ಜೊತೆ ಜೊತೆಯಲಿ (Jothe Jotheyali) ಧಾರಾವಾಹಿ ಅಂದಾಕ್ಷಣ ಥಟ್ಟನೆ ನೆನಪಾಗುವ ಹೆಸರು ಅನಿರುದ್ಧ ಮತ್ತು ಅವರು ನಿರ್ವಹಿಸುತ್ತಿದ್ದ ಆರ್ಯವರ್ಧನ್ ಪಾತ್ರ. ಸೀರಿಯಲ್ ಟೀಮ್ ಮತ್ತು ಅನಿರುದ್ಧ (Aniruddha) ಅವರ ಹೊಂದಾಣಿಕೆ ಕಾರಣದಿಂದಾಗಿ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಏನೆಲ್ಲ ಬದಲಾವಣೆ ಆಗಿವೆ. ಮೊದಲು ಅನಿರುದ್ಧ ಅವರನ್ನು ಧಾರಾವಾಹಿಯಿಂದ ಕೈ ಬಿಡಲಾಯಿತು. ಆ ಪಾತ್ರವನ್ನು ಕೊಲ್ಲುವ ಪ್ರಯತ್ನ ಮಾಡಲಾಯಿತು. ಹೊಸ ಕಲಾವಿದನನ್ನು ಆಯ್ಕೆ ಮಾಡಿ, ಹೈಡ್ರಾಮಾ ಮೂಲಕ ಅನಿರುದ್ಧ ಅವರ ಮುಖಕ್ಕೆ ಹರೀಶ್ ರಾಜ್ (Harish Raj) ತರಲಾಯಿತು.
Advertisement
ಈ ಡ್ರಾಮಾ ಅಲ್ಲಿಗೆ ಮುಗಿಯಲಿಲ್ಲ. ಮನೆಯಲ್ಲಿ ಹಾಕಲಾಗಿದ್ದ ಆರ್ಯವರ್ಧನ್(ಅನಿರುದ್ಧ) ಫೋಟೋವನ್ನು ತಗೆಸಿ ಹಾಕಲು ಮತ್ತೊಂದು ತಂತ್ರವನ್ನು ಹೂಡಲಾಯಿತು. ಅಲ್ಲಿಗೆ ಮನೆಯಲ್ಲಿದ್ದ ಅನಿರುದ್ಧ ಫೋಟೋವನ್ನು ತೆಗೆಸುವ ಮೂಲಕ ಧಾರಾವಾಹಿಯಿಂದ ಅನಿರುದ್ಧ ಅವರನ್ನು ಸಂಪೂರ್ಣ ಕೈ ಬಿಡಲಾಯಿತು. ಇದೀಗ ಆರ್ಯವರ್ಧನ್ ಅಂದಾಕ್ಷಣ ಥಟ್ಟನೆ ಅನಿರುದ್ಧ ನೆನಪಾಗುವುದರಿಂದ ಆ ಹೆಸರನ್ನೂ ಕೈ ಬಿಡುವ ಮತ್ತೊಂದು ತಂತ್ರಕ್ಕೆ ಟೀಮ್ ಮೊರೆ ಹೋಗಿದೆ. ಇದನ್ನೂ ಓದಿ:‘ಬಿಗ್ ಬಾಸ್’ ಮನೆಗೆ ಬ್ರಹ್ಮಾಂಡ ಗುರೂಜಿ ಹೋದರೆ ಮಜವಾಗಿರತ್ತೆ ಅಂತಿದ್ದಾರೆ ನೆಟ್ಟಿಗರು
Advertisement
Advertisement
ಆರ್ಯವರ್ಧನ್ (Aryavardhan) ಹೆಸರಿನ ಬದಲು ಈ ಪಾತ್ರಕ್ಕೆ ಸಂಜು ಎಂದು ಮರುನಾಮಕಾರಣ ಮಾಡಲಾಗುತ್ತಿದೆ. ಸ್ವತಃ ಆರ್ಯವರ್ಧನ್ ತಾಯಿಯೇ ಮನೆಯವರಿಗೆ ಇವನ ಮೂಲ ಹೆಸರು ಸಂಜು. ನನಗೆ ಸಂಜು ಹೆಸರು ತುಂಬಾ ಇಷ್ಟ. ಹಾಗಾಗಿ ಈತನಿಗೆ ಸಂಜು ಅಂತಾನೇ ಹೆಸರಿಟ್ಟಿದ್ದೆ ಎಂದು ಎಲ್ಲರಿಗೂ ಪರಿಚಯಿಸುತ್ತಾಳೆ. ಈ ಹೆಸರು ಕೇಳಿ ಅನು ಶಾಕ್ ಆಗುತ್ತಾಳೆ. ನಾನು ಇವನನ್ನು ಸಂಜು (Sanju) ಅಂತಾನೇ ಕರೀತೀನಿ ಎಂದು ತಾಯಿಯ ಮೂಲಕ ಹೇಳಿಸಿ, ಆರ್ಯವರ್ಧನ್ ಹೆಸರನ್ನೂ ಅಳಿಸಿ ಹಾಕುವಂತಹ ಪ್ರಯತ್ನವು ನಡೆದಿದೆಯಾ ಎನ್ನುವ ಅನುಮಾನ ಮೂಡದೇ ಇರದು.
Advertisement
ಕೇವಲ ತಾಯಿ ಮಾತ್ರ ಸಂಜು ಅನ್ನುತ್ತಾಳಾ ಅಥವಾ ಇಡೀ ಕುಟುಂಬವೇ ಆರ್ಯವರ್ಧನನ್ನು ಸಂಜು ಎಂದು ಕರೆಯುತ್ತಾ ಗೊತ್ತಿಲ್ಲ. ಸದ್ಯಕ್ಕಂತೂ ಪ್ರೇಕ್ಷಕರಿಗೆ ಇಂಥದ್ದೊಂದು ಅನುಮಾನ ಮೂಡಿದ್ದು ಸುಳ್ಳಲ್ಲ. ಇದು ತಂತ್ರವಾ? ಅಥವಾ ಕಥೆಯಲ್ಲಿ ಮತ್ತೇನೋ ಹೇಳುವ ಪ್ರಯತ್ನವಾ ಮುಂದಿನ ದಿನಗಳಲ್ಲಿ ತಿಳಿಯಲಿದೆ.