ಬೆಂಗಳೂರು: ಶಿವಮೊಗ್ಗ ಟ್ರಯಲ್ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಲಾಗಿದೆ. ಬೆಂಗಳೂರಿನ ರಾಷ್ಟ್ರೀಯ ತನಿಖಾ ದಳ(NIA) ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದ್ದು, ಕದ್ರಿ ದೇವಸ್ಥಾನ ಬ್ಲಾಸ್ಟ್ ಮಾಡಲು ಪ್ಲಾನ್ ಮಾಡಿದ್ರು ಎಂದು ಎನ್‍ಐಎ ಅಧಿಕೃತವಾಗಿ ದೋಷಾರೋಪ ಪಟ್ಟಿಯಲ್ಲಿ ಹೇಳಿಕೊಂಡಿದೆ.
Advertisement
ಶಾರೀಖ್ (Shariq) ಮುಖಾಂತರ ಬ್ಲಾಸ್ಟ್ ಮಾಡಲು ಯತ್ನಿಸಿರೋದು ಬೆಳಕಿಗೆ ಬಂದಿದೆ. ಮಾಝ್, ಯಾಸಿನ್ ಮತ್ತು ಶಾರೀಖ್ ಸೇರಿದಂತೆ ಮೂವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದ್ದಾರೆ. ಮೂವರು ಸೇರಿ ಆಗುಂಬೆ ಮತ್ತು ವರಾಹಿ ನದಿ ಬಳಿ ಟ್ರಯಲ್ ಬ್ಲಾಸ್ಟ್ ಮಾಡಿದ್ರು, ಟ್ರಯಲ್ ಬ್ಲಾಸ್ಟ್ ಮಾಡಿ ಜನ ಸಾಮಾನ್ಯರ ಸಾವು ನೋವಿನ ಬಗ್ಗೆ ಲೆಕ್ಕಾಚಾರ ಹಾಕಿದ್ರು, ಅಲ್ಲದೇ 25ಕ್ಕೂ ಹೆಚ್ಚು ಪ್ರಯತ್ನಗಳನ್ನು ಮಾಡಿದ್ರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಮಗಳನ್ನ ಏರ್‌ಪೋರ್ಟ್‌ಗೆ ಬಿಟ್ಟು ಬರುವಾಗ ಕಾರು ಪಲ್ಟಿ- ಇಬ್ಬರು ಸಾವು
Advertisement
Advertisement
ಭಾರತವನ್ನು ಇಸ್ಲಾಮಿಕ್ ದೇಶವನ್ನಾಗಿ ಮಾಡೋದು ಉದ್ದೇಶ ಆಗಿತ್ತು, ಮೂವರು ಕೂಡ ಕ್ರಿಪ್ಟೋ ಕರೆನ್ಸಿ ಮೂಲಕ ವ್ಯವಹಾರ ನಡೆಸಿದ್ದಾರೆ, ಭಾರತದಲ್ಲಿ ವಿದ್ವಂಸಕ ಕೃತ್ಯ ನಡೆಸಲು ವಿದೇಶದಿಂದ ಹಣ ರವಾನೆ ಮಾಡುತ್ತಾ ಇದ್ದದ್ದು, ಅಲ್ಲದೇ ಆರೋಪಿ ಮಾಝ್ ಅಕೌಂಟ್‍ಗೆ 1 ಲಕ್ಷ 20 ಸಾವಿರ ಹಣ ಸಂದಾಯ ಮಾಡಲಾಗಿದೆ ಮತ್ತೋರ್ವ ಆರೋಪಿ ಸೈಯದ್ ಯಾಸಿನ್ ಅಕೌಂಟ್ 62 ಸಾವಿರ ಹಣ ಸಂದಾಯ ಮಾಡಲಾಗಿದೆ. ಸದ್ಯ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿರೋ ಎನ್ ಐ ಎ ದೋಷಾರೋಪ ಪಟ್ಟಿಯಲ್ಲಿ ಎಲ್ಲಾ ಮಾಹಿತಿ ಉಲ್ಲೇಖ ಮಾಡಲಾಗಿದೆ.