LatestLeading NewsMain PostNational

ಹಿಂದೂಗಳು 4 ಮಕ್ಕಳನ್ನು ಹೊಂದಿರಬೇಕು, ಇಬ್ಬರನ್ನು RSSಗೆ ಕೊಡಬೇಕು: ಋತಂಭರಾ

ಲಕ್ನೋ: ಈಗ ಪ್ರತಿ ಹಿಂದೂ ಪೋಷಕರು ಕನಿಷ್ಠ ನಾಲ್ಕು ಮಕ್ಕಳನ್ನು ಹೊಂದಿರಬೇಕು. ಅವರಲ್ಲಿ ಇಬ್ಬರನ್ನು ಆರ್‌ಎಸ್‌ಎಸ್ ಅಥವಾ ವಿಶ್ವಹಿಂದೂ ಪರಿಷತ್‌ಗೆ ಹಸ್ತಾಂತರಿಸಬೇಕು ಎಂದು ಆಧ್ಯಾತ್ಮಿಕ ಮುಖಂಡರಾದ ಸಾಧ್ವಿ ಋತಂಭರಾ ಕರೆ ನೀಡಿದ್ದಾರೆ.

ಉತ್ತರ ಪ್ರದೇಶದ ಕಾನ್ಪುರದಲ್ಲಿ ವಿಶ್ವ ಹಿಂದೂ ಪರಿಷತ್ (VHP) ವತಿಯಿಂದ ನಡೆದ ರಾಮೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಗ ಪ್ರತಿಯೊಬ್ಬ ಹಿಂದೂ ಕನಿಷ್ಠ 4 ಮಕ್ಕಳನ್ನು ಹೊಂದಿರಬೇಕು. ಅವರಲ್ಲಿ ಇಬ್ಬರನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ ಅಥವಾ ವಿಶ್ವ ಹಿಂದೂ ಪರಿಷತ್‌ಗೆ ಹಸ್ತಾಂತರಿಸಿದರೆ, ಅವರು ರಾಷ್ಟçತ್ಯಾಗಕ್ಕೆ ಕೊಡುಗೆ ನೀಡಬಹುದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಕರ್ನಾಟಕದಲ್ಲಿ ಮುಂದಿನ ವಿಧಾನಸಭಾ ಚುನಾವಣೆಗೆ 50ಜನ ಸಂತರು ಸ್ಪರ್ಧಿಸಲಿದ್ದಾರೆ: ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ

SADHVI

ರಾಮೋತ್ಸವವನ್ನುದ್ದೇಶಿಸಿ ಮಾತನಾಡುತ್ತಾ, ರಾಮನ ಭಕ್ತನಾಗಲು, ರಾಮತ್ವವನ್ನು ಅಳವಡಿಸಿಕೊಳ್ಳಬೇಕು. ಏಕೆಂದರೆ ರಾಮನು ಅಜೇಯ ಪುರುಷತ್ವದ ಸಂಕೇತ. ರಾಜಕೀಯ ಪಕ್ಷಗಳು ಹಿಂದೂಗಳನ್ನು ವಿಭಜಿಸುತ್ತವೆ. ಆದರೆ ಶ್ರೀರಾಮನ ನಡವಳಿಕೆಯು ಇಡೀ ಸಮಾಜವನ್ನು ಒಂದುಗೂಡಿಸುತ್ತದೆ ಎಂದು ಅವರು ಹೇಳಿದರು.

ಹೆಚ್ಚಿನ ಮಕ್ಕಳಿಗೆ ಜನ್ಮನೀಡಿ: ಅಖಿಲ ಭಾರತೀಯ ಸಂತ ಪರಿಷತ್ತಿನ ಹಿಮಾಚಲ ಪ್ರದೇಶ ಉಸ್ತುವಾರಿ ಯತಿ ಸತ್ಯದೇವಾನಂದ ಸರಸ್ವತಿ ಮಾತನಾಡಿ, ಹಿಂದೂಗಳು ಬಹುಸಂಖ್ಯಾತರಾಗಿರುವುದರಿಂದ ಭಾರತವು ಪ್ರಜಾಪ್ರಭುತ್ವ ರಾಷ್ಟçವಾಗಿದೆ. ಆದರೆ ಮುಸ್ಲಿಮರು ಯೋಜಿತ ರೀತಿಯಲ್ಲಿ ಅನೇಕ ಮಕ್ಕಳಿಗೆ ಜನ್ಮ ನೀಡುವ ಮೂಲಕ ತಮ್ಮ ಜನಸಂಖ್ಯೆ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ಭಾರತವು ಇಸ್ಲಾಮಿಕ್ ರಾಷ್ಟçವಾಗುವುದನ್ನು ತಪ್ಪಿಸಲು ಹಿಂದೂಗಳು ಹೆಚ್ಚಿನ ಮಕ್ಕಳಿಗೆ ಜನ್ಮ ನೀಡಬೇಕು ಎಂದು ಸಲಹೆ ನೀಡಿದರು. ಇದನ್ನೂ ಓದಿ: ದಲಿತರ ಓಲೈಕೆಗಾಗಿ SC, ST ಸಮಾವೇಶ ಮಾಡಿದ ರೇಣುಕಾಚಾರ್ಯ – ಮಹಿಳೆಯರೊಂದಿಗೆ ಸಖತ್ ಸ್ಟೆಪ್

RAMANAVAMI
ಸಾಂದರ್ಭಿಕ ಚಿತ್ರ

ಪ್ರಚೋದನಕಾರಿ ಭಾಷಣ ಮಾಡಿದ ಹಿನ್ನೆಲೆಯಲ್ಲಿ ಹಿಮಾಚಲ ಪ್ರದೇಶ ಪೊಲೀಸರು ಸರಸ್ವತಿ ಅವರಿಗೆ ಪೊಲೀಸ್ ಕಾಯ್ದೆ- 2007ರ ಸೆಕ್ಷನ್ 64ರ (ಕೂಮುಪ್ರಚೋದನಕಾರಿ ಭಾಷಣ) ಅಡಿಯಲ್ಲಿ ನೋಟಿಸ್ ಜಾರಿಗೊಳಿಸಿದೆ. ಸೂಚನೆಯನ್ನು ಪಾಲಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿಯೂ ಎಚ್ಚರಿಸಿದೆ.

Leave a Reply

Your email address will not be published.

Back to top button