ಬೆಳಗಾವಿ: ಕಳೆದ 1 ತಿಂಗಳಿನಿಂದ ಬೆಳಗಾವಿಯ ಗಾಲ್ಫ್ ಮೈದಾನದಲ್ಲಿ ಅಡಗಿ ಕುಳಿತುಕೊಂಡಿರುವ ಚಾಣಾಕ್ಷ ಚಿರತೆ ಇನ್ನೂ ಸೆರೆಯಾಗಿಲ್ಲ. ಆದರೆ ಕುಂದಾ ನಗರಿ ಜನರು ಮಾತ್ರ ಗಣೇಶನ ಜೊತೆಗೆ ಚಿರತೆಗೂ ದಿನನಿತ್ಯ ಪೂಜೆ ಸಲ್ಲಿಸುತ್ತಿದ್ದಾರೆ.
ಹೌದು, ಇಲ್ಲಿನ ವಿಶ್ವೇಶ್ವರಯ್ಯ ನಗರದ ಮನೆಯೊಂದರಲ್ಲಿ ಗಣೇಶನ ಮೂರ್ತಿ ಜೊತೆಗೆ ಚಿರತೆಯ ಗೊಂಬೆಯನ್ನು ಇಟ್ಟು ಪೂಜೆ ಸಲ್ಲಿಸಲಾಗುತ್ತಿದೆ.
Advertisement
Advertisement
ಕಳೆದೊಂದು ತಿಂಗಳ ಹಿಂದೆ ಜಾಧವ್ ನಗರದಲ್ಲಿ ಕಟ್ಟಡ ಕಾರ್ಮಿಕನ ಮೇಲೆ ದಾಳಿ ನಡೆಸಿ ಗಾಲ್ಫ್ ಮೈದಾನ ಸೇರಿದ ಚಿರತೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಂಪೂರ್ಣ ವಿಫಲವಾಗಿದೆ. 4-5 ಬಾರಿ ಚಿರತೆ ಜನರ ಕಣ್ಮುಂದೆ ಬಂದರೂ ಮಿಂಚಿನಂತೆ ಮರೆಯಾಗುತ್ತಿದೆ. ಹೀಗಾಗಿ ಕಳೆದ ಹಲವು ದಿನಗಳಿಂದ ಜನರು ಚಿರತೆ ಕುರಿತಾಗಿ ಬಗೆಬಗೆಯ ಟ್ರೋಲ್‌ಗಳನ್ನು ಮಾಡಿ ವೈರಲ್ ಮಾಡುತ್ತಿದ್ದಾರೆ. ಇದನ್ನೂ ಓದಿ: ಚಿನ್ನ ಗೆದ್ದ ಸೈಕಿಯಾ ಈಗ ಅಸ್ಸಾಂನಲ್ಲಿ ಡಿಎಸ್‌ಪಿ ಆಫೀಸರ್
Advertisement
ಇದೀಗ ವಿಶ್ವೇಶ್ವರಯ್ಯ ನಗರದ ನಿವಾಸಿಯೊಬ್ಬರು ಚಿರತೆ ಪೋಟೋ ಇಟ್ಟು ಪೂಜೆ ಮಾಡುತ್ತಿದ್ದಾರೆ. ಅದಲ್ಲದೇ ಗಣೇಶನ ದರ್ಶನಕ್ಕೆ ಕಾಡಿನಿಂದ ನಾಡಿಗೆ ಬಂದಿರುವ ಚಿರತೆಗೆ ಆಟವಾದರೆ, ಅರಣ್ಯ ಇಲಾಖೆ ಸಿಬ್ಬಂದಿಯ ಪರದಾಟ ಅಂತ ಪೋಸ್ಟರ್ ಬರೆದು ಅಂಟಿಸಲಾಗಿದೆ. ಇದರ ಜೊತೆಗೆ ಆಜಾದಿ ಕಾ ಅಮೃತ ಮಹೋತ್ಸವ, ಹರ್ ಘರ್ ತಿರಂಗಾ ಅಂತಲೂ ಬರೆಯಲಾಗಿದೆ.
Advertisement
ಒಟ್ಟಾರೆ ಕಳೆದ 1 ತಿಂಗಳಿನಿಂದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಗಲು, ರಾತ್ರಿ ಎನ್ನದೇ ಹುಡುಕಾಡಿದರೂ ಮಿಂಚಿನಂತೆ ಮರೆಯಾಗುತ್ತಿರುವ ಚಿರತೆಗೆ ಗಣೇಶನ ದರ್ಶನವಾಗಿದೆ. ಇನ್ನಾದರೂ ಚಿರತೆ ನಾಡಿಗೆ ಹೋಗುತ್ತಾ ಅನೋದನ್ನು ನೋಡಬೇಕಿದೆ. ಇದನ್ನೂ ಓದಿ: ಸರ್ಕಾರದಿಂದ ಬಿಡುಗಡೆ ಆಗದ ಹಣ – ಇಂದಿರಾ ಕ್ಯಾಂಟೀನ್‍ಗೆ ಬೀಗ