ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯ (Karnataka State Police) ಸಬ್ ಇನ್ಸ್‌ಪೆಕ್ಟರ್ (PSI) ಹುದ್ದೆಗಳಿಗೆ ಸೇರಿದಂತೆ ವಿವಿಧ ಇಲಾಖೆ ಹಾಗೂ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಮುಂಬರುವ ದಿನಗಳಲ್ಲಿ ನಡೆಸಲು ಉದ್ದೇಶಿಸಿರುವ ನೇಮಕಾತಿ ಪರೀಕ್ಷೆಗಳ ಸಂಭಾವ್ಯ ದಿನಾಂಕಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಇಂದು (ಮೇ 24) ಪ್ರಕಟಿಸಿದೆ.
ಪೊಲೀಸ್ ಇಲಾಖೆಯ 402 ಪಿಎಸ್‍ಐ ಹುದ್ದೆಗಳಿಗೆ ಸೆ.22ರಂದು ಪರೀಕ್ಷೆ ನಡೆಯಲಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಯತೀಂದ್ರಗೆ ಎಂಎಲ್‌ಸಿ ಟಿಕೆಟ್- ಸುಳಿವು ನೀಡಿದ ಸಿದ್ದರಾಮಯ್ಯ
Advertisement
ಉಳಿದಂತೆ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ (Kalyana Karnataka Road Transport Corporation)(ಸಹಾಯಕ ಲೆಕ್ಕಿಗ, ಸಹಾಯಕ ಸಂಚಾರ ನಿರೀಕ್ಷಕ, ಕ.ರಾ.ಸಾ.ಪೇದೆ, ಕುಶಲಕರ್ಮಿ, ತಾಂತ್ರಿಕ ಸಹಾಯಕ) 36 ಹುದ್ದೆಗಳಿಗೆ ಜು.12 ರಿಂದ 14ರವರೆಗೆ ಪರೀಕ್ಷೆಗಳು ನಡೆಯಲಿವೆ.
Advertisement
Advertisement
ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ (ಸಹಾಯಕ ಇಂಜಿನಿಯರ್-ಸಿವಿಲ್, ಪ್ರಥಮ ದರ್ಜೆ ಲೆಕ್ಕ ಸಹಾಯಕರು-ಗ್ರೂಪ್ ಸಿ) 64 ಹುದ್ದೆಗಳಿಗೆ ಆ.11 ರಂದು ಪರೀಕ್ಷೆ ನಿಗದಿಗೊಳಿಸಲಾಗಿದೆ.
Advertisement
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (BMTC) (ನಿರ್ವಾಹಕ- ದರ್ಜೆ-3 ಮೇಲ್ವಿಚಾರಕೇತರ) 2500 ಹುದ್ದೆಗಳಿಗೆ ಸೆ. 1ರಂದು ಪರೀಕ್ಷಾ ವೇಳಾಪಟ್ಟಿ ನಿಗದಿಯಾಗಿದೆ. ಕಂದಾಯ ಇಲಾಖೆಯ (ಗ್ರಾಮ ಆಡಳಿತ ಅಧಿಕಾರಿ) 1,000 ಹುದ್ದೆಗಳಿಗೆ ಅ.27ರಂದು ಪರೀಕ್ಷೆ ನಡೆಯಲಿದೆ.
ಕನ್ನಡ ಪರೀಕ್ಷೆ ಅನ್ವಯವಾಗುವ ಹುದ್ದೆಗಳಿಗೆ ಪರೀಕ್ಷೆ ನಡೆಯುವ ದಿನಾಂಕವನ್ನು ಮುಂಬರುವ ದಿನಗಳಲ್ಲಿ ತಿಳಿಸಲಾಗುತ್ತದೆ. ಪರೀಕ್ಷೆಗಳನ್ನು ಹೆಚ್ಚು ವ್ಯವಸ್ಥಿತ ರೀತಿಯಲ್ಲಿ ನಡೆಸುವುದಕ್ಕೆ ಪೂರಕವಾಗಿ ಈ ದಿನಾಂಕಗಳನ್ನು ಸಾಕಷ್ಟು ಮುಂಚಿತವಾಗಿ ಪ್ರಕಟಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಸ್ವಾತಿ ಮಲಿವಾಲ್ ಪ್ರಕರಣ – ಕೇಜ್ರಿವಾಲ್ ಆಪ್ತನಿಗೆ 4 ದಿನ ನ್ಯಾಯಾಂಗ ಬಂಧನ