ಬೆಂಗಳೂರು: ಕ್ಷೇತ್ರ ಪುನರ್ ವಿಂಗಡಣೆ (Constituency Redistribution) ವಿಚಾರ ಇನ್ನೂ ಚರ್ಚಾ ಹಂತದಲ್ಲಿ ಇದೆ. ಯಾವ ರೀತಿ ಗೈಡ್‌ಲೈನ್ಸ್ ಬರುತ್ತದೆ ಅಂತ ನೋಡಿಕೊಂಡು ಚರ್ಚೆ ಮಾಡೋಣ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ (HD Kumaraswamy) ತಿಳಿಸಿದ್ದಾರೆ.
ಕ್ಷೇತ್ರ ಪುನರ್ ವಿಂಗಡಣೆಗೆ ಕಾಂಗ್ರೆಸ್ (Congress) ವಿರೋಧ ವಿಚಾರಕ್ಕೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಕ್ಷೇತ್ರ ಪುನರ್ ವಿಂಗಡಣೆ ಇನ್ನೂ ಪ್ರೀ ಮೆಚ್ಯೂರ್ ಹಂತದಲ್ಲಿ ಇದೆ. ಆದರೆ ದಕ್ಷಿಣದ ರಾಜ್ಯಗಳ ಕ್ಷೇತ್ರ ಕಡಿಮೆ ಆಗಬಹುದು ಎಂಬ ಭಾವನೆ ಎಲ್ಲರಿಗೂ ಇದೆ. ಜನಸಂಖ್ಯೆ ಆಧಾರ ತೆಗೆದುಕೊಂಡಾಗ ಲೋಕಸಭೆ ಸ್ಥಾನ ಕಡಿಮೆ ಆಗುವ ಚರ್ಚೆ ಅನೇಕ ದಿನಗಳಿಂದ ಚರ್ಚೆ ನಡೆಯುತ್ತಿದೆ. ಯಾವ ರೀತಿ ಗೈಡ್‌ಲೈನ್ಸ್ ಅಳವಡಿಕೆ ಮಾಡುತ್ತಾರೆ ಎಂದು ಮುಂದೆ ನೋಡೋಣ ಎಂದರು. ಇದನ್ನೂ ಓದಿ: ಡಿಕೆ ಶಿವಕುಮಾರ್ ಒಂದು ವಾರದಿಂದ ಭೂಮಿ ಮೇಲೆ ಇಲ್ಲದಂತೆ ಮಾತಾಡ್ತಿದ್ದಾರೆ: ಹೆಚ್‌ಡಿಕೆ
Advertisement
Advertisement
ಒಕ್ಕೂಟದ ವ್ಯವಸ್ಥೆಯಲ್ಲಿ ಯಾವುದೇ ರಾಜ್ಯಗಳಿಗೆ ಅನ್ಯಾಯ ಆಗಬಾರದು. ಸ್ವಾತಂತ್ರ‍್ಯ ಬಂದ ನಂತರದಿಂದ 50 ವರ್ಷ ದೇಶ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಮಾಡಿದೆ. ಎಲ್ಲಾ ಲೋಕಸಭೆ, ಸಂಪೂರ್ಣ ಬಹುಮತ ಕಾಂಗ್ರೆಸ್‌ಗೆ ಇತ್ತು. ಅದಾದ ನಂತರ ಕೆಲ ಬದಲಾವಣೆ ಆಗಿದೆ. ಈ ಕಾಂಗ್ರೆಸ್ ಅವರಿಗೆ ಸ್ವಲ್ಪ ಮನವರಿಕೆ ಆಗಿದೆ. ಏನೋ ತಪ್ಪು ಆಗಿದೆ ಎಂದು ಧ್ವನಿ ಎತ್ತಿದ್ದಾರೆ. ಯಾವ ರೀತಿ ಗೈಡ್‌ಲೈನ್ಸ್ ಬರುತ್ತೆ ನೋಡೋಣ. ದಕ್ಷಿಣ ಭಾರತದ ವಿಚಾರದಲ್ಲಿ ಯಾವ ರೀತಿ ವಾತಾವರಣ ನಿರ್ಮಾಣ ಆಗುತ್ತೋ ಹಾಗೆ ಚರ್ಚೆ ಮಾಡೋಣ ಎಂದು ತಿಳಿಸಿದರು. ಇದನ್ನೂ ಓದಿ: ಡಿಕೆಶಿ ವಾರ್ನಿಂಗ್‌ಗೆ ಹೆದರೋರು ಯಾರೂ ಇಲ್ಲ: ನಿಖಿಲ್ ಕುಮಾರಸ್ವಾಮಿ
Advertisement