LatestMain PostNationalSports

ಚಿನ್ನ ಗೆದ್ದ ಸೈಕಿಯಾ ಈಗ ಅಸ್ಸಾಂನಲ್ಲಿ ಡಿಎಸ್‌ಪಿ ಆಫೀಸರ್‌

ಗುವಾಹಟಿ: ಕಾಮನ್‌ವೇಲ್ತ್‌ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಕ್ರೀಡಾಪಟು ನಯನ್ಮೋನಿ ಸೈಕಿಯಾ ಅವರಿಗೆ ಅಸ್ಸಾಂ ಸರ್ಕಾರ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್‌ಪಿ) ಹುದ್ದೆಯನ್ನು ನೀಡಿ ಪುರಸ್ಕರಿಸಿದೆ.

ಲಾನ್‌ ಬಾಲ್ಸ್‌ನಲ್ಲಿ ಚಿನ್ನಗೆದ್ದ ಟೀಂ ಇಂಡಿಯಾ ಸದಸ್ಯೆ ಸೈಕಿಯಾ ಅವರಿಗೆ ಸಿಎಂ ಹಿಮಂತ ಬಿಸ್ವಾ ಶರ್ಮಾ ಅವರು ಡಿಎಸ್‌ಪಿ ನೇಮಕಾತಿ ಪತ್ರ 50 ಲಕ್ಷರೂ. ಮೌಲ್ಯದ ಚೆಕ್‌ ನೀಡಿದರು. ಚಿನ್ನದ ಪದಕ ಗೆದ್ದ ಒಂದು ತಿಂಗಳ ಒಳಗಡೆ ಸರ್ಕಾರ ಸೈಕಿಯಾ ಅವರಿಗೆ ಸರ್ಕಾರಿ ಹುದ್ದೆಯನ್ನು ನೀಡಿದೆ.

ಕ್ರೀಡಾಪಟುಗಳನ್ನು ಉತ್ತೇಜಿಸಲು ಅಸ್ಸಾಂ ಸರ್ಕಾರ 2021ರ ಕ್ಯಾಬಿನೆಟ್‌ ಸಭೆಯಲ್ಲಿ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಒಲಿಂಪಿಕ್ಸ್‌, ಕಾಮನ್‌ವೆಲ್ತ್‌ ಗೇಮ್ಸ್‌, ಏಷ್ಯನ್‌ ಗೇಮ್ಸ್‌ ವಿಜೇತರಿಗೆ ವರ್ಗ-1, ಮಾನ್ಯತೆ ಪಡೆದ ವಿಶ್ವ ಚಾಂಪಿಯನ್‌ಶಿಪ್‌ನ ಪದಕ ವಿಜೇತರಿಗೆ ವರ್ಗ -2, ರಾಷ್ಟ್ರೀಯ ಕ್ರೀಡಾಕೂಟಗಳ ವಿಜೇತರಿಎ ವರ್ಗ 3 ರಲ್ಲಿ ಸರ್ಕಾರಿ ಉದ್ಯೋಗ ನೀಡುವುದಾಗಿ ಪ್ರಕಟಿಸಿತ್ತು. ಈ ನಿರ್ಧಾರದ ಭಾಗವಾಗಿ ನಯನ್ಮೋನಿ ಸೈಕಿಯಾಗೆ ಹುದ್ದೆ ಸಿಕ್ಕಿದೆ. ಇದನ್ನೂ ಓದಿ: ಅನ್ಯಧರ್ಮದ ಹುಡುಗಿಯೊಂದಿಗೆ ಪ್ರೇಮ – ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ

ಮಾಧ್ಯಮಗಳ ಜೊತೆ ಮಾತನಾಡಿದ ಸೈಕಿಯಾ, ನನಗೆ ಖುಷಿಯಾಗುತ್ತಿದೆ. ಅಸ್ಸಾಂ ಸರ್ಕಾರ ಉತ್ತಮ ಕ್ರೀಡಾ ನೀತಿಯನ್ನು ರೂಪಿಸಿದೆ. ಇದರಿಂದಾಗಿ ಹೊಸ ಪೀಳಿಗೆ ಕ್ರೀಡೆಯತ್ತ ಆಕರ್ಷಿತರಾಗಬಹದೆಂದು ನಾನು ಭಾವಿಸುತ್ತೇನೆ ಎಂದು ಹೇಳಿದರು.

ಆಗಸ್ಟ್ 2 ರಂದು ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ನಯನ್ಮೋನಿ ಸೈಕಿಯಾ, ರೂಪಾ ರಾಣಿ ಟಿರ್ಕಿ, ಲವ್ಲಿ ಚೌಬೆ ಮತ್ತು ಪಿಂಕಿ ಸಿಂಗ್ ಅವರಿದ್ದ ಲಾನ್‌ ಬಾಲ್ಸ್‌ ತಂಡ 17-10 ಅಂತರದಿಂದ ದಕ್ಷಿಣ ಆಫ್ರಿಕಾವನ್ನು  ಸೋಲಿಸಿ ಇದೇ ಮೊದಲ ಬಾರಿಗೆ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿತ್ತು.

Live Tv

Leave a Reply

Your email address will not be published.

Back to top button