ಕೋಲಾರ: ಮುಂಜಾನೆ ಜವರಾಯನ ಅಟ್ಟಹಾಸಕ್ಕೆ ಇಬ್ಬರು ಬಲಿಯಾಗಿದ್ದಾರೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಲಕ್ಷ್ಮಿಪುರ ಕ್ರಾಸ್‍ನಲ್ಲಿ ಘಟನೆ ನಡೆದಿದ್ದು, ರಸ್ತೆಯ ಬಲ ಬದಿಯ ಆಳದ ಹಳ್ಳಕ್ಕೆ ಕಾರು (Car Accident) ಬಿದ್ದಿದೆ.
ಬೆಂಗಳೂರಿನಿಂದ ಮದನಪಲ್ಲಿಗೆ ತೆರಳುತ್ತಿದ್ದ ಶಫಿ ಹಾಗೂ ಶಾಮಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವಿದೇಶದಲ್ಲಿ ಕೆಲಸ ಮಾಡ್ತಿದ್ದ ಮಗಳನ್ನು ಬೆಂಗಳೂರಿನ ಏರ್‍ಪೋರ್ಟ್‍ಗೆ ಬಿಟ್ಟು ವಾಪಸ್ ಮನೆಗೆ ತೆರಳುತ್ತಿದ್ದ ವೇಳೆ ಘಟನೆ ನಡೆದಿದೆ. ಇದನ್ನೂ ಓದಿ: ಪಾಕಿಸ್ತಾನದಲ್ಲಿ ಅಗ್ನಿ ದುರಂತ – ಮನೆಯಲ್ಲಿ ಮಲಗಿದ್ದ 10 ಮಂದಿ ಸಜೀವ ದಹನ
ಕ್ರೇನ್ ಸಹಾಯದೊಂದಿಗೆ ಕಾರು ಮೇಲತ್ತಿದ ಪೊಲೀಸರು ಮೃತ ದೇಹಗಳನ್ನು ಹೊರ ತೆಗೆದಿದ್ದಾರೆ. ಮೃತ ದೇಹಗಳನ್ನು ಶ್ರೀನಿವಾಸಪುರ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ.