ಬೆಂಗಳೂರು: ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರ ವಿಚಾರಧಾರೆ ಹಾಗೂ ಕೃತಿಗಳ ಬಗ್ಗೆ ಯುವ ಪೀಳಿಗೆ ಅಧ್ಯಯನ ಮಾಡುವಂತಾಗಬೇಕು. ಸಾಮಾಜಿಕ, ಸಾಂಸ್ಕೃತಿಕ ಚಿಂತನಾ ಪ್ರತಿಭೆಗಳು ಯುವಜನರಲ್ಲಿ ಹೆಚ್ಚಾಗಬೇಕು. ಮಾಸ್ತಿ ಭವನ ಈ ಉದ್ದೇಶಕ್ಕೆ ಉತ್ತಮ ವೇದಿಕೆಯಾಗಿ ರೂಪುಗೊಳ್ಳಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕರೆ ಕೊಟ್ಟರು.
ಇಂದು ನಗರದ ಜ್ಞಾನಭಾರತಿ ಬಡಾವಣೆಯಲ್ಲಿ ಮಾಸ್ತಿ ಭವನ ನಿರ್ಮಾಣಕ್ಕೆ ಗುದ್ದಲಿ ಪೂಜೆ ಹಾಗೂ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು ಭವನದ ನಿರ್ಮಾಣಕ್ಕೆ 3 ಕೋಟಿ ರೂ.ಗಳ ಅನುದಾನ ನೀಡಲಾಗಿದೆ. ಒಂದು ರಾಜ್ಯದ ಅಭಿವೃದ್ಧಿಯನ್ನು ಆರ್ಥಿಕ ಸ್ಥಿತಿಗತಿ ಮಾತ್ರ ನಿರ್ಧರಿಸುವುದಿಲ್ಲ. ರಾಜ್ಯದ ಸಾಮಾಜಿಕ, ಶೈಕ್ಷಣಿಕ, ಸಾಹಿತ್ಯಿಕ ಹಾಗೂ ಮೌಲಿಕವಾಗಿಯೂ ಮುಂದುವರಿಯಬೇಕು, ಆಗಲೇ ಅದರ ನಿಜವಾದ ಅಭಿವೃದ್ಧಿಯಾದಂತೆ ಎಂದರು.
Advertisement
Advertisement
ಕನ್ನಡ ನಾಡಿಗೆ ದೇಶದಲ್ಲೇ ಅತೀ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳು ಲಭಿಸಿವೆ. ಚಂದ್ರಶೇಖರ್ ಕಂಬಾರ ಅವರು ಈ ಪಟ್ಟಿಗೆ ಸೇರಿದ್ದಾರೆ. ಅವರ ಒತ್ತಾಸೆಯಿಂದಾಗಿ ಜಾನಪದ ವಿಶ್ವವಿದ್ಯಾನಿಲಯ ಸ್ಥಾಪನೆಯಾಗಿದೆ. ಮಾಸ್ತಿಯವರಂತೆ, ಕಂಬಾರರ ವಿಚಾರಧಾರೆ ಚಿಂತನೆಗಳು ಅವರ ಕೃತಿಗಳಲ್ಲಿ ಹೊರಹೊಮ್ಮಿದ್ದು ಸಾರಸ್ವತ ಲೋಕವನ್ನು ಮತ್ತಷ್ಟು ಶ್ರೀಮಂತಗೊಳಿಸಿರುವುದು ಮಾತ್ರವಲ್ಲದೆ, ಚಿಂತನಾ ಶಕ್ತಿಯಾಗಿ ಜನರನ್ನು ಪ್ರೆರೇಪಿಸಿದೆ. ಇದನ್ನೂ ಓದಿ: ಹಿಂದೂಗಳು 4 ಮಕ್ಕಳನ್ನು ಹೊಂದಿರಬೇಕು, ಇಬ್ಬರನ್ನು RSSಗೆ ಕೊಡಬೇಕು: ಋತಂಭರಾ
Advertisement
ಸಹಕಾರ ಕ್ಷೇತ್ರದಲ್ಲಿ ಪ್ರಸ್ತುತ ಸಾಲಿನಲ್ಲಿ 24 ಲಕ್ಷ ಜನರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡುತ್ತಿರುವ ಸಹಕಾರ ಸಚಿವರ ಕಾರ್ಯವೈಕರಿಯನ್ನು ಶ್ಲಾಘಿಸಿದರು. ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಮಾತನಾಡಿ, ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರು ಮೈಸೂರು ಜಿಲ್ಲಾಧಿಕಾರಿಗಳಾಗಿದ್ದು, ಜ್ಞಾನಪೀಠ ಪ್ರಶಸ್ತಿಯನ್ನು ಪಡೆದಿದ್ದಾರೆ ಅವರ ಈ ಸಾಧನೆಯು ನೆನಪಿಸಿಕೊಳ್ಳುವಂತಹವುದು ಅಂತಹವರ ಸ್ಮರಣಾರ್ಥವಾಗಿ ನಿರ್ಮಾಣವಾಗುತ್ತಿರುವ ಈ ಭವನಕ್ಕೆ ಇದ್ಧಂತಹ ಎಲ್ಲಾ ಅಡೆತಡೆಗಳನ್ನು ಮಾನ್ಯ ಮುಖ್ಯಮಂತ್ರಿಗಳು ಕ್ಷಣ ಮಾತ್ರದಲ್ಲಿ ಪರಿಹರಿಸಿರುತ್ತಾರೆ ಎಂದರು.
