ಅಮರಾವತಿ: ಮೈಸೂರಿನಿಂದ ಆಂಧ್ರಪ್ರದೇಶಗೆ ಬಂದ ರಾಯಲ್ ಎನ್‍ಫೀಲ್ಡ್ ಬೈಕ್ ಸ್ಫೋಟಗೊಂಡ ಸುದ್ದಿ ಸಖತ್ ವೈರಲ್ ಆಗುತ್ತಿದೆ. ಘಟನೆಗೆ ಸಂಬಂಧಿಸಿದ ವೀಡಿಯೋಗಳು ಸಹ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಬುಲೆಟ್ ಎಂದೇ ಪ್ರಸಿದ್ಧವಾಗಿರುವ ರಾಯಲ್ ಎನ್ ಫೀಲ್ಡ್ ಬೈಕ್ ಮೈಸೂರಿನ ರವಿಚಂದ್ರನ್ ಖರೀದಿಸಿದ್ದಾನೆ. ಹೊಸ ಬೈಕ್ ಖರೀದಿಸಿದ ನಂತರ ರವಿಚಂದ್ರನ್ ಮೈಸೂರಿನಿಂದ ಆಂಧ್ರದ ಕುಂದಕಲ್ಲಿನಲ್ಲಿರುವ ಆಂಜನೇಯ ದೇವಸ್ಥಾನಕ್ಕೆ ಬೈಕ್‍ನಲ್ಲೇ ಬಂದಿದ್ದಾನೆ. ಇದನ್ನೂ ಓದಿ: ಮಸೀದಿಗಳಲ್ಲಿ ಧ್ವನಿವರ್ಧಕ ನಿಷೇಧ: ವಕ್ಫ್ ಮಂಡಳಿಯ ಸುತ್ತೋಲೆಯಲ್ಲಿ ಏನಿದೆ? ಸುಪ್ರೀಂ ಕೋರ್ಟ್ ಹೇಳಿದ್ದೇನು?
Advertisement
https://twitter.com/AlluHarish17/status/1510463748498022400?ref_src=twsrc%5Etfw%7Ctwcamp%5Etweetembed%7Ctwterm%5E1510463748498022400%7Ctwgr%5E%7Ctwcon%5Es1_&ref_url=https%3A%2F%2Fpipanews.com%2Froyal-enfield-bike-blast-in-andhra-video-became-viral-in-social-media%2F
Advertisement
ಮೈಸೂರಿನಿಂದ ಆಂಧ್ರಗೆ ಬೈಕ್ ಎಲ್ಲಿಯೂ ನಿಲ್ಲಿಸದೇ 387 ಕಿಲೋಮೀಟರ್‍ವರೆಗೂ ಕ್ರಮಿಸಿದ್ದಾನೆ. ಆಂಜನೇಯ ದೇಗುಲಕ್ಕೆ ಪೂಜೆಗೆಂದು ಬೈಕ್ ಪಾರ್ಕ್ ಮಾಡಿ ಒಳಗೆ ಹೋಗಿದ್ದಾನೆ. ಇತ್ತ ಬೈಕ್ ಪೆಟ್ರೋಲ್ ಟ್ಯಾಂಕ್ ಸ್ಫೋಟಗೊಂಡಿದ್ದು, ಬೆಂಕಿ ಹೊತ್ತಿಕೊಂಡಿದೆ.
Advertisement
Advertisement
ಈ ಘಟನೆಯಿಂದ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಆದರೆ ಬೈಕ್ ಸ್ಫೋಟಗೊಂಡಿದ್ದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇದನ್ನೂ ಓದಿ: SSLC ಪರೀಕ್ಷೆ ವೇಳೆ ಜೇನುನೊಣಗಳ ದಾಳಿ – ಐವರಿಗೆ ಗಾಂಭೀರ ಗಾಯ