರುವ ನನ್ನನ್ನು ಪ್ರಚಾರ ವಸ್ತುವಿನಂತೆ ಬಳಕೆ ಮಾಡಲಾಯಿತು. ಪ್ರೀತಿ, ನಂಬಿಕೆ, ಸಂಬಂಧ ಎಂದು ಸಾಮಾಜಿಕವಾಗಿ ಮಾತನಾಡುತ್ತಿದ್ದ ನನ್ನನ್ನು ಮೂಕನಾಗಿಸಿ, ಇನ್ನು ಮುಂದೆ ಯಾವ ವಿಷಯವು ಮಾತನಾಡದಂತೆ ದಿಗ್ಭಂಧ ಹಾಕಿಕೊಂಡಿತು ಮನಸು. ಇಂದಿನ ದುರ್ದೈವ ಪ್ರಚಾರ ಕಂಡು. ಸಂಬಂಧ ಅರಿವಿಲ್ಲದ ಸಮುದಾಯ ಎಂದು ಅವರು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ತನ್ನ ತಾಯಿ ಕೊಟ್ಟ ಹುಲಿ ಉಗುರಿನೆ ಪೆಂಡೆಂಟ್ ಕುರಿತಾಗಿ ಅವರು ಹೇಳಲಾದ ವಿಡಿಯೋ ವೈರಲ್ ಆಗಿತ್ತು. ಏಕಾಏಕಿ ಅರಣ್ಯಾಧಿಕಾರಿಗಳು ಜಗ್ಗೇಶ್ ಮನೆಗೆ ನುಗ್ಗಿ ತಪಾಸಣೆ ಮಾಡಿದ್ದರು. ಈ ನಡೆಯ ವಿರುದ್ಧ ಜಗ್ಗೇಶ್ ಕೋರ್ಟ್ ಮೆಟ್ಟಿಲು ಏರಿದ್ದರು. ಇದೀಗ ಕೋರ್ಟ್ ಅರಣ್ಯಾಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದೆ.
Web Stories