ಬೆಂಗಳೂರು: ಗೆಳೆಯರಿಂದ ಕಾರು ಪಡೆದು ಓಎಲ್‌ಎಕ್ಸ್‌ನಲ್ಲಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.
ಕನಕಪುರ ರಸ್ತೆಯ ನಿವಾಸಿ ಚರಣ್ ರಾಜ್(30) ಬಂಧಿತ ಆರೋಪಿ. ಚರಣ್ ಬಳಿಯಿದ್ದ 12 ಕಾರುಗಳು ಹಾಗೂ 3 ಬೈಕ್‍ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
Advertisement
ವಂಚನೆ ಹೇಗೆ?
ಐಷಾರಾಮಿ ಕಾರು ಹೊಂದಿರುವ ವ್ಯಕ್ತಿಗಳನ್ನು ಹುಡುಕಿ ಸ್ನೇಹಿತರನ್ನಾಗಿ ಮಾಡಿಕೊಳ್ಳುತ್ತಿದ್ದ. ಚಾಟ್ ಮೂಲಕ ಹತ್ತಿರವಾಗಿ ಅವರನ್ನು ಮನಗೆ ಕರೆಯಿಸಿ ಕಾಫಿ ತಿಂಡಿ ನೀಡಿ ಅವರಲ್ಲಿ ವಿಶ್ವಾಸ ಗಿಟ್ಟಿಸುತ್ತಿದ್ದ. ಮೂರ್ನಾಲ್ಕು ತಿಂಗಳಲ್ಲಿ ತನ್ನ ಮಾತಿನ ಕೌಶಲ್ಯದಿಂದ ಮತ್ತಷ್ಟು ಹತ್ತಿರವಾಗುತ್ತಿದ್ದ.
Advertisement
Advertisement
ತನ್ನ ಬಲೆಗೆ ಸ್ನೇಹಿತ ಬೀಳುತ್ತಿದ್ದಾನೆ ಎನ್ನುವುದು ಅರಿವಾಗುತ್ತಿದ್ದಂತೆ ಫ್ಯಾಮಿಲಿ ಟ್ರಿಪ್ ಹೋಗಬೇಕು. ದಯವಿಟ್ಟು ನಿಮ್ಮ ಕಾರನ್ನು ಒಮ್ಮೆ ನೀಡುತ್ತೀರಾ ಎಂದು ಮನವಿ ಮಾಡುತ್ತಿದ್ದ. ಮಾಲೀಕರು ಈತನ ನಡತೆಯನ್ನು ಮೆಚ್ಚಿಕೊಂಡಿದ್ದರಿಂದ ಕಾರನ್ನು ನೀಡುತ್ತಿದ್ದರು. ಕಾರ್ ಪಡೆಯುತ್ತಿದ್ದಂತೆ ಆರೋಪಿ ಮೊಬೈಲ್ ಸ್ವಿಚ್ ಆಫ್ ಮಾಡುತ್ತಿದ್ದ. ಇತ್ತ ಕಾರು ಇಲ್ಲ ಮೊಬೈಲ್ ಕೂಡ ಸ್ವಿಚ್ ಆಫ್ ಎಂಬುದನ್ನು ಅರಿತ ಸಂತ್ರಸ್ತರು ಪೊಲೀಸರ ಮೊರೆ ಹೋಗುತ್ತಿದ್ದರು.
Advertisement
ಸಿಕ್ಕಿಬಿದ್ದಿದ್ದು ಹೇಗೆ?
ಇದೀಗ ಇದೇ ರೀತಿ ಮೋಸ ಹೋದ ರುದ್ರೇಶ್ ಎಂಬುವರು ಕಾಮಾಕ್ಷಿಪಾಳ್ಯ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿದ ಪೊಲೀಸರು ತನಿಖೆಗೆ ಇಳಿದು ಆರೋಪಿಯನ್ನು ಬಂಧಿಸಿದಾಗ ಓಎಲ್‌ಎಕ್ಸ್‌ನಲ್ಲಿ ಮಾರಾಟ ಮಾಡುತ್ತಿದ್ದ ಅಸಲಿ ವಿಚಾರ ಬೆಳಕಿಗೆ ಬಂದಿದೆ.
[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.biskuht.com/wp-content/plugins/wonderplugin-video-embed/engine/playvideo-64-64-0.png”]