Advertisement
ಬೆಂಗಳೂರು ನಗರ ಬೃಹತ್ ಆಗಿ ಬೆಳೆಯುತ್ತಿದ್ದು ಇದರ ಅಭಿವೃದ್ಧಿಯ ದೃಷ್ಟಿಯಿಂದ ಒಂದೇ ದಿನದಲ್ಲಿ ನಗರದ ಅಭಿವೃದ್ಧಿಗಾಗಿ 8,000 ಕೋಟಿ ಅನುದಾನವನ್ನು ಬಿಡುಗಡೆ ಮಾಡಿದೆ. ಮಳೆಗಾಲವು ಪ್ರಾರಂಭವಾಗಿದ್ದು ರಾಜಕಾಲುವೆಗಳ ಬಳಿ ಮನೆಗಳು ನಿರ್ಮಾಣವಾಗಿದ್ದು, ಅವುಗಳಿಗೆ ಯಾವುದೆ ತೊಂದರೆಯಾಗಬಾರದೆಂಬ ದೂರದೃಷ್ಟಿಯಿಂದಾಗಿ ರಾಜಕಾಲುವೆಗಳನ್ನು ಸರಿಪಡಿಸುವ ಸಲುವಾಗಿ 1500 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಕರ್ನಾಟಕದಲ್ಲಿ ಮುಂದಿನ ವಿಧಾನಸಭಾ ಚುನಾವಣೆಗೆ 50ಜನ ಸಂತರು ಸ್ಪರ್ಧಿಸಲಿದ್ದಾರೆ: ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ
ಜ್ಞಾನಪೀಠ ಪುರಸ್ಕೃತರಾದ ಸಾಹಿತಿ ಚಂದ್ರಶೇಖರ್ ಕಂಬಾರ್ ಮಾತನಾಡಿ ಮಾಸ್ತಿ ಅವರು ‘ಕನ್ನಡದ ಆಸ್ತಿ’ ಅವರ ಆರಂಭಿಕ ಜೀವನ ಮತ್ತು ಕೇಂದ್ರ ಸಾಹಿತ್ಯ ಅಧ್ಯಯನ ಮಾಡುವುದಕ್ಕೆ ವಿದ್ಯಾರ್ಥಿಗಳಿಗೆ, ಸಾಹಿತಿಗಳಿಗೆ ಮತ್ತು ಸಾರ್ವಜನಿಕರಿಗೆ ಅವರ ವಿಚಾರಧಾರೆಗಳನ್ನು ಅಳವಡಿಸಿಕೊಳ್ಳುವುದಕ್ಕೆ ಒಂದು ಉತ್ತಮ ಹೆಜ್ಜೆ ಮಾಸ್ತಿ ಭವನ ನಿರ್ಮಾಣ. ಸರ್ಕಾರದ ಕನ್ನಡ ಸಾಹಿತ್ಯದ ಕುರಿತು ಒಲವು ಇಡೀ ದೇಶವೇ ಮೆಚ್ಚುವಂತಹದ್ದು ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ, ಮಾಸ್ತಿ ಟ್ರಸ್ಟ್ ಅಧ್ಯಕ್ಷ ಮಾವಿನಕೆರೆ ರಂಗನಾಥ್ ಹಾಗೂ ಇತರರು ಉಪಸ್ಥಿತರಿದ್ದರು.