ಹಾಸನ: ಹಿಂದೂ ದೇವಾಲಯ, ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ, ಹಲಾಲ್ ಕಟ್-ಜಟ್ಕಾ ಕಟ್ ವಿವಾದ ಬಳಿಕ, ಇದೀಗ ಮಾವಿನಹಣ್ಣು ಹೋಲ್‍ಸೇಲ್ ಮಾರ್ಕೆಟ್ ಹಿಂದೂಗಳ ಪಾಲಾಗಬೇಕೆಂದು ಹಿಂದೂ ಕಾರ್ಯಕರ್ತರು ಅಭಿಯಾನ ಆರಂಭಿಸಿದ್ದಾರೆ.
Advertisement
ಕೆಲ ದಿನಗಳ ಹಿಂದೆ ಹಿಂದೂ ದೇವಾಲಯ, ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ಹೇರಲಾಗಿತ್ತು. ನಂತರ ಯುಗಾದಿ ಹಬ್ಬದ ಹೊಸತೊಡುಕು ವೇಳೆ ಹಿಂದೂಗಳು ಮುಸಲ್ಮಾನರು ಮಾರುವ ಹಲಾಲ್ ಕಟ್ ಮಾಂಸವನ್ನು ಖರೀದಿಸಬಾರದು. ಬದಲಾಗಿ ಹಿಂದೂಗಳು ಮಾರುವ ಜಟ್ಕಾಕಟ್ ಮಾಂಸವನ್ನು ಕೊಳ್ಳಬೇಕು ಎಂದು ಹಿಂದೂ ಪರ ಸಂಘಟನೆಗಳು ಅಭಿಯಾನ ಆರಂಭಿಸಿದ್ದವು. ಅದರಂತೆ ಜಟ್ಕಾಕಟ್ ಅಭಿಯಾನ ಯಶಸ್ವಿಯಾಗಿತ್ತು. ಇದನ್ನೂ ಓದಿ: ಸತತ 15ನೇ ದಿನವೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ
Advertisement
Advertisement
ಸೋಮವಾರ ಮಸೀದಿಯಲ್ಲಿ ಸೌಂಡ್ ಬ್ಯಾನ್ ಅಭಿಯಾನ ಆರಂಭಿಸಿರುವ ಹಿಂದೂಪರ ಸಂಘಟನೆಗಳು ಇದೀಗ ಹಾಸದಲ್ಲಿ ಮಾವಿನಹಣ್ಣು ಹೋಲ್‍ಸೇಲ್ ಮಾರ್ಕೆಟ್ ಹಿಂದೂಗಳ ಪಾಲಾಗಬೇಕು ಎಂಬ ಪೋಸ್ಟರ್‍ಗಳನ್ನು ವಾಟ್ಸಪ್‍ನಲ್ಲಿ ಶೇರ್ ಮಾಡುವ ಮೂಲಕ ಹಿಂದೂ ಯುವಕರೇ ಮುಂದೆ ಬನ್ನಿ ಎಂಬ ಕರೆ ನೀಡಿ ಹೊಸ ಅಭಿಯಾನವನ್ನು ಆರಂಭಿಸಿದ್ದಾರೆ. ಸದ್ಯ ಈ ಪೋಸ್ಟರ್‍ಗಳು ವೈರಲ್ ಆಗುತ್ತಿದೆ. ಇದನ್ನೂ ಓದಿ: ಮೈಸೂರಿನಿಂದ ಬಂದ ರಾಯಲ್ ಎನ್‍ಫೀಲ್ಡ್ ಆಂಧ್ರದಲ್ಲಿ ಸ್ಫೋಟ