ಕೇರಳ ರಾಜ್ಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿರುವ ‘ ದಿ ಕೇರಳ ಸ್ಟೋರಿ’ (The Kerala Story) ಟ್ರೈಲರ್ (Trailer) ಬಿಡುಗಡೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಕೇರಳದ ಸುಮಾರ 36 ಸಾವಿರ ಹುಡುಗಿಯರ ನಾಪತ್ತೆಯ ಹಿಂದಿರುವ ಕರಾಳ ಮುಖವನ್ನು ಈ ಸಿನಿಮಾದಲ್ಲಿ ತೋರಿಸಲು ಹೊರಟಿದ್ದು, ವಿದೇಶದಲ್ಲಿ ಕೆಲಸ ಕೊಡಿಸುವ ನೆಪದಲ್ಲಿ ಮತಾಂತರ ಹಾಗೂ ಐಸಿಸ್ ಉಗ್ರಗಾಮಿಗಳನ್ನು ಆಗಿಸುವ ಭಯಾನಕ ಸತ್ಯವನ್ನು ಈ ಸಿನಿಮಾ ತೆರೆದಿಡಲಿದೆಯಂತೆ.
Advertisement
ಧಾರ್ಮಿಕ ವಿಚಾರಗಳನ್ನು ಪ್ರಧಾನವಾಗಿಟ್ಟುಕೊಂಡು ಮಾಡಿದ್ದ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ನೂರಾರು ಕೋಟಿ ಬಾಚುತ್ತಿದ್ದಂತೆಯೇ ಫೈಲ್ಸ್ ಹೆಸರಿನಲ್ಲಿ ಕೆಲ ಸಿನಿಮಾಗಳು ಸೆಟ್ಟೇರಿದ್ದವು. ಅವುಗಳಲ್ಲಿ ಮಲಯಾಳಂ ಸಿನಿಮಾ ರಂಗದ ‘ದಿ ಕೇರಳ ಸ್ಟೋರಿ’ ಕೂಡ ಒಂದು. ಈ ಸಿನಿಮಾದ ಟೀಸರ್ ಈ ಹಿಂದಿ ರಿಲೀಸ್ ಆಗಿತ್ತು. ಆ ಹೊತ್ತಿನಲ್ಲಿ ಸಿನಿಮಾವನ್ನು ಬ್ಯಾನ್ ಮಾಡಬೇಕು ಎಂದು ಕೇರಳದ ಮುಖ್ಯಮಂತ್ರಿಗಳಿಗೆ ಕೆಲವರು ಮನವಿ ಮಾಡಿದ್ದರು.
Advertisement
Advertisement
ಕೇರಳದಿಂದ ವಿದೇಶಕ್ಕೆ ಉದ್ಯೋಗ ಅರಸಿಕೊಂಡು ಹೋದ ಮಹಿಳೆಯ ಕಥೆಯನ್ನು ಒಳಗೊಂಡಿರುವ ಈ ಸಿನಿಮಾದಲ್ಲಿ ವಿವಾದಿತ (Controversy) ಅಂಶಗಳು ಇವೆ ಎಂದು ವಿರೋಧ ವ್ಯಕ್ತವಾಗಿತ್ತು. ಬುರ್ಖಾ ಧರಿಸಿದ ಪ್ರಧಾನ ಪಾತ್ರಧಾರಿ ‘ನಾನು ಶಾಲಿನಿ, ನರ್ಸ್ ಆಗಿ ಜನಸೇವೆ ಮಾಡಬೇಕು ಅಂತಿದ್ದೆ. ಆದರೆ, ನಾನು ಫಾತಿಮಾ ಆಗಿ ಐಸಿಎಸ್ ಉಗ್ರಸಂಘಟನೆಗೆ ಸೇರಿಕೊಂಡು ಭಯೋತ್ಪಾದಕಿ ಆಗಿದ್ದೇನೆ’ ಈ ರೀತಿಯ ಸಂಭಾಷಣೆ ಇತ್ತು. ಇಂತಹ ಮಾತು ಮತ್ತು ಕಥೆ ವಿವಾದಕ್ಕೀಡಾಗಿತ್ತು. ಇದನ್ನೂ ಓದಿ:ಸಂಪತ್ ಪತ್ನಿ 5 ತಿಂಗಳ ಗರ್ಭಿಣಿ- ಸಹನಟನ ನೆನೆದು ಕಣ್ಣೀರಿಟ್ಟ ವೈಷ್ಣವಿ
Advertisement
ಇದರ ಜೊತೆಗೆ ಕೇರಳದಲ್ಲಿ ಮಹಿಳೆಯನ್ನು ವಿದೇಶಕ್ಕೆ ಕರೆದುಕೊಂಡು ಹೋಗಿ ಭಯೋತ್ಪಾದನೆ ಚಟುವಟಿಕೆಗೆ ಹಚ್ಚುವ ಸಂಘಟನೆಗಳು ಇವೆ ಎಂದು ಸಿನಿಮಾದಲ್ಲಿ ಹೇಳಲಾಗಿದೆ. ಇದರಿಂದಾಗಿ ಕೇರಳಕ್ಕೆ ಕೆಟ್ಟ ಹೆಸರು ತರುವ ಪ್ರಯತ್ನವನ್ನು ಸಿನಿಮಾದಲ್ಲಿ ಮಾಡಲಾಗಿದೆ. ಇಂತಹ ಚಿತ್ರಗಳು ಬಿಡುಗಡೆಯಾದರೆ, ದೇಶಕ್ಕೆ ಮತ್ತು ರಾಜ್ಯಕ್ಕೆ ಎಂತಹ ಕೆಟ್ಟ ಹೆಸರು ಬರಬಹುದು ಯೋಚಿಸಿ ಎಂದು ಹಲವು ರಾಜಕೀಯ ಮುಖಂಡರು ಸಿಎಂಗೆ ಬರೆದ ಪತ್ರದಲ್ಲಿ ತಿಳಿಸಿದ್ದರು.
ಈ ಸಿನಿಮಾವನ್ನು ಬ್ಯಾನ್ ಮಾಡುವ ಕುರಿತಾಗಿ ಮಾತನಾಡಿರುವ ಸಿನಿಮಾದ ನಿರ್ಮಾಪಕ ವಿಫುಲ್ ಶಾ, ‘ನಾವು ಸಿನಿಮಾದಲ್ಲಿ ಯಾವುದನ್ನೂ ಸುಳ್ಳು ಹೇಳಿಲ್ಲ. ಎಲ್ಲದಕ್ಕೂ ನಮ್ಮ ಹತ್ತಿರ ಸಾಕ್ಷಿ ಇವೆ. ಯಾರೇ ಪ್ರಶ್ನೆ ಮಾಡಿದರೂ ನಾವು ಉತ್ತರಿಸುತ್ತೇವೆ. ನಿಮಗೆ ಬೇಕಾಗಿರುವ ಸಾಕ್ಷಿ ಏನು ಅಂತ ವಿವರಿಸಿ’ ಎಂದಿದ್ದರು. ಇದು ಸತ್ಯದ ದರ್ಶನವಾಗಿದ್ದರಿಂದ ಸರಕಾರ ಬ್ಯಾನ್ ಮಾಡುವಂತಹ ಯೋಚನೆ ಮಾಡಲಾರದು ಎಂದು ವಿಶ್ವಾಸವನ್ನು ವ್ಯಕ್ತ ಪಡಿಸಿದ್ದರು.