ಬಾಲಿವುಡ್ (Bollywood) ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri) ಅಂದುಕೊಂಡ ಕನಸುಗಳೆಲ್ಲ ಹಳ್ಳ ಹಿಡಿಯುತ್ತಿವೆ. ದಿ ಕಾಶ್ಮೀರ್ ಫೈಲ್ಸ್ ಗೆಲುವು ಅವರಿಗೆ ದುಡ್ಡು ಮಾತ್ರ ತಂದುಕೊಟ್ಟಿದೆ. ಉಳಿದಂತೆ ಎಲ್ಲ ಕೆಲಸಗಳು ಅಂದುಕೊಂಡಂತೆ ನಡೆಯುತ್ತಿಲ್ಲ. ಹಾಗಾಗಿ ಸ್ವಲ್ಪ ದಿನ ಸುಮ್ಮನೆ ಇರಿ ಎನ್ನುತ್ತಿದ್ದಾರೆ ಅಭಿಮಾನಿಗಳು. ಏನೂ ಮಾತನಾಡದೇ ಸುಮ್ಮನಿದ್ದರೆ ಎಲ್ಲವೂ ಅಂದುಕೊಂಡಂತೆ ಆಗುತ್ತವೆ ಎಂದು ಅಭಿಮಾನಿಗಳು ಸಲಹೆ ನೀಡಿದ್ದಾರಂತೆ.
Advertisement
ಭಾರತದಲ್ಲಿ ಸಿನಿಮಾ ಸಕ್ಸಸ್ ಆದರೂ, ಬೇರೆ ದೇಶಗಳಲ್ಲಿ ಈ ಸಿನಿಮಾವನ್ನು ಬಿಡುಗಡೆ ಆಗದಂತೆ ತಡೆಯಲಾಯಿತು. ಅಲ್ಲದೇ, ವಿಶ್ವವಿದ್ಯಾಲಯವೊಂದರಲ್ಲಿ ಸಿನಿಮಾ ಬಗ್ಗೆ ಮಾತನಾಡಬೇಕಿದ್ದ ವಿವೇಕ್ ಅವರ ಭಾಷಣವನ್ನೇ ರದ್ದುಗೊಳಿಸಲಾಯಿತು. ಇದಕ್ಕೆಲ್ಲ ಕಾರಣ ಅವರು ಆಡುತ್ತಿರುವ ಮಾತುಗಳು ಎನ್ನಲಾಗುತ್ತಿದೆ. ಅಲ್ಲದೇ, ಬಾಲಿವುಡ್ ಸಿನಿಮಾ ರಂಗದ ಮೇಲೆ ಸಲ್ಲದ ಆರೋಪಗಳನ್ನೂ ಅವರು ಮಾಡುತ್ತಿದ್ದಾರೆ ಎನ್ನುವ ಕಾರಣಕ್ಕೂ ಅವರಿಗೆ ತೊಂದರೆ ಆಗುತ್ತಿವೆಯಂತೆ. ಇದನ್ನೂ ಓದಿ:ನೆಗೆಟಿವ್ ಕಾಮೆಂಟ್ ಗೆ ಹೆದರಲ್ಲ, ತುಂಬಾ ಜನ ನನ್ನನ್ನು ಪ್ರೀತಿಸ್ತಾರೆ ಎಂದ ಸೋನು ಶ್ರೀನಿವಾಸ್ ಗೌಡ
Advertisement
Advertisement
ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ನಟನೆಯ ಬ್ರಹ್ಮಾಸ್ತ್ರ (Brahmastra) ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್ ವಿಚಾರದಲ್ಲಿ ವಿವೇಕ್ ಅಗ್ನಿಹೋತ್ರಿ ಮೊನ್ನೆಯಷ್ಟೇ ಅವಮಾನ ಅನುಭವಿಸಿದ್ದಾರೆ. ಈ ವಿವಾದದಲ್ಲಿ ನಾನಿಲ್ಲವೆಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡು ದೂರವೇ ಉಳಿದರು. ಇನ್ಮುಂದೆ ಬಾಕ್ಸ್ ಆಫೀಸ್ ವಿಚಾರವನ್ನು ನಾನು ಮಾತನಾಡಲಾರೆ ಎಂದೂ ಅವರು ಹೇಳಿದ್ದಾರೆ. ಇದೀಗ ಮತ್ತೊಂದು ಹೊಡೆತ ಅವರಿಗೆ ಬಿದ್ದಿದೆ.
Advertisement
ಸೋಷಿಯಲ್ ಮೀಡಿಯಾದಲ್ಲಿ ದಿ ಕಾಶ್ಮೀರ್ ಫೈಲ್ಸ್ (The Kashmir Files) ಸಿನಿಮಾವನ್ನು ಆಸ್ಕರ್ (Oscar) ಪ್ರಶಸ್ತಿಗಾಗಿ ಕಳುಹಿಸಿ ಎಂದು ನೆಟ್ಟಿಗರು ಅಭಿಪ್ರಾಯ ಪಟ್ಟಿದ್ದರು. ಈ ಸಿನಿಮಾದ ಬಗ್ಗೆ ಕ್ಯಾಂಪೇನ್ ಕೂಡ ಮಾಡಲಾಗಿತ್ತು. ಬಹುತೇಕ ಇದೇ ಸಿನಿಮಾ ರೇಸ್ ನಲ್ಲಿ ಇರುತ್ತದೆ ಎಂದೂ ನಂಬಲಾಗಿತ್ತು. ಆದರೆ, ವಿವೇಕ್ ಆಡಿದ ಮಾತುಗಳಿಂದಾಗಿ ಆಸ್ಕರ್ ಅಂಗಳಕ್ಕೆ ಹೋಗಲು ಸಿನಿಮಾ ಸಾಧ್ಯವಾಗಿಲ್ಲ ಎನ್ನುತ್ತಿವೆ ಮೂಲಗಳು. ವಿದೇಶಿ ನೆಲದಲ್ಲಿ ಈ ರೀತಿಯ ಸಿನಿಮಾಗಳಿಗೆ ಎನ್ ಕ್ರೇಜ್ ಮಾಡುವುದಿಲ್ಲ ಎಂಬ ಅಭಿಪ್ರಾಯ ಬಂದಿರುವ ಹಿನ್ನೆಲೆಯಲ್ಲಿ ಕಳುಹಿಸಲು ಸಾಧ್ಯವಾಗಿಲ್ಲ ಎನ್ನುವುದು ಸದ್ಯಕ್ಕಿರುವ ಸುದ್ದಿ.
Live Tv
[brid partner=56869869 player=32851 video=960834 autoplay=true]
[brid partner=56869869 player=32851 video=960834 autoplay=true]