BJPಯವರ ಭ್ರಷ್ಟಾಚಾರ ನೋಡಿದ್ರೆ ರಾಜ್ಯಕ್ಕೆ 10-15 ಪರಪ್ಪನ ಅಗ್ರಹಾರ ಜೈಲು ಬೇಕು: HDK

Advertisements

ಚಿಕ್ಕಬಳ್ಳಾಪುರ: ಬಿಜೆಪಿಯವರ ಭ್ರಷ್ಟಾಚಾರ ನೋಡಿದ್ರೆ, ರಾಜ್ಯಕ್ಕೆ ಒಂದು ಪರಪ್ಪನ ಆಗ್ರಹಾರ ಸಾಲುವುದಿಲ್ಲ, 10-15 ಪರಪ್ಪನ ಅಗ್ರಹಾರ ಜೈಲುಗಳು ಬೇಕು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

Advertisements

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಅವರು ಪಾಪ ಸಿಸೋಡಿಯಾನ ಇಡ್ಕೊಂಡು ಹೊರಟಿದ್ದೀರಿ. ಅದು ಅಬಕಾರಿ ಪಾಲಿಸಿಯಲ್ಲಿ ಒಂದು ಕೋಟಿ ವರ್ಗಾವಣೆ ಆಗಿದೆ ಅಂತ. ಹಾಗಾದ್ರೆ ಕರ್ನಾಟಕದಲ್ಲಿ ನೀವು ಏನು ಮಾಡ್ತಿದ್ದೀರಿ? ಅಂತಹ ಲಕ್ಷಾಂತರ ಕೇಸ್‌ಗಳನ್ನು ಉದಾಹರಣೆಯಾಗಿ ಕೊಡಬಹುದು ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಸ್ಥಾಪನೆಯಾಗಲಿದೆ 8 ವಿವಿ – ಕಾಯ್ದೆ ತಿದ್ದುಪಡಿಗೆ ಸಚಿವ ಸಂಪುಟ ಒಪ್ಪಿಗೆ

Advertisements

ಕರ್ನಾಟಕದಲ್ಲಿ ನಡಿತಿರೋ ಆಕ್ರಮಗಳು ಇ.ಡಿ, ಕೇಂದ್ರ ಸರ್ಕಾರ, ಅಥವಾ ಐಟಿ ಅವರಿಗೆ ಗೊತ್ತಿಲ್ವಾ? ಕೇಂದ್ರದ ಗೃಹ ಇಲಾಖೆಗೆ ಗೊತ್ತಿಲ್ವಾ? ಒಬ್ಬೊಬ್ಬ ಅಧಿಕಾರಿಯನ್ನ ನೇಮಕ ಮಾಡಲು ಮಂತ್ಲಿ ಲೆಕ್ಕಾಚಾರ ನಡೀತಿದೆ. ಬೌರಿಂಗ್ ಆಸ್ಪತ್ರೆಗೆ ಅಸಿಸ್ಟೆಂಟ್ ಪ್ರೋಫೆಸರ್ ನೇಮಕ ಮಾಡಬೇಕು ಅಂದ್ರೇನೆ 2 ವರ್ಷದ ಸ್ಯಾಲರಿ ಕೊಡಿ ಅಂತಾರೆ, ಅಪಾಯಿಂಟ್ ಮೆಂಟ್‌ಗೂ ದುಡ್ಡು ಕೊಡಿ ಅನ್ನೋ ದಾರಿದ್ರ್ಯ ಬಂದಿದೆ. ಇದೆಲ್ಲಾ ಕೇಂದ್ರ ಸರ್ಕಾರಕ್ಕೆ ಗೊತ್ತಿಲ್ವಾ? ಅನಾಗರೀಕವಾಗಿ ಸರ್ಕಾರ ನಡೆಯುತ್ತಿದೆ ಇಂತಹ ಲಕ್ಷಾಂತರ ಉದಾಹರಣೆ ಕೊಡಬಲ್ಲೆ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಸಾವಿನಲ್ಲೂ ಸಾರ್ಥಕತೆ ಮೆರೆದ ಕೂಲಿ ಕಾರ್ಮಿಕರು- ಮೃತಪಟ್ಟ 9 ಮಂದಿಯಲ್ಲಿ 6 ಜನರ ನೇತ್ರದಾನ

ಕರ್ನಾಟಕದಲ್ಲಿ ಬಿಜೆಪಿ ಅವರು ಮಾಡುತ್ತಿರೋ ಭ್ರಷ್ಟಾಚಾರ ನೋಡಿದ್ರೆ ರಾಜ್ಯದಲ್ಲಿ 1 ಪರಪ್ಪನ ಅಗ್ರಹಾರ ಜೈಲು ಸಾಲುವುದಿಲ್ಲ 10-15 ಪರಪ್ಪನ ಅಗ್ರಹಾರ ಜೈಲುಗಳು ಬೇಕಾಗುತ್ತದೆ ಎಂದು ಟೀಕಿಸಿದ್ದಾರೆ.

Advertisements

Live Tv

Advertisements
Exit mobile version