ವಿವೇಕ್ ಅಗ್ನಿಹೋತ್ರಿ ಅವರು ಕಾಶ್ಮೀರದಲ್ಲಿ ನಡೆದಿದ್ದ ಕಾಶ್ಮೀರ ಪಂಡಿತರ ಹತ್ಯೆಯನ್ನು ದಿ ಕಾಶ್ಮೀರ್ ಫೈಲ್ಸ್ ಹೆಸರಿನಲ್ಲಿ ಸಿನಿಮಾವಾಗಿಸಿದ್ದರು. ಅದು ಮಾನವ ಕ್ರೌರ್ಯದ ಪರಮಾವಧಿ, ಭೀಭತ್ಸ ಹಾಗೂ ಅಸಹ್ಯವನ್ನು ಬಿಚ್ಚಿಟ್ಟಿದ ಸಿನಿಮಾವಾಗಿತ್ತು. ಅಂದಿನ ಘನಘೋರ ಪರಿಸ್ಥಿತಿಯನ್ನು ಮನಮುಟ್ಟುವಂತೆ ಮಾತ್ರವಲ್ಲ, ಮನಸು ಘಾಸಿಗೊಳ್ಳುವಂತೆ ಸಿನಿಮಾದಲ್ಲಿ ಕಟ್ಟಿಕೊಡಲಾಗಿತ್ತು. ಇದೀಗ ಅದೇ ಕಾಶ್ಮೀರದ ಕರಾಳತೆ ಬಿಚ್ಚಿಡುವ ದಿ ಕಾಶ್ಮೀರ ಸಾಂಗ್ ಬಿಡುಗಡೆಗೆ ಸಜ್ಜಾಗಿದೆ. ಇದೇ ಶನಿವಾರ ಹಾಡು ಸಂಗೀತ ಪ್ರಿಯರ ಮಡಿಲು ಸೇರಲಿದೆ. ಈ ಬಗ್ಗೆ ಮಾಹಿತಿ ನೀಡಲು ಚಿತ್ರತಂಡ ಇತ್ತೀಚೆಗಷ್ಟೇ ಮಾಧ್ಯಮದವರ ಮುಂದೆ ಬಂದಿತ್ತು.
Advertisement
ಈ ಬಗ್ಗೆ ಮಾಹಿತಿ ಹಂಚಿಕೊಂಡ ನಟ ಕೋವಿದ್ ಮಿತ್ತಲ್, ಪ್ರತಿಯೊಬ್ಬರಿಗೂ ಈ ಹಾಡು ಇಷ್ಟವಾಗುತ್ತದೆ. ಕಾಶ್ಮೀರ ಹಿಂದೂಗಳಿಗೆ ಸಮರ್ಪಣೆ ಸಲ್ಲಿಸುವ ಹಾಡು ಎಂದರು. ನಿರ್ದೇಶಕ ಕ್ರಿಷ್ ಜೋಷಿ, ಶೇಖರ್ ಅಸ್ತಿತ್ವ ಎರಡು ದಿನದಲ್ಲಿ ಸಾಹಿತ್ಯ ಬರೆದುಕೊಟ್ಟಿದ್ದಾರೆ. ಸಾಂಗ್ ಕೈಗೆ ಸಿಕ್ಕಮೇಲೆ ಜೋಶ್ ಹೆಚ್ಚಾಯ್ತು. ಮನಾಲಿಯಲ್ಲಿ ಶೂಟ್ ಮಾಡಬೇಕು ಎಂಬ ಯೋಚನೆ ಇತ್ತು. ಆದ್ರೆ ಆಗಲಿಲ್ಲ. ಕಂಪ್ಲೀಟ್ ಎಮೋಷನ್ ಕಥೆ ಬಿಲ್ಡ್ ಮಾಡುವುದು ಕಷ್ಟವಾಯ್ತು. ಲೇಟ್ ಆಗಿ ಕಾಸ್ಟ್ಯೂಮ್ ಸಿಕ್ತು. ಫೈನಲಿ ಎಲ್ಲಾ ಕಷ್ಟ ಇಷ್ಟದೊಂದಿಗೆ ಸಾಂಗ್ ಕಂಪ್ಲೀಟ್ ಆಗಿದೆ ಎಂದರು. ಇದನ್ನೂ ಓದಿ: ಗಲ್ಲಾಪೆಟ್ಟಿಗೆ ಉಡೀಸ್ ಮಾಡಿದ `ಆರ್‌ಆರ್‌ಆರ್’ ಕಲೆಕ್ಷನ್: 1100 ಕೋಟಿ ಬಾಚಿದ ಚಿತ್ರ
Advertisement
Advertisement
ಶೇಖರ್ ಅಸ್ತಿತ್ವ ಸಾಹಿತ್ಯದ ದಿ ಕಾಶ್ಮೀರ್ ಹಾಡಿಗೆ ವೀರ್ ಸಮರ್ಥ್ ಸಂಗೀತ ನೀಡುವುದರ ಜೊತೆಗೆ ಧ್ವನಿಯಾಗಿದ್ದಾರೆ. ಕ್ರಿಶ್ ಜೋಷಿ ಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಮನು ಛಾಯಾಗ್ರಹಣ, ದೀಪಕ್ ಕೆ ರಾಜು ಸಂಕಲನ ಹಾಡಿಗಿದ್ದು, ಕೆಎಂ ಮೀಡಿಯಾ ಮತ್ತು ಪ್ರೊಡಕ್ಷನ್ ನಡಿ ನಿರ್ಮಾಣ ನಿರ್ವಹಣೆ ಸಾಗರ್ ಬರರ್ದಾಪುರೆ ಹೊತ್ತುಕೊಂಡಿದ್ದಾರೆ. ಆದಿತ್ಯ 25 ವರ್ಷದ ನಂತರ ತನ್ನ ತಾಯ್ನಾಡು ಕಾಶ್ಮೀರಕ್ಕೆ ಬಂದಾಗ ಹಳೆ ನೆನೆಪುಗಳನ್ನು ಮೆಲುಕು ಹಾಕುತ್ತಾ ಸಾಗುವ ಕಾಶ್ಮೀರದ ಕರಾಳತೆಯನ್ನು ವಿವರಿಸುವ ಹಾಡಿನಲ್ಲಿ ಕೋವಿದ್ ಮಿತ್ತಲ್ ಹಾಗೂ ವೀರ್ ಸಮರ್ಥ್ ನಟಿಸಿದ್ದಾರೆ